HEALTH TIPS

ಯಾವುದೇ ಶೀರ್ಷಿಕೆಯಿಲ್ಲ

              ಕೇಂದ್ರದಿಂದ ರೂ.7.41 ಲಕ್ಷ ಕೋಟಿ ಜಿಎಸ್ಟಿ, ರೂ.20 ಸಾವಿರ ಕೋಟಿ ಮೊತ್ತದ ಸೆಸ್ ಸಂಗ್ರಹ
    ನವದೆಹಲಿ: ಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ) ಜಾರಿಯ ನಂತರ ಕಳೆದ ಆಗಸ್ಟ್ ನಿಂದ ಮಾಚರ್್ 2018ರವರೆಗೆ ಭಾರತದಲ್ಲಿ 7.41 ಲಕ್ಷ ಕೋಟಿ ರೂಪಾಯಿ ತೆರಿಗೆ ಸಂಗ್ರಹವಾಗಿದೆ.
     ಹಣಕಾಸು ವರ್ಷ ಕೊನೆಯ ಮಾಚರ್್ 31ರ ಹೊತ್ತಿಗೆ ಜಿಎಸ್ ಟಿ ಸಂಗ್ರಹ 7.41 ಟ್ರಿಲಿಯನ್ ನಷ್ಟಾಗಿದೆ ಎಂದು ಹಣಕಾಸು ಸಚಿವಾಲಯ ಹೇಳಿದೆ. ಕಳೆದ ಆಥರ್ಿಕ ಸಾಲಿನ ಮಧ್ಯಭಾಗದಲ್ಲಿ ಸರಕು ಮತ್ತು ಸೇವಾ ತೆರಿಗೆ ಜಾರಿಯಾಗಿದ್ದು ಕೇವಲ 9 ತಿಂಗಳ ತೆರಿಗೆ ಸಂಗ್ರಹದ ಕುರಿತು ಲೆಕ್ಕ ಹಾಕಲಾಗಿದೆ. 2017-18ರಲ್ಲಿ ಆಗಸ್ಟ್ ನಿಂದ ಮಾಚರ್್ ವರೆಗೆ ಒಟ್ಟು ಆದಾಯ ಸಂಗ್ರಹ 7.19 ಲಕ್ಷ ಕೋಟಿಯಷ್ಟಾಗಿದೆ. ಅವುಗಳಲ್ಲಿ 1.19 ಲಕ್ಷ ಕೋಟಿ ಸಿಜಿಎಸ್ ಟಿ, 1.72 ಲಕ್ಷ ಕೋಟಿ ಎಸ್ ಜಿಎಸ್ ಟಿ, 3.66 ಲಕ್ಷ ಕೋಟಿ ಐಜಿಎಸ್ ಟಿ ಮತ್ತು 62,021 ಕೋಟಿ ರೂಪಾಯಿ ಸೆಸ್ ಸಂಗ್ರಹವಾಗಿದೆ ಎಂದು ಹಣಕಾಸು ಸಚಿವಾಲಯದ ಹೇಳಿಕೆ ತಿಳಿಸಿದೆ.
    ಕಳೆದ ಮಾಚರ್್ ತಿಂಗಳೊಂದರಲ್ಲಿಯೇ 24,000 ಕೋಟಿ ರೂಪಾಯಿ ಹೆಚ್ಚುವರಿ ತೆರಿಗೆ ಸಂಗ್ರಹವಾಗಿದೆ. ಅದು ಕಳೆದ ಎಂಟು ತಿಂಗಳಲ್ಲಿ ತಿಂಗಳ ಸರಾಸರಿ ಸಂಗ್ರಹ 89,000 ಕೋಟಿ ರೂ.ಗಳಷ್ಟಿತ್ತು.
   ಪ್ರಸಕ್ತ ಹಣಕಾಸು ವರ್ಷದಿಂದ ಸಕರ್ಾರ ನಗದು ಆಧಾರಿತ ಲೆಕ್ಕಪತ್ರ ನಿರ್ವಹಣೆಗೆ ವಗರ್ಾಯಿಸುತ್ತಿದ್ದು ಅಲ್ಲಿ ಒಂದು ತಿಂಗಳ ಪೂರ್ಣಗೊಂಡ ಆದಾಯವನ್ನು ದಾಖಲಿಸಲಾಗುತ್ತದೆ. ಅದಕ್ಕನುಗುಣವಾಗಿ ಏಪ್ರಿಲ್ ನ ಸಂಗ್ರಹ ಮೇ 1ಕ್ಕೆ ಬಿಡುಗಡೆಯಾಗಲಿದೆ. ಸರಕು ಮತ್ತು ಸೇವಾ ತೆರಿಗೆ ಜಾರಿಗೆ ಬಂದ ಕಳೆದ ವರ್ಷ ವ್ಯವಸ್ಥೆಯ ಸ್ಥಿರೀಕರಣಕ್ಕೆ ಆದ್ಯತೆ ನೀಡಲಾಗಿತ್ತು. ಈ ಹಣಕಾಸು ವರ್ಷದಿಂದ ಹಣಕಾಸು ಇಲಾಖೆಯ ಗಮನ ಅನುಸರಣೆ ಮತ್ತು ಅದರಲ್ಲಿನ ನ್ಯೂನತೆಗಳನ್ನು ಸರಿಪಡಿಸುವುದಾಗಿದೆ. ಈ ವರ್ಷ ತೆರಿಗೆ ಸಂಗ್ರಹ ಇನ್ನಷ್ಟು ಏರಿಕೆಯಾಗುವ ನಿರೀಕ್ಷೆಯಿದೆ ಎಂದು ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries