HEALTH TIPS

No title

                ಇಂದಿನಿಂದ ಮಲೆತ್ತಡ್ಕ ಜಟಾಧಾರಿ ಮೂಲಸ್ಥಾನ ಬ್ರಹ್ಮಕಲಶೋತ್ಸವ ಮತ್ತು ಮಹಿಮೆ
   ಪೆರ್ಲ: ಕಾರಣೀಕ ಪ್ರಸಿದ್ದ ಪಡ್ರೆ ಮಲೆತ್ತಡ್ಕ ಶ್ರೀಜಟಾಧಾರಿ ಮೂಲಸ್ಥಾನದಲ್ಲಿ ನಾಗಪ್ರತಿಷ್ಠೆ, ಜಟಾಧಾರಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ಜಟಾಧಾರಿ ಮಹಿಮೆ ಇಂದಿನಿಂದ(ಏ.18) ಏ.24ರ ವರೆಗೆ ವಿವಿಧ ವೈಧಿಕ, ಧಾಮರ್ಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
  ಇಂದು ಬೆಳಿಗ್ಗೆ 8ಕ್ಕೆ ಗಣಪತಿ ಹವನ, ಶ್ರೀದೈವಕ್ಕೆ ಸೀಯಾಳ ಸಮರ್ಪಣೆ, ಪ್ರಾರ್ಥನೆ, 9.30 ಕ್ಕೆ ದೀಪ ಪ್ರಜ್ವಲನೆ, 10 ರಿಂದ ಕಿನ್ನಿಂಗಾರು ವಿಶ್ವಕರ್ಮ ಭಜನಾ ಸಂಘದವರಿಂದ ಭಜನಾ ಸಂಕೀರ್ತನೆ, 11 ರಿಂದ ಆಟರ್್ ಓರ್ಫ ಲಿವಿಂಗ್ ವಾಣೀನಗರ ಘಟಕದವರಿಂದ ಸತ್ಸಂಗ, ಮಧ್ಯಾಹ್ನ 1 ರಿಂದ ಪ್ರಸಾದ ಭೋಜನ, ಅಪರಾಹ್ನ 3.30 ಕ್ಕೆ ಹೊರೆಕಾಣಿಕೆ ಮೆರವಣಿಗೆಯ ಆಗಮನ, 4ಕ್ಕೆ ಅಡ್ಯತಕಂಡ ನಾಗಾಲಯದಲ್ಲಿ ತಂತ್ರಿವರ್ಯರಿಗೆ ಪೂರ್ಣಕುಂಭ ಸ್ವಾಗತ, ಸಂಜೆ 5.30 ರಿಂದ ವೈಧಿಕ ವಿದಿವಿಧಾನಗಳಾದ ಆಚಾರ್ಯವರಣ, ಗಣಪತಿ ಪೂಜೆ, ವಾಸ್ತುಹೋಮ, ರಾಕ್ಷೊಘ್ನ ಹೋಮ, ಸ್ಥಳ ಶುದ್ದಿ, ವಾಸ್ತುಕಲಶ, ವಾಸ್ತುಬಲಿ, ವಾಸ್ತು ಪುಣ್ಯಾಹ, ಬಿಂಬ ಜಲಾಧಿವಾಸ ಪ್ರಕ್ರಿಯೆಗಳು ನಡೆಯಲಿವೆ.
    ನಾಳೆ(ಗುರುವಾರ)ಯ ಕಾರ್ಯಕ್ರಮ:
  ಪ್ರಾತಃಕಾಲ 6ರಿಂದ ಅಡ್ಯತಕಂಡ ನಾಗಾಲಯದಲ್ಲಿ ಗಣಪತಿ ಹವನ, ಪ್ರತಿಷ್ಠಾಂಗ ಕಲಶಪೂಜೆ, ಆಶ್ಲೇಷಾ ಬಲಿ, ಮುಹೂರ್ತ ದಾನ, ಬಳಿಕ 11.5ರ ಮಿಥುನ ಲಗ್ನದಲ್ಲಿ ನಾಗಪ್ರತಿಷ್ಠೆ, ಪೂಜೆ, ತಾಂಬೂಲ, ಮಂತ್ರಾಕ್ಷತೆ, 1 ರಿಂದ ಮೂಲಸ್ಥಾನದಲ್ಲಿ ಪ್ರಸಾದ ಭೋಜನ, ಅಪರಾಹ್ನ 3ಕ್ಕೆ ಕಟುಕುಕ್ಕೆ ಶ್ರಿಸುಬ್ರಾಯ ಕ್ಷೇತ್ರದಿಂದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ಆಗಮನ, 3.30ಕ್ಕೆ ಶ್ರೀಮದ್ ಎಡನೀರು ಮಠಾಧೀಶರ ಆಗಮನ, ಪೂರ್ಣಕುಂಭ ಸ್ವಾಗತ, ಬಳಿಕ 4 ರಿಂದ ಧಾಮರ್ಿಕ ಸಭಾ ಕಾರ್ಯಕ್ರಮದಲ್ಲಿ ಮಲ್ಲ ಶ್ರೀಕ್ಷೇತ್ರದ ಆನೆಮಜಲು ವಿಷ್ಣು ಭಟ್ ಅಧ್ಯಕ್ಷತೆ ವಹಿಸುವರು. ಶ್ರೀಮದ್ ಎಡನೀರು ಮಠಾಧೀಶರು ಆಶೀರ್ವಚನ ನೀಡುವರು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸಮುದಾಯ ಅಭಿವೃದ್ದಿ ವಿಭಾಗಾಧಿಕಾರಿ ಜಯರಾಮ ನೆಲ್ಲಿತ್ತಾಯ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಎಣ್ಮಕಜೆ ಗ್ರಾ.ಪಂ. ಅಧ್ಯಕ್ಷೆ ರೂಪವಾಣಿ ಆರ್ ಭಟ್, ಸದಸ್ಯೆ ಚಂದ್ರಾವತಿ ಎಂ, ಶಶಿಕಲಾ ವಾಣೀನಗರ, ಅಗಲ್ಪಾಡಿ ಕ್ಷೇತ್ರದ ಆಡಳಿತ ಮೊಕ್ತೇಸರ ಉಪ್ಪಂಗಳ ವಾಸುದೇವ ಭಟ್, ಕಾಟುಕುಕ್ಕೆ ಶ್ರೀಕ್ಷೇತ್ರದ ಆಡಳಿತ ಮೊಕ್ತೇಸರ ವಿಷ್ಣುಪ್ರಕಾಶ ಪಿಲಿಂಗಲ್ಲು, ಇಡಿಯಡ್ಕ ಶ್ರೀಕ್ಷೇತ್ರದ ಆಡಳಿತ ಮೊಕ್ತೇಸರ ಸದಾನಂದ ಶೆಟ್ಟಿ ಕುದ್ವ ಉಪಸ್ಥಿತರಿರುವರು.
   ಸಂಜೆ 6 ರಿಂದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸ್ಥಳೀಯ ಅಂಗನವಾಡಿ ಮಕ್ಕಳಿಂದ ಕಾರ್ಯಕ್ರಮ ವೈವಿಧ್ಯ, 7 ರಿಂದ ವಿಶೇಷ ಚೇತನ ಮಕ್ಕಳಿಂದ ರಸಮಂಜರಿ, 7.30 ರಿಂದ ಮನೋರಂಜನೆ, ನೃತ್ಯ ವೈವಿಧ್ಯಗಳು ನಡೆಯಲಿವೆ.
       *ಮಲೆತ್ತಡ್ಕ ಮೂಲಸ್ಥಾನ ಪರಿಸರ ಈಗ ಪವರ್ ಫುಲ್ಲ್!!*
    ಪಡ್ರೆ ಸ್ವರ್ಗ ಮಲೆತ್ತಡ್ಕ ಶ್ರೀ ಜಟಾಧಾರಿ ಮೂಲಸ್ಥಾನದ ನಾಗಾಲಯ, ಶ್ರೀ ದೈವದ ಗುಡಿ, ಪ್ರಧಾನ ಗೋಪುರ ಮತ್ತಿತರ ಕ್ಷೇತ್ರೀಯ ನವನಿಮರ್ಾಣ ಕಾರ್ಯಗಳು ಪೂರ್ಣಗೊಂಡಿದ್ದು ಇಂದಿನಿಂದ ಏ. 24 ರ ವರೆಗೆ ಕ್ಷೇತ್ರ ತಂತ್ರಿ ವರ್ಯರ ನೇತೃತ್ವದಲ್ಲಿ ಬ್ರಹ್ಮಕಲಶೋತ್ಸವವು ನಡೆಯಲಿದೆ. ಇಂದು ಅಡ್ಯತಕಂಡ ನಾಗಾಲಯದಲ್ಲಿ ನಾಗ ಪ್ರತಿಷ್ಟೆ, ಏಪ್ರಿಲ್ 22 ಭಾನುವಾರ ಶ್ರೀ ಜಟಾಧಾರಿ ಮೂಲಸ್ಥಾನದಲ್ಲಿ ಜಟಾಧಾರಿ ಪ್ರತಿಷ್ಟೆ ಮತ್ತು ಏಪ್ರಿಲ್ 23 ಸೋಮವಾರ ಶ್ರೀ ಜಟಾಧಾರಿ ಮೂಲಸ್ಥಾನದಲ್ಲಿ ಶ್ರೀ ಜಟಾಧಾರಿ ಮಹಿಮೆಯನ್ನು ವಿವಿಧ ವೈದಿಕ ,ಧಾಮರ್ಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು ಆಗಮಿಸುವ ಭಕ್ತಾದಿಗಳ ಅನುಕೂಲತೆಗಾಗಿ ಹಾಗೂ ಕಾಯರ್ಾಲಯ ಪ್ರಚಾರ ಮಾಧ್ಯಮ ನಿರ್ವಹಣೆಗಾಗಿ ಬ್ರಹ್ಮಕಲಶೋತ್ಸವ ಸಮಿತಿಯ ಕೋರಿಕೆಯಂತೆ  ತಾತ್ಕಾಲಿಕ ಬಿ ಎಸ್ ಎನ್ ಎಲ್ ಟವರ್ನ್ನು ಸೋಮವಾರ ಸ್ಥಾಪಿಸಲಾಯಿತು. ತಾತ್ಕಾಲಿಕ ಟವರ್ ನಲ್ಲಿ 2ಜಿ ಸಂಪರ್ಕ ಸಾದ್ಯವಾಗಿದ್ದು ಮಂಗಳವಾರದಿಂದ 3ಜಿ ಸಂಪರ್ಕ ಏರ್ಪಡಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿರುತ್ತಾರೆ. ಸ್ವರ್ಗ ಶಾಲಾ ವ್ಯವಸ್ಥಾಪಕರಾದ ಹೃಷಿಕೇಶ್ ವಿ ಎಸ್ ಅವರ  ಸಂಪೂರ್ಣ ಸಹಕಾರ, ಸಹಭಾಗಿತ್ವದಲ್ಲಿ ನಡೆದ ತಾತ್ಕಾಲಿಕ ವ್ಯವಸ್ಥೆ ಇದಾಗಿದ್ದು  ಬಿ ಎಸ್ ಎನ್ ಎಲ್ ಕಾಸರಗೋಡು ಉಪವಿಭಾಗದ ಅಭಿಯಂತರ ಶ್ರೀಜಿತ್ ಹಾಗೂ ಉಪ್ಪಳ ವಿಭಾಗದ ಜೂನಿಯರ್  ಟೆಲಿಕಾಂ ಅಧಿಕಾರಿ ಮಧುಸೂದನ್ ಭಟ್ ಅವರ ನಿರಂತರ ಪ್ರಯತ್ನದ ಫಲವಾಗಿ  ಬಿ ಎಸ್ ಎನ್ ಎಲ್ ಇತರ  ಸಿಬಂದಿಗಳ ಕೈ ಜೋಡಣೆಯೊಂದಿಗೆ ಕೆಲವೇ ದಿನಗಳಲ್ಲಿ ಈ ತಾತ್ಕಾಲಿಕ ವ್ಯವಸ್ಥೆಯು ಯಶಸ್ಸನ್ನು ಕಂಡು ಭಕ್ತಾದಿಗಳು ಹಾಗೂ ಬ್ರಹ್ಮಕಲಶೋತ್ಸವ ಸಮಿತಿ  ಪದಾಧಿಕಾರಿಗಳು ಸದಸ್ಯರು ಹಾಗೂ ಸ್ಥಳೀಯರು ಅಭಿನಂದಿಸಿರುತ್ತಾರೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries