HEALTH TIPS

No title

              ಪುರುಷರ ಕರ್ತವ್ಯ ಪ್ರಜ್ಞೆ ಜಾಗೃತಿಗೆ ಮಾತೆಯರು ದೈರ್ಯತುಂಬಬೇಕು-ಸಾದ್ವಿ ಬಾಲಿಕಾ ಸರಸ್ವತಿ.
      ಬದಿಯಡ್ಕ: ರಾಷ್ಟ್ರದಲ್ಲಿ ಓಟ್ ಬ್ಯಾಂಕ್ ರಾಜಕೀಯ ಸಂಪೂರ್ಣ ಕೊನೆಗೊಂಡು ಮಣ್ಣಿನ ಸತ್ವ-ತತ್ವಕ್ಕೆ, ಧರ್ಮ ನಿಮರ್ಾಣಕ್ಕೆ ಜನಸಾಮಾನ್ಯರು ಒಂದಾಗಬೇಕು.ರಾಷ್ಟ್ರದ ಅಸ್ಮಿತೆಯಾದ ಗೋವು, ಜನ ಮಾನಸದ ಕನಸಾದ ರಾಮ ನಿಮರ್ಾಣ ನಿಮರ್ಾಣದ ಕನಸು ನನಸಾಗಬೇಕು ಎಂದು ಪ್ರಖರ ಹಿಂದೂ ವಾಗ್ಮಿ ಸಾದ್ವಿ ಬಾಲಿಕಾ ಸರಸ್ವತಿ ಕರೆನೀಡಿದರು.
   ಅವರು ಬದಿಯಡ್ಕದಲ್ಲಿ ಶುಕ್ರವಾರ ಸಂಜೆ ವಿಹಿಂಪ-ಬಜರಂಗದಳ ಬದಿಯಡ್ಕ ಪ್ರಖಂಡ ಆಯೋಜಿಸಿದ ಬೃಹತ್ ಹಿಂದೂ ಸಮಾಜೋತ್ಸವದಲ್ಲಿ ದಿಕ್ಸೂಚಿ ಭಾಷಣಗೈದು ನೆರೆದ ಅಸಂಖ್ಯ ಜನರನ್ನು ಉದ್ದೇಶಿಸಿ ಮಾತನಾಡಿದರು.
  ಅಯೋಧ್ಯೆ ದೇಶದ ಧರ್ಮದ ಆಸ್ಮಿತೆಯಾಗಿದೆ. ಮಯರ್ಾದಾ ಪುರುಷ ಶ್ರೀರಾಮ ಚಂದ್ರನನ್ನು ಗೌರವಿಸುವ ರಾಮಮಂದಿರ ನಿಮರ್ಾಣವನ್ನು ಯಾರಿಂದಲೂ ತಡೆಯಲಾಗದು. ಬಾಬರ್ ಎಂಬ ದುಷ್ಟ ರಾಜನ ಹೆಸರಲ್ಲಿ ದೇಶದ ಯಾವುದೇ ಮೂಲೆಯಲ್ಲೂ ಮಸೀದಿ ನಿಮರ್ಾಣ ತಡೆಯಬೇಕಿದೆ ಎಂದರು. ದೇಶದಲ್ಲಿ ಯುದ್ಧ ಬೀತಿ ಸೃಷ್ಟಿಗೆ ಪಾಕಿಸ್ಥಾನ ಶ್ರಮಿಸುತ್ತಿದೆ, ವೀರ ಸೈನಿಕರನ್ನು ಅಪಹರಿಸಿ ರುಂಡ ಬೇರ್ಪಡಿಸಿ ಅಮಾನುಷವಾಗಿ ಕೊಲೆಗೈಯ್ಯುವ ಕೃತ್ಯ ನೋಡಿ ಸಮ್ಮನೆ ಕೂರುವವರು ನಾವಲ್ಲ ಎಂದರು.
    ಈ ಮಧ್ಯೆ ಲವ್ ಜಿಹಾದ್ ನಂತಹ ಪಿಡುಗನ್ನು ತೊಲಗಿಸಬೇಕಿದೆ, ರಕ್ಷಾ ಬಂಧನ ಮಾಡುವ ಸಹೋದರಿಯ ರಕ್ಷಣೆಯ ಜವಾಬ್ದಾರಿ ಹಿಂದೂ ಸಹೋದರರ ಮೇಲಿದೆ. ರಕ್ಷಾ ಬಂಧನದಂದು ಸಿಹಿ ಬಟ್ಟೆಯನ್ನು ಹಂಚುವ ಸಹೋದರರು ಸಹೋದರಿಗೆ ಖಡ್ಗವನ್ನು ನೀಡುವ ಮೂಲಕ ಧೈರ್ಯವನ್ನು ತುಂಬಬೇಕಿದೆ ಎಂದರು. ಅತೀ ಹೆಚ್ಚು ಗೋವಧೆ ನಡೆಯುವ ಕೇರಳದಲ್ಲಿ ಕಠಿಣ ಕಾನೂನಿನ ಮೂಲಕ ಗೋಹತ್ಯೆಗೆ ಅಂಕುಶ ಹಾಕಬೇಕಿದೆ. ಗೋಹತ್ಯೆ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಿದೆ ಎಂದರು.
ಹಿಂದೂ ಸಮಾಜದ ಸಂಸ್ಕೃತಿ ಆಚರಣೆಗಳು ಪವಿತ್ರವಾದುದು. ವಿಶ್ವಗುರುವಿನ ಸ್ಥಾನ ಅಲಂಕರಿಸಿರುವ ಭಾರತ ದೇಶ ಸನಾತನ ಪರಂಪರೆಯನ್ನು ಪ್ರತಿಬಿಂಬಿಸುತ್ತದೆ ಎಂದು ಸಾದ್ವಿ ತಿಳಿಸಿದರು. ದೇಶದಲ್ಲಿ ಭಯೋತ್ಪಾದನೆ, ಗೋಹತ್ಯೆ, ಲವ್ ಜಿಹಾದ್ ಮೂಲಕ ಅರಾಜಕತೆಯನ್ನು ಸೃಷ್ಟಿಗೆ ರಾಜಕೀಯ ಲಾಭ  ಗಿಟ್ಟಿಸಲು ಪ್ರಯತ್ನಿಸುವ ರಾಜಕೀಯ ಪಕ್ಷಗಳನ್ನು ಕಟುವಾಗಿ ಟೀಕಿಸಿದರು. ಓಟ್ ಬ್ಯಾಂಕ್ಗೋಸ್ಕರ ರಾಜಕೀಯ ಪ್ರೇರಿತ ಕೊಲೆ ರಾಜಕಾರಣವನ್ನು ವಿರೋಧಿಸಿದರು.
   ತಾಯಂದಿರು ಮಕ್ಕಳಿಗೆ ಉತ್ತಮ ಸಂಸ್ಕಾರವನ್ನು ನೀಡಬೇಕು. ಗುರುಹಿರಿಯರನ್ನು ಆದರಿಸಿ, ಗೌರವಿಸುವಂತಹ ಸಂಸ್ಕಾರ. ಧಾಮರ್ಿಕ ಆಚರಣೆಗಳ ಮಹತ್ವದ ಬಗ್ಗೆ ಮಕ್ಕಳು ಹೆಮ್ಮೆಪಡುವಂತೆ ಮಾಡಬೇಕಿದೆ. ಶಿವಾಜಿ, ಭಗತ್ ಸಿಂಗ್ ಮಕ್ಕಳ ಆದಶ್ಪುರುಷರಾಗಬೇಕು, ದೇಶದ ವೀರ ಸೈನಿಕರು ಮಕ್ಕಳ ಪ್ರೇರಣಾಶಕ್ತಿಯಾಗಬೇಕಿದೆ ಎಂದರು.
    ಬೃಹತ್ ಸಂಖ್ಯೆಯ ಜನಸ್ತೋಮ:
   ಐತಿಹಾಸಿಕ ಹಿನ್ನೆಲೆಯ ಬದಿಯಡ್ಕದ ಬೋಳುಕಟ್ಟೆ ಮೈದಾನದಲ್ಲಿ ನಡೆದ ಅತ್ಯಪೂರ್ವ ಬೃಹತ್ ಹಿಂದೂ ಸಮಾಜೋತ್ಸವದಲ್ಲಿ ಪಾಲ್ಗೊಳ್ಳಲು ಬೃಹತ್ ಸಂಖ್ಯೆಯ ಜನರು ಪಾಲ್ಗೊಂಡಿದ್ದರು. 40 ಸಾವಿರಕ್ಕಿಂತಲೂ ಮಿಕ್ಕಿದ ಜನಸ್ತೋಮ "ಭೋಲೋ ಭಾರತ್ ಮಾತಾಕಿ...." ಮುಂತಾದ ಘೋಷಣೆಗಳನ್ನು ಕೂಗಿ ವಿಶೇಷ ವಾತಾವರಣ ನಿಮರ್ಿಸಿದರು. ಇದಕ್ಕೂ ಮುನ್ನ ಪೆರಡಾಲ ನವಜೀವನ ಶಾಲಾ ಪರಿಸರದಿಂದ ಬೃಹತ್ ಸಂಖ್ಯೆಯ ಜನರು ಸಮಾಜೋತ್ಸವ ನಗರಿಗೆ ವಾದ್ಯಘೋಷಗಳೊಂದಿಗೆ ಮೆರವಣಿಗೆ ನಡೆಸಿತು.
    ನೀರು, ಮಜ್ಜಿಗೆ ವಿತರಣೆ:
   ಬೃಹತ್ ಸಂಖ್ಯೆಯಲ್ಲಿ ನೆರೆದಿದ್ದ ಜನಸ್ತೋಮ ಉರಿಬಿಸಿಲನ್ನೂ ಲೆಕ್ಕಿಸದೆ ಪಾಲ್ಗೊಂಡಿದ್ದರು. ಈ ಸಂದರ್ಭ ದಾಹ ನಿವಾರಣೆಗೆ ವಿಹಿಂಪ, ಭಜರಂಗದಳ ಕಾರ್ಯಕರ್ತರು ಮಜ್ಜಿಗೆ ಹಾಗೂ ನೀರನ್ನು ನಿರಂತರವಾಗಿ ವಿತರಿಸಿದರು.ಕೇಸರಿ ಬಣ್ಣಗಳ ವಸ್ತ್ರಗಳನ್ನು ಧರಿಸಿದ ಯುವಕ-ಯುವತಿಯರ ತಂಡ ನಿರಂತರ ಸೇವಾ ಚಟುವಟಿಕೆಯ ಮೂಲಕ ಜನಪ್ರೀತಿಗೆ ಕಾರಣರಾದರು.
   ದೀನಬಂಧುವಿಗೆ ಗೌರವ:
   ಅಸಂಖ್ಯ ದೀನರ ಸಂಕಷ್ಟಗಳಿಗೆ ಧ್ವನಿಯಾಗಿ ಆಶ್ರಯದಾತರಾದ ದೀನಬಂಧು ಸಾಯಿರಾಂ ಗೋಪಾಲಕೃಷ್ಣ ಭಟ್ ಸಮಾಜೋತ್ಸವದಲ್ಲಿ ಪಾಲ್ಗೊಳ್ಳುವ ಮೂಲಕ ಗಮನ ಸೆಳೆದರು. ಅವರನ್ನು ಸಮಾಜೋತ್ಸವದ ವೇದಿಕೆಯಲ್ಲಿ ಡಾ.ಕಲ್ಲಡ್ಕ ಪ್ರಭಾಕರ ಭಟ್ ಶಾಲುಹೊದೆಸಿ ಗೌರವಿಸಿದರು. ಈ ಸಂದರ್ಭ ಮಾತನಾಡಿದ ಡಾ.ಕಲ್ಲಡ್ಕ ಪ್ರಭಾಕರ ಭಟ್ ರವರು, ಸಾಯಿರಾಂ ಗೋಪಾಲಕೃಷ್ಣ ಭಟ್ ಅವರ ಸಮಾಜ ಸೇವೆ, ದೀನ-ದಲಿತರ ಬಗೆಗಿನ ಸೇವಾ ಕೈಂಕರ್ಯಗಳು ಹಿಂದೂ ಸಮಾಜದ ಅಭಿಮಾನವಾಗಿದ್ದು, ಅವರ ಈ ನಡೆ ಎಲ್ಲರಿಗೂ ಮಾದರಿ ಎಂದು ತಿಳಿಸಿದರು. ದಶಕಗಳಿಂದ ಅನುಸರಿಸಿಕೊಂಡು ಬಂದ ಪಕ್ಷವನ್ನು ಬದಿಗಿಟ್ಟು ಹಿಂದೂ ಸಮಾಜೋತ್ಸವದ ಮಹತ್ವವನ್ನು ಅರಿತು ಪಾಲ್ಗೊಂಡಿರುವುದು ಅತ್ಯಂತ ಪ್ರಶಂಸನೀಯ ಎಂದು ಶ್ಲಾಘಿಸಿದರು.
    ರಾಘವೇಶ್ವರ ಶ್ರೀಗಳ ಸಂದೇಶ:
   ಹಿಂದೂ ಸಮಾಜೋತ್ಸವದಲ್ಲಿ ಪಾಲ್ಗೊಳ್ಳಲು ಆಹ್ವಾನಿತರಾಗಿದ್ದ ಶ್ರೀಮದ್ ರಾಮಚಂದ್ರಾಪುರ ಮಠ ಹೊಸನಗರದ ಶ್ರೀರಾಘವೇಶ್ವರ ಶ್ರೀಗಳು ತಮ್ಮ ಕಾಯರ್ೋತ್ತಡದ ಮಧ್ಯೆ ಆಗಮಿಸಿರಲಿಲ್ಲ. ಆದರೆ ಸಮಾಜೋತ್ಸವಕ್ಕೆ ಮೊಬೈಲ್ ಮೂಲಕ ವಾಕ್ ಸಂದೇಶ ಕಳಿಸಿ ಶುಭ ಹಾರೈಸಿದ್ದರು. ಅದನ್ನು ಸಾರ್ವಜನಿಕವಾಗಿ ಕೇಳಿಸಲಾಯಿತು. ಅವರು ತಮ್ಮ ಸಂದೇಶದಲ್ಲಿ ಕೇರಳದಲ್ಲಿ ವರ್ತಮಾನ ಕಾಲಘಟ್ಟದಲ್ಲಿ ನಡೆಯುತ್ತಿರುವ ಹಿಂದೂ ವಿರುದ್ದ ಕಾಯರ್ಾಚರಣೆಗಳ ಬಗ್ಗೆ ವಿಶಾದ ವ್ಯಕ್ತಪಡಿಸಿ, ಗೋ ಹತ್ಯೆ ಮತ್ತು ಲವ್ ಜಿವಾದ್ ನಂತಹ ಪಿಡುಗಳಿಂದ ಹೊರಬರಲು ಹಿಂದೂ ಸಮಾಜ ಒಗ್ಗಟ್ಟಾಗಿ ಕಾರ್ಯನಿರ್ವಹಿಸಬೇಕಿದೆ ಎಂದು ಸಂದೇಶ ನೀಡಿದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries