HEALTH TIPS

No title

          ಪೈಶಾಚಿಕತೆಗೆ ಹೀಗೊಂದು ಸೆಡ್ಡು-ಮಗಳಿಗೆ ಆಸಿಫಾಳ ಹೆಸರಿಟ್ಟ ಪತ್ರಕರ್ತ
     ಬದಿಯಡ್ಕ: ಮಗಳಿಗೆ ಆಸಿಫಾಳ ಹೆಸರಿಟ್ಟ ಪತ್ರಕರ್ತ ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಅಭಿನಂದನೆಗಳಿಗೆ ಕಾರಣನಾಗಿದ್ದಾನೆ.  ಕ್ರೂರ ಘಟನೆಯ ಮೂಲಕ ದೇಶವಾಸಿಗಳ ಮನಸನ್ನು ಘಾಸಿಗೊಳಿಸಿದ ಘಟನೆಯ ಮಧ್ಯೆ ಮಗಳಿಗೆ ಕಾಶ್ಮೀರಿ ಹೆಣ್ಣು ಮಗುವಿನ ಹೆಸರನ್ನಿಟ್ಟು ಪತ್ರಕರ್ತನೋರ್ವ ಹೊಸ ಸಂಚಲನವನ್ನು ಮೂಡಿಸಿದ್ದಾನೆ.  ಘಟನೆಯನ್ನು ಖಂಡಿಸಿ ತನ್ನ ಮಗಳಿಗೆ ಆಸಿಫಾಳ ಹೆಸರನ್ನು ನಾಮಕರಣ ಮಾಡುವ ಮೂಲಕ ನ್ಯಾಯಕ್ಕಾಗಿ ರಂಗಕ್ಕೆ ಇಳಿದಿದ್ದಾನೆ.
   ಫೇಸ್ಬುಕ್ ಪೇಜ್ ಮೂಲಕ ಮಗಳಿಗೆ ಆಸಿಫಾ ಎಸ್.ರಾಜ್ ಎನ್ನುವ ಹೆಸರಿಟ್ಟಿರುವುದಾಗಿ ತಿಳಿಸಿರುವ ಪತ್ರಕರ್ತ ನೀಲೇಶ್ವರ ನಿವಾಸಿ ರಜಿತ್ರಾಂ ಎಲ್ಲರ ಮೆಚ್ಚುಗೆಗೆ ಪಾತ್ರರಾದ ವ್ಯಕ್ತಿ. ಮಲೆಯಾಳದ ಪ್ರಮುಖ ದೈನಿಕ ಮಾತೃಭೂಮಿಯ ಕಣ್ಣೂರು ವಿಭಾಗದ  ಉಪ ಸಂಪಾದಕರಾಗಿರುವ ರಜಿತ್ರಾಂ ಮಲಯಾಳಂ ಪೋಸ್ಟ್ ಈಗ ವೈರಲಾಗಿದೆ. ಅಮಾನುಷವಾಗಿ ಕೊಲೆಗೈಯಲ್ಪಟ್ಟ ಕಾಶ್ಮೀರಿ ಬಾಲಕಿಗೆ ನ್ಯಾಯದೊರಕಬೇಕು ಎಂಬ ಏಕದೃಷ್ಠಿಯಿಂದ ತಾನು ಈ ನಿಧರ್ಾರ ಕೈಗೊಂಡಿದ್ದೇನೆ ಎಂದು ರಜಿತ್ರಾಂ ತಿಳಿಸಿದ್ದಾರೆ. ದೂರದ ಕಾಶ್ಮೀರದಲ್ಲಿಯೂ ರಜಿತ್ರಾಂ ಪೋಸ್ಟ್ ಸುದ್ದಿ ಮಾಡಿದ್ದು ಪ್ರಶಂಸೆ ಮತ್ತು ಚಚರ್ೆಗೂ ಕಾರಣವಾಗಿದೆ.
  "ಹೆಸರಿಟ್ಟೆ; ಅದೇ, ಅದೇ ಹೆಸರು.ಆಸಿಫಾ ಎಸ್.ರಾಜ್. ನನ್ನ ಮಗಳವಳು" ಎಂದು ರಜಿತ್ರಾಂ ತನ್ನ ಪುಟ್ಟ ಮಗಳ ಪೋಟೊದೊಂದಿಗೆ ಪೋಸ್ಟ್ ಅಪ್ಲೋಡ್ ಮಾಡಿದ್ದಾರೆ. ಪೋಸ್ಟ್ ಮಾಡಿದ ಕೆಲವೇ ನಿಮಿಷಗಳಲ್ಲಿ 25,000 ಲೈಕ್ಸ್, 16,024 ದಷ್ಟು ಶೇರ್ ಆಗಿದೆ.ಫೆಬ್ರವರಿ ತಿಂಗಳಲ್ಲಿ ರಜಿತ್ರಾಂ ನ ಎರಡನೇ ಮಗಳು ಜನಿಸಿದ್ದು.ಮಗಳಿಗೆ ನಾಮಕರಣ ಮಾಡಲು ಹೆಸರು ಹುಡುಕುತ್ತಿದ್ದ ಸಂದರ್ಭ ಎಂಟು ವರ್ಷದ ಬಾಲೆ ಆಸಿಫಾಳ ಘಟನೆ ಬೆಳಕಿಗೆ ಬಂದಿದ್ದು, ಆ ಹೆಸರೇ ಸೂಕ್ತ ಮತ್ತು ಸಮಂಜಸ ಎನ್ನುವ ದೃಷ್ಟಿಯಿಂದ ತಾನು ಮಗಳಿಗೆ ಈ ಹೆಸರಿಟ್ಟೆ ಎಂದು ರಜಿತ್ರಾಂ ಹೇಳಿದ್ದಾರೆ.
   ಮಾನವೀಯತೆ, ಅಂತಃಕರಣದ ಮಿಡಿತದ ತೀವ್ರ ಹಿನ್ನಡೆಯ ಪೈಶಾಚಿಕತೆಯಿಂದ ಮುಂದಿನ ಸಮಾಜವನ್ನು ರಕ್ಷಿಸಿ ಮುನ್ನಡೆಸುವ ಹೊಣೆಯಿರುವ ಪತ್ರಕರ್ತನಾದ ತಾನು ಅಕ್ಷರಗಳ ಜೊತೆಗೆ ಹೀಗೂ ಮಾರ್ಧನಿಗೊಳ್ಳಲು, ಎಚ್ಚರಿಸಲು ಬಯಸುತ್ತೇನೆ ಎಂಬುದು ರಜಿರಾಂ ಅಂಬೋಣ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries