ಮನದಲ್ಲಿ ಸಂಸ್ಕೃತಿಯ ದೀಪ ಉರಿಸಬೇಕು=ಒಡಿಯೂರುಶ್ರೀ
ಬದಿಯಡ್ಕ: ಧರ್ಮ ಮತ್ತು ಸಂಸ್ಕೃತಿಗಳು ಸದಾ ಪ್ರವಹಿಸುತ್ತಲೇ ಇರುತ್ತದೆ. ಧರ್ಮ ಮತ್ತು ಸಂಸ್ಕೃತಿ ಪೂರಕವಾಗಿ ಹರಿದಾಗ ಮಾತ್ರ ಅಲ್ಲಿ ಕ್ಷೇಮ ನೆಲೆ ನಿಲ್ಲಲು ಸಾಧ್ಯ. ಸರಿಯಾದ ಸಂಸ್ಕಾರವನ್ನು ಕೊಡುವುದರ ಮೂಲಕ ಉತ್ತಮ ಬದುಕನ್ನು ಕಟ್ಟಿಕೊಡಬಹುದು. ಮನದಲ್ಲಿ ಸಂಸ್ಕೃತಿಯ ದೀಪವನ್ನು ಉರಿಸಬೇಕು ಎಂದು ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನದ ನುಡಿಗಳನ್ನಾಡಿದರು.
ಅವರು ಕಾಟುಕುಕ್ಕೆಯ ಪಡ್ಡಂಬೈಲು ಗುತ್ತಿನ ಧೂಮಾವತಿ ಹಾಗೂ ಪರಿವಾರ ದೈವಗಳ ಆಯುಧ ಪ್ರತಿಷ್ಠೆ ಹಾಗೂ ಧರ್ಮನೇಮೋತ್ಸವ ಕಾರ್ಯಕ್ರಮದ ಅಂಗವಾಗಿ ಇತ್ತೀಚೆಗೆ ನಡೆದ ಧಾಮರ್ಿಕ ಸಭೆಯಲ್ಲಿ ಆಶೀರ್ವಚನಗೈದು ಮಾತನಾಡಿದರು.
ದೀಪಕ್ಕೆ ಹೇಗೆ ಎಣ್ಣೆ ಹಾಕುವುದು ಮತ್ತು ಗಾಳಿಯಿಂದ ನಂದಿ ಹೋಗದಂತೆ ರಕ್ಷಿಸುವುದು ಮುಖ್ಯವೋ ಹಾಗೇ ಒಳಗಿನ ಸಂಸ್ಕಾರದ ಬೆಳಕನ್ನೂ ಉತ್ತಮ ಆಚಾರ ವಿಚಾರಗಳ ಮೂಲಕ ಸದಾ ಸಂರಕ್ಷಿಸಬೇಕಾದುದು ನಮ್ಮ ಕರ್ತವ್ಯ. ಸಂಸ್ಕಾರದ ದೀಪವನ್ನು ಮನದೊಳಗೆ ಉರಿಸಿಡುವ ಮೂಲಕ ಬದುಕನ್ನು ಬೆಳಗಿಸಲು ಸಾಧ್ಯ ಎಂದು ಶ್ರೀಗಳು ತಿಳಿಸಿದರು.
ಸಮಾರಂಭದಲ್ಲಿ ಉಪ್ಲೇರಿ ಮಂತ್ರ ಗುಳಿಗ ಸನ್ನಿಧಿಯ ಪ್ರಧಾನ ಕಮರ್ಿ, ಧಾಮರ್ಿಕ ಮುಂದಾಳು ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲ್ "ತುಳುನಾಡಿನ ಅಳಿಯಕಟ್ಟು ಸಂಸ್ಕೃತಿ" ಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸಗೈದು ಮಾತನಾಡಿದರು.
ಎಣ್ಮಕಜೆ ಗ್ರಾಮ ಪಂಚಾಯತು ಸದಸ್ಯೆ ಮಲ್ಲಿಕಾ ಜೆ ರೈ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಾಮಾಜಿಕ ಮುಂದಾಳು ಸಂಜೀವ ರೈ ಕೆಂಗಣಾಜೆ, ಹಿರಿಯ ಯಕ್ಷಗಾನ ಕಲಾವಿದ ಸಂಪಾಜೆ ಶೀನಪ್ಪ ರೈ, ಪಡ್ಡಂಬೈಲು ಗುತ್ತಿನ ಹಿರಿಯರಾದ ಶೇಷಪ್ಪ ರೈ, ಪಡ್ಡಂಬೈಲು ಗುತ್ತು ತರವಾಡು ಟ್ರಸ್ಟ್ನ ಅಧ್ಯಕ್ಷ ರಾಧಾಕೃಷ್ಣ ರೈ, ಕಾರ್ಯದಶರ್ಿ ಸತೀಶ್ ರೈ ಮೈರ ಸಭೆಯಲ್ಲಿ ಉಪಸ್ಥಿತರಿದ್ದರು. ಸುಬ್ಬಯ್ಯ ರೈ ಸ್ವಾಗತಿಸಿ ರಾಜೇಶ್ ರೈ ವಂದಿಸಿದರು. ತಾರಾನಾಥ ರೈ ಪಡ್ಡಂಬೈಲು ಗುತ್ತಿನ ಇತಿಹಾಸದ ಚಿತ್ರಣ ನೀಡಿ ಕಾರ್ಯಕ್ರಮವನ್ನು ನಿರ್ವಹಿಸಿದರು.