ರಾಷ್ಟ್ರದ ಸಮಗ್ರ ಅಭಿವೃದ್ದಿಗೆ ಕೇಂದ್ರ ಕಟಿಬದ್ದ-ಸಚಿವ ಅಲ್ಬೋನ್ಸ್ ಕಣ್ಣಂತಾನಂ
ಪೆರ್ಲ: ರಾಷ್ಟ್ರವು ಇಂದು ಹೊಸ ಯುಗದತ್ತ ದಾಪುಗಾಲಿಡುತ್ತಿದೆ. ಮೂಲ ಸೌಕರ್ಯಗಳು ಲಭ್ಯವಾಗದ ನೂರಾರು ಹಳ್ಳಿಗಳು ಮತ್ತು ಲಕ್ಷಾಂತರ ಜನರ ಸಮಗ್ರ ಅಭಿವೃದ್ದಿಗೆ ಕೇಂದ್ರ ಸರಕಾರ ಕಳೆದ ಮೂರು ವರ್ಷಗಳಿಂದ ಸತತ ಕಾರ್ಯಯೋಜನೆಗಳ ಮೂಲಕ ಯಶಸ್ವಿಯಾಗಿ ಹಲವು ಕನಸುಗಳ ಸಾಕಾರಕ್ಕೆ ಸಾಧ್ಯವಾಗಿದೆ ಎಂದು ಕೇಂದ್ರ ಇಲೆಕ್ಟ್ರೋನಿಕ್ಸ್, ಮಾಹಿತಿ ತಂತ್ರಜ್ಞಾನ, ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ಇಲಾಖೆಯ ಸಚಿವ ಅಲ್ಬೋನ್ಸ್ ಕಣ್ಣಂತಾನಂ ಅಭಿಪ್ರಾಯ ವ್ಯಕ್ತಪಡಿಸಿದರು.
ಪೆರ್ಲ ಸೇವಾ ಸಹಕಾರಿ ಬ್ಯಾಂಕ್ ಜಾರಿಗೊಳಿಸುತ್ತಿರುವ ಮೊಬೈಲ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಭಾನುವಾರ ಅಪರಾಹ್ನ ಸೇವಾ ಸಹಕಾರಿ ಬ್ಯಾಂಕ್ ಪರಿಸರದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ತಂತ್ರಜ್ಞಾನಗಳು ಇಂದು ಬಹುರೂಪಿಯಾಗಿ ವಿಸ್ತರಿಸಲ್ಪಟ್ಟಿದ್ದರೂ ಗ್ರಾಮೀಣ ಪ್ರದೇಶಗಳಿಗೆ ಲಭಿಸುವಲ್ಲಿ ಕೈಸೋತಿದೆ. ಇದು ಭಾರತದಂತಹ ವಿಶಾಲ ರಾಷ್ಟ್ರದ ಸಮಗ್ರ ಅಭಿವೃದ್ದಿಗೆ ಕಪ್ಪು ಚುಕ್ಕಿಯಾಗಿದ್ದು, ಇವನ್ನು ತೊಡೆದು ಪ್ರತಿಯೊಬ್ಬರೂ ಗರಿಷ್ಠ ಸೌಕರ್ಯಗಳನ್ನು ಬಳಸಿಕೊಳ್ಳಲು ಶಕ್ತರಾದಾಗ ಸಶಕ್ತ ಭಾರತ ನಿಮರ್ಾಣ ಸಾಧ್ಯವೆಂಬ ಪ್ರಧಾನಿಯವರ ಪರಿಕಲ್ಪನೆಯನ್ನು ಸಾಕಾರಗೊಳಿಸುವಲ್ಲಿ ಮತ, ಧರ್ಮ, ಪಕ್ಷಾತೀತರಾಗಿ ಕೈಜೋಡಿಸಿ ಸಾಕಾರತೆಗೆ ಬೆಂಬಲ ಸೂಚಿಸಬೇಕೆಂದು ಅವರು ಕರೆ ನೀಡಿದರು.
ಸಂಸದ ಪಿ.ಕರುಣಾಕರನ್ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ರೂಪೇ ಕಿಸಾನ್ ಕ್ರೆಡಿಟ್ ಕಾಡರ್್ ಸೌಕರ್ಯವನ್ನು ಜಿಲ್ಲಾ ಸಹಕಾರಿ ರಿಜಿಸ್ಟಾರ್ ರಹೀಂ ಪಿ. ಉದ್ಘಾಟಿಸಿದರು. ಎಣ್ಮಕಜೆ ಗ್ರಾ.ಪಂ ಅಧ್ಯಕ್ಷೆ ರೂಪವಾಣಿ ಆರ್ ಭಟ್, ಜಿಲ್ಲಾ ಸಹಕಾರಿ ಸಹ ರಿಜಿಸ್ಟಾರ್ ಜಯಚಂದ್ರನ್ ಕೆ, ಕಾಸರಗೋಡು ಜಿಲ್ಲಾ ಸಹಕಾರಿ ಬ್ಯಾಂಕ್ ಪ್ರಧಾನ ಪ್ರಬಂಧಕ ಅನಿಲ್ ಕುಮಾರ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಶುಭಹಾರೈಸಿದರು.
ಎಣ್ಮಕಜೆ ಗ್ರಾ.ಪಂ. ಸ್ಥಾಯೀ ಸಮಿತಿ ಅಧ್ಯಕ್ಷೆ ಆಯಿಷಾ ಎ.ಎ., ಕಾಸರಗೋಡು ಜಿಲ್ಲಾ ಸಹಕಾರಿ ಬ್ಯಾಂಕ್ ನ ಕೃಷಿ ಅಧಿಕಾರಿ ಪ್ರವೀಣ್ ಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್, ಸಹಕಾರ ಭಾರತಿಯ ಜಿಲ್ಲಾಧ್ಯಕ್ಷ ಗಣಪತಿ ಕೋಟೆಕಣಿ, ಸಿಪಿಐಎಂ ಪಕ್ಷದ ಜಿಲ್ಲಾ ಸದಸ್ಯ ಶಂಕರ ರೈ ಮಾಸ್ತರ್, ಮಂಜೇಶ್ವರ ಪಿಸಿಎಆರ್ಡಿ ಬ್ಯಾಂಕ್ ಅಧ್ಯಕ್ಷ ಸೋಮಶೇಖರ ಜೆ.ಎಸ್ ಮೊದಲಾದವರು ಉಪಸ್ಥಿತರಿದ್ದು ಮಾತನಾಡಿದರು. ಪೆರ್ಲ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಶಶಿಭೂಷಣ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದಶರ್ಿ ಪ್ರಭಾಕರ ಕೆ.ಪಿ. ವಂದಿಸಿದರು.
ಕುಶಾಲು-ಮಸಾಲೆ:
1) ಕೇಂದ್ರ ಸಚಿವ ಅಲ್ಬೋನ್ಸ್ ಕಣ್ಣಂತಾನಂ ಮಾತನಾಡುತ್ತಿರುವ ಮಧ್ಯೆ ಸಭಾಂಗಣದ ದ್ವಾರದಲ್ಲಿ ಜನರು ಒಂದಷ್ಟು ನೂಕುನುಗ್ಗಲು ನಡೆಸುತ್ತಿರುವುದನ್ನು ಗಮನಿಸಿದ ಸಚಿವರು, ನೀವ್ಯಾಕೆ ಇಷ್ಟೊಂದು ಗಲಿಬಿಲಿ ಗೊಳ್ಳುತ್ತೀರಿ, ಇಲಿ- ಬೆಕ್ಕುಗಳು ಓಡಾಡುತ್ತಿರಬೇಕು. ಗಲಿಬಿಲಿಗೊಳ್ಳಬೇಡಿ ಎಂದು ತಮ್ಮ ಎಂದಿನ ಹಾಸ್ಯ ಶೈಲಿಯಲ್ಲಿ ಮಾತನಾಡುತ್ತಿರುವಂತೆ ಸಮಸದ ಪಿ.ಕರುಣಾಕರನ್ ಆಗಮಿಸಿದರು. ಇದನ್ನು ಗಮನಿಸಿದ ಸಚಿವರು ತಮ್ಮ ಮಾತನ್ನು ಬದಲಿಸಿ ಸಮಸದರು ಆಗಮಿಸುತ್ತಿದ್ದಾರೆ, ಎಲ್ಲರೂ ಎದ್ದುನಿಂತು ಗೌರವಿಸಿ ಎಂದು ಮುಜುಗರದಿಂದ ಪಾರಾದರು.
2)ಸಚಿವ ಕಣ್ಣಂತಾನಂ ರವರಿಗೆ ಸಮಾರಂಭದಲ್ಲಿ ಕ್ಯಾಂಪ್ಕೋದ ವತಿಯಿಂದ ಅಡಿಕೆ ಚಾಕಲೇಟ್ ಕೊಡುಗೆಯಾಗಿ ನೀಡಲಾಯಿತು. ಜೊತೆಗೆ ಸೇವಾ ಸಹಕಾರಿ ಬ್ಯಾಂಕ್ ವತಿಯಿಂದ ಬೃಹತ್ ಯಕ್ಷಗಾನ ವೇಶ ಮಾದರಿಯ ನೆನಪಿನ ಕಾಣಿಕೆ ಹಸ್ತಾಂತರಿಸಲಾಯಿತು. ಇವೆರಡನ್ನೂ ಸಭೆಯಲ್ಲಿ ಅಸೀನರಾಗಿದ್ದ ಇಬ್ಬರು ಪುಟ್ಟ ಹೆಣ್ಮಕ್ಕಳನ್ನು ವೇದಿಕೆಗೆ ಕರೆಸಿ ಅವರಿಗೆ ಉಡುಗೊರೆಯಾಗಿ ನೀಡಿ ಗಮನ ಸೆಳೆದರು.