HEALTH TIPS

No title

                  ತೌಳವ ಸಾಂಸ್ಕೃತಿಕತೆಯ ದಾಖಲೀಕರಣವಾಗಬೇಕು-ಮಲಾರ್ ಜಯರಾಮ ರೈ
      ಪೆರ್ಲ: ರಾಷ್ಟ್ರದ ಹೆಮ್ಮೆಯ ಸಂಸ್ಕೃತಿಯಾದ ತುಳುವರು ಪ್ರಕೃತಿ ಆರಾಧಕರು. ಶ್ರೀಮಂತ ಸಾಂಸ್ಕೃತಿಕ ಹಿನ್ನೆಲೆಯ ತೌಳವ ಭಾಷೆ, ಆಚರಣೆಗಳನ್ನು ಮುನ್ನಡೆಸುವಲ್ಲಿ ಯೋಜನಾಬದ್ದ ಕಾರ್ಯಚಟುವಟಿಕೆಗಳಾಗಬೇಕು ಎಂದು ಹಿರಿಯ ಪತ್ರಕರ್ತ ಮಲಾರ್ ಜಯರಾಮ ರೈ ಕರೆನೀಡಿದರು.
   ಕೇರಳ ತುಳು ಆಕಾಡಮಿ ನೇತೃತ್ವದಲ್ಲಿ ಶನಿವಾರ ಪೆರ್ಲ ಶ್ರೀಸತ್ಯನಾರಾಯಣ ಶಾಲಾ ಪರಿಸರ ಆಯೋಜಿಸಲಾಗಿದ್ದ ಬಿಸುಪರ್ಬ ಆಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
  ತುಳು ಭಾಷೆ ಸಂವಿಧಾನದ 8ನೇ ಪರಿಚ್ಚೇದಕ್ಕೆ ಸೇರಿಸಲು ತುಳುವರು ಇನ್ನಷ್ಟು ಪ್ರಬಲರಾಗಬೇಕಿದೆ. ತುಳು ಭಾಷಾ ಪಠ್ಯವನ್ನು ತುಳುಲಿಪಿಯಲ್ಲೇ ಅಭ್ಯಸಿಸುವಂತಾಗಬೇಕು ಎಂದು ಅವರು ತಿಳಿಸಿದರು. ತುಳು ಸಂಸ್ಕೃತಿಯ ಪ್ರಾಚೀನ ನಂಬಿಕೆ ಆಚರಣೆಗಳ ದಾಖಲೀಕರಣದ ಬಗ್ಗೆ ಅಕಾಡೆಮಿ ಕಾರ್ಯಪ್ರವೃತ್ತರಾಗಬೇಕು. ಇದು ಮುಂದಿನ ಕಾಲಘಟ್ಟದ ಮಹತ್ವದ ದಾಖಲೆಗಳಾಗಿ ಬೇರುಗಳ ಸತ್ವವನ್ನು ತಿಳಿಸುವಲ್ಲಿ ಮಾರ್ಗದಶರ್ಿಯಾಗುವುದೆಂದು ಅವರು ಈ ಸಂದರ್ಭ ತಿಳಿಸಿದರು.
   ಕವಯಿತ್ರಿ ರಾಜಶ್ರೀ ಟಿ.ರೈ ಅಧ್ಯಕ್ಷತೆ ವಹಿಸಿದ್ದರು. ತುಳು ಆಕಾಡಮಿ ಕಾರ್ಯದಶರ್ಿ ಬಾಲಕೃಷ್ಣ ಶೆಟ್ಟಿಗಾರ್, ವಿಶ್ವ ತುಳುವೆರೆ ಆಯನೋ ಸಂಘಟಕ  ಡಾ.ರಾಜೇಶ್  ಆಳ್ವ ಬದಿಯಡ್ಕ, ತುಳು ಆಕಾಡಮಿ ಸದಸ್ಯ ರಾಧಾಕೃಷ್ಣ ಕೆ.ಉಳಿಯತ್ತಡ್ಕ, ತುಳು ಆಕಾಡಮಿ ಸದಸ್ಯ ರಾಮಕೃಷ್ಣ ಕಡಂಬಾರ್, ಮಾಜಿ ಜಿಲ್ಲಾ ಪಂಚಾಯತು ಸದಸ್ಯ ಶಂಕರ ರೈ ಮಾಸ್ತರ್, ಶಂಕರ ಎಂ.ಎಸ್, ಎಣ್ಮಕಜೆ  ಗ್ರಾ.ಪಂ.ಆರೋಗ್ಯ ಮತ್ತು ಶೈಕ್ಷಣಿಕ ಸ್ಥಾಯೀ ಸಮಿತಿ ಅಧ್ಯಕ್ಷೆ ಆಯಿಷಾ ಎ.ಎ ಮೊದಲಾದವರು ಉಪಸ್ಥಿತರಿದ್ದು ಮಾತನಾಡಿದರು. ಹಿರಿಯ ಕವಿ,ಸಾಹಿತಿ ಹರೀಶ್ ಪೆರ್ಲ, ಬರಹಗಾರ ಎಸ್.ಎನ್ ಭಟ್, ಯುವ ಕವಿ ಮಣಿರಾಜ್ ವಾಂತಿಚ್ಚಾಲ್, ಯುವ ಕವಯಿತ್ರಿ ಚೇತನಾ ಕುಂಬಳೆ ಇವರಿಂದ  ತುಳು ಕವನ ವಾಚನ ನಡೆಯಿತು.ಆಕಾಡಮಿ ನೇತೃತ್ವದಲ್ಲಿ  ಬಹುಮುಖ ಬಾಲಪ್ರತಿಭೆ ಸನ್ನಿಧಿ ಟಿ ರೈ ಮತ್ತು ರಂಗ ನಿದರ್ೇಶಕ ಉದಯ ಸಾರಂಗ್ ಅವರನ್ನು ಅಭಿನಂದಿಸಲಾಯಿತು. ಶಂಕರ ಸ್ವಾಮಿ ಕೃಪಾ ನೇತೃತ್ವದ  ಬೊಳಿಕೆ  ಜಾನಪದ ನೃತ್ಯ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ತುಳು ಆಕಾಡಮಿ ಸದಸ್ಯೆ ಸಚಿತ ರೈ ಸ್ವಾಗತಿಸಿ, ಸ್ವಾಗತ ಸಮಿತಿ ಅಧ್ಯಕ್ಷ  ರಾಮಕೃಷ್ಣ ರೈ ಕುದ್ವ ವಂದಿಸಿದರು.
   

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries