ಬೆತ್ತಲಾದರೂ ಬತ್ತದಿದು ಬೆರಗು - ಪ್ರಕೃತಿ ವೈಚಿತ್ರ್ಯ
ಕುಂಬಳೆ: ಪ್ರಸ್ತುತ ವರ್ಷ ವಾಡಿಕೆಗಿಂತ ಹೆಚ್ಚು ಮಾವಿನ ಫಲ ಸಮೃದ್ದವಾಗಿ ಕಂಡುಬರುತ್ತಿದ್ದು, ಖಾಸಗೀ ಒಡೆತನದ ನಿವೇಶನಗಳ ಸಹಿತ ಸಾರ್ವಜನಿಕ ರಸ್ತೆಗಳ ಬದಿಯ ಮಾಮರಗಳೆಲ್ಲ ಫಲಬಿಟ್ಟು ಮಾವು ಪ್ರೀಯರ ಉತ್ಸಾಹಕ್ಕೆ ಕಾರಣವಾಗಿದೆ. ಬೇಸಿಗೆಯ ಶಾಲಾ ರಜೆಗಳು ಆರಂಭಗೊಳ್ಳುತ್ತಿರುವಂತೆ ಗ್ರಾಮೀಣ ಪ್ರದೇಶಗಳ ಹುಡುಗರ ತಂಡಗಳೂ ಮಾಮರದ ಅಡಿಯಲ್ಲಿ ಬೀಡುಬಿಟ್ಟಿರುವುದೂ, ಹೆಕ್ಕುವುದೂ ಕಂಡುಬರುತ್ತಿದೆ.
ಈ ಮಧ್ಯೆ ಸೀತಾಂಗೋಳಿ ಪೆಟ್ರೋಲ್ ಪಂಪ್ ಸನಿಹದ ಮಾಮರವೊಂದು ಸಂಪೂರ್ಣ ಎಲೆಯುದಿರಿಸಿದ್ದರೂ ಕಂಗೊಳಿಸುವ ಮಾವಿನ ಕಾಯಿಗಳಿಂದ ಎಲ್ಲರನ್ನು ಸೆಳೆಯುತ್ತಿರುವುದು ಚೋದ್ಯಕ್ಕೆ ಕಾರಣವಾಗಿದೆ.