HEALTH TIPS

No title

                    ವಿ(ದ್ಯಾ)ದ್ರೋಹಿಗಳ ಅಟ್ಟಹಾಸ
         ಬಂದ್ಯೋಡು ಕುಕ್ಕಾರು ಶಾಲೆಯಲ್ಲಿ ಹಳೆ ವಿದ್ಯಾಥರ್ಿಗಳು ಕೊಡುಗೆಯಾಗಿ ನೀಡಿದ್ದ ಕುಡಿ ನೀರು ಟ್ಯಾಪ್ ಸಹಿತ ತರಗತಿಗಳ ಬಾಗಿಲು ಕಳವು
    ಉಪ್ಪಳ: ಬಂದ್ಯೋಡು ಸಮೀಪದ ಕುಕ್ಕಾರು ಸರಕಾರಿ ಹಯರ್ ಸೆಕೆಂಡರಿ ಶಾಲೆಯಲ್ಲಿನ ನೀರಿನ ಟ್ಯಾಪ್ ಸಹಿತ ಶಾಲಾ ಕೊಠಡಿಯ ಬಾಗಿಲು ಕಳವುಗೈದ ಘಟನೆ ನಡೆದಿದೆ. ಪ್ರತೀ ಬಾರಿಯು ಶಾಲಾ ರಜಾವಧಿಯಲ್ಲಿ ಕಳವು ಪ್ರಕರಣ ಸಹಿತ ಪಿಠೋಪಕರಣಗಳನ್ನು ಪುಡಿಗಟ್ಟುವ ಪ್ರಕರಣ ನಡೆಯುತ್ತಿದ್ದು, ಇತ್ತೀಚೆಗೆ ಕುಡಿ ನೀರು ಪೂರೈಕೆಯ ಟ್ಯಾಪ್ಗಳನ್ನು ಕಳವುಗೈದು ಸಮಾಜ ದ್ರೋಹಿಗಳು ಅಟ್ಟಹಾಸ ಮೆರೆದಿದ್ದಾರೆ. ಶಾಲೆಗೆ ಹಳೆ ವಿದ್ಯಾಥರ್ಿಗಳು ಕೊಡುಗೆಯಾಗಿ ನೀಡಿದ್ದ 15 ನೀರಿನ ನಳ್ಳಿಗಳನ್ನು ತಿರುವಿ ಕೊಂಡೊಯ್ಯಲಾಗಿದೆ ಎಂದು ಶಾಲಾ ಮುಖ್ಯ ಶಿಕ್ಷಕಿ ಕೆ.ಲತಾ ಆರೋಪಿಸಿದ್ದಾರೆ. ಸಮಾಜ ವಿದ್ರೋಹಿಗಳು ರಜಾ ಸಮಯವಾದ ವೇಳೆ ಕಿಟಕಿ ಹಾಗೂ ಶಾಲೆಯ ಮುಖ್ಯ ದ್ವಾರವನ್ನು ಕಳಚಿ ಒಳ ಪ್ರವೇಶಿಸಿದ್ದಾರೆ. ಮಂಗಳವಾರ ಘಟನೆ ಸಂಭವಿಸಿದ್ದು, ಕುಂಬಳೆ ಠಾಣಾಧಿಕಾರಿ ಶಿವದಾಸನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೋಧಿಸಿದ ಬಳಿಕ ಕಳ್ಳತನದ ಪ್ರಕರಣ ದಾಖಲಿಸಿಕೊಂಡಿದ್ದು, ವಿದ್ರೋಹಿಗಳ ಕೈವಾಡದ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ.
   ಕುಕ್ಕಾರು ಸರಕಾರಿ ಶಾಲೆಯ ಸಮೀಪ ಪ್ರದೇಶದಲ್ಲಿ ವಾಸಿಸುವ ಸಮಾಜ ಘಾತುಕರ ಕುಕೃತ್ಯ ಇದಾಗಿದೆ ಎಂದು ಮುಖ್ಯೋಪಾದ್ಯಾಯಿನಿ ಕೆ.ಲತಾ ಆರೋಪಿಸಿದ್ದಾರೆ. ಪೋಲಿಸರು ಶಾಲೆಯಲ್ಲಿ ವಾಚ್ಮೆನ್ ನೇಮಿಸುವಂತೆ ಸೂಚಿಸಿದ್ದಾರೆ. ಆದರೆ ಸರಕಾರಿ ಶಾಲೆಯಲ್ಲಿ ವಾಚಮೆನ್ ನೇಮಿಸಿದಲ್ಲಿ ಆತನಿಗೆ ಸಂಬಳ ಕೊಡುವವರು ಯಾರು ಎಂಬ ಪ್ರಶ್ನೆ ಮೂಡುತ್ತದೆ. ಶಾಲೆಯನ್ನು ಕಾಯಲು ಓರ್ವ ಸಿಬ್ಬಂದಿಯನ್ನು ನೇಮಿಸಿದರೂ ಅಪಾಯ ತಪ್ಪಿದ್ದಲ್ಲ ಎನ್ನುತ್ತಾರೆ ಮುಖ್ಯ ಶಿಕ್ಷಕಿ. ಶಾಲೆಯಲ್ಲಿನ ವಿದ್ಯಾಥರ್ಿಗಳ ಅತ್ಯವಶ್ಯ ನೀರು ಪೂರೈಕೆಗಾಗಿ ಕಳೆದ ಓಣಂ ಸಂದರ್ಭ 1998-99 ಸಾಲಿನ ಹಳೆ ವಿದ್ಯಾಥರ್ಿಗಳು ನಳ್ಳಿಗಳನ್ನು ಕೊಡುಗೆಯಾಗಿ ನೀಡಿದ್ದರು. ಇತ್ತೀಚೆಗೆ ಎ.7ರಂದು ಅದೇ ನಳ್ಳಿಯಿಂದ ತಾನು ಸಹ ನೀರು ಕುಡಿದಿದ್ದೆ ಎಂದು ಮುಖ್ಯ ಶಿಕ್ಷಕಿ ಲತಾ ಹೇಳಿದ್ದಾರೆ. 9 ಮತ್ತು 11 ತರಗತಿಯ ಹೊಸ ಬಾಗಿಲುಗಳನ್ನು ಡಿಸೆಂಬರ್ ವೇಳೆ ದುಷ್ಕಮರ್ಿಗಳು ಕಿತ್ತಿದ್ದು ನಂತರ ಮರು ಜೋಡಿಸಲಾಗಿತ್ತು, ಈ ಬಾರಿ ಆ ಎರಡು ಬಾಗಿಲುಗಳನ್ನು ಕಿತ್ತೊಯ್ಯಲಾಗಿದೆ. ಪ್ರತೀ ಬಾರಿಯ ರಜಾ ಅವಧಿಯ ನಂತರ ಶಾಲೆಯಲ್ಲಿ ಸುಮಾರು 40 ರಿಂದ 50 ಬೆಂಚುಗಳನ್ನು ದುರಸ್ಥಿ ಕೆಲಸ ಮಾಡುವಂತಾಗಿದೆ. ದಾರಂದದಿಂದ ಬೇರ್ಪಡಿಸಿದ ಬಾಗಿಲು ಮತ್ತು ಕಿಟಕಿಯನ್ನು ದುಷ್ಕಮರ್ಿಗಳು ಕಿತ್ತು ಒಡೆದಿದ್ದು ಪ್ರಸ್ತುತ ಶಾಲೆಗೆ ಕಿಟಕಿ ಮುಚ್ಚಿಗೆಯೆ ಇಲ್ಲದಂತಾಗಿದೆ ಎಂದು ಅಳಲು ತೋರ್ಪಡಿಸಿದ್ದಾರೆ ಕುಕ್ಕಾರು ಹಯರ್ ಸೆಕೆಂಡರಿ ಶಾಲೆಯ ಮುಖ್ಯ ಶಿಕ್ಷಕಿ ಕೆ. ಲತಾ.
   ಶಾಲೆಯ ಮೇಲೆ ಸಮಾಜ ದ್ರೋಹಿಗಳ ಅಟ್ಟಹಾಸವನ್ನು ಹೊರತುಪಡಿಸಿದರೆ ಶಾಲೆಯು ಉತ್ತಮ ಫಲಿತಾಂಶ ನೀಡುತ್ತಿದ್ದು, ಕನ್ನಡ ಮಲಯಾಳಂ ಸಹಿತ ಆಂಗ್ಲ ಮಾಧ್ಯಮವಿದೆ. ಐದರಿಂದ ಹತ್ತನೇ ತರಗತಿ ತನಕ ಒಟ್ಟು 768 ಮಂದಿ ವಿದ್ಯಾಥರ್ಿಗಳಿದ್ದಾರೆ. 8 ನೇ ತರಗತಿಯಿಂದ ಹತ್ತನೇ ತರಗತಿಯ ತನಕ ಒಟ್ಟು 3 ಡಿವಿಶನ್ಗಳಿವೆ. ರಜಾವಧಿಯಲ್ಲಿ ಅನ್ಯ ಜಿಲ್ಲೆಯ ಅಧ್ಯಾಪಕರು ತಂತಮ್ಮ ಊರಿಗೆ ತೆರಳುತ್ತಾರೆ. ರಜಾವಧಿಯಲ್ಲಿ ಇಂತಹ ಕುಕೃತ್ಯಗಳು ಹೆಚ್ಚಾಗುತ್ತಿವೆ. ಪಹರೆ ಪೋಲಿಸರಿಗೂ ಕೂಡಾ ಸಮಾಜ ಘಾತುಕರನ್ನು ಕಂಡು ಹಿಡಿಯಲು ಸಾಧ್ಯವಾಗಿಲ್ಲ ಎಂದು ಮುಖ್ಯೋಪಾಧ್ಯಾಯಿನಿ ಅಳಲು ತೊಡಿಕೊಂಡಿದ್ದಾರೆ. ಪೀಠೋಕರಣಗಳನ್ನು ಪ್ರಸ್ತುತ ದುರಸ್ಥಿ ಮಾಡಲು ಸಾಧ್ಯವಿಲ್ಲ. ಶಾಲಾರಂಭದ ಸಮಯ ಜೂನ್ ತಿಂಗಳಲ್ಲಿ ಬಡಗಿಗಳನ್ನು ಕರೆಸಿ ದುರಸ್ಥಿ ಕಾರ್ಯ ಕೈಗೆತ್ತಿಕೊಳ್ಳಲಾಗುವುದು ಎಂದು ಮುಖ್ಯೋಪಾಧ್ಯಾಯಿನಿ ತಿಳಿಸಿದ್ದಾರೆ.
   


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries