HEALTH TIPS

No title

              ಪ್ರಾತಃಸ್ಮರಣೀಯತೆಯ ಕರ್ತವ್ಯದಿಂದ ಬದುಕು ಸಾರ್ಥಕ್ಯ-ಮಲಾರ್ ಜಯರಾಮ ರೈ
                 ಬೇಕಲ ರಾಮ ನಾಯಕ ಶತಮಾನೋತ್ತರ ಸಂಸ್ಮರಣೆ, ಅಭಿನಂದನೆ-ಗೌರವಾರ್ಪಣೆ ಸಮಾರಂಭ ಉದ್ಘಾಟನೆ
    ಕಾಸರಗೋಡು: ಬದುಕಿನ ಸುಖ, ಖಾಸಗೀತನವನ್ನು ಮರೆತು ಸಾಧನಾ ಪಥದಲ್ಲಿ ಮುಂದುವರಿದಾಗ ಮಹಾನ್ ಕೊಡುಗೆಗಳ ನಿಮರ್ಾಣವಾಗುತ್ತದೆ. ನಾವು ಪ್ರಾತಃಸ್ಮರಣೀಯರಾದಾಗ ಬದುಕಿಗೆ ಸಾರ್ಥಕತೆ ಲಭ್ಯವಾಗುತ್ತದೆ ಎಂದು ಹಿರಿಯ ಪತ್ರಕರ್ತ, ಸಾಹಿತಿ ಮಲಾರು ಜಯರಾಮ ರೈ ಅಭಿಪ್ರಾಯ ವ್ಯಕ್ತಪಡಿಸಿದರು.
   ನುಳ್ಳಿಪ್ಪಾಡಿಯ ಕನ್ನಡ ಭವನ ಗ್ರಂಥಾಲಯದಲ್ಲಿ ಶನಿವಾರ ಸಂಜೆ ನಡೆದ ಬೇಕಲ ರಾಮ ನಾಯಕ ಶತಮಾನೋತ್ತರ ಸಂಸ್ಮರಣೆ, ಅಭಿನಂದನೆ-ಗೌರವಾರ್ಪಣೆ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
   ಬೇಕಲ ರಾಮನಾಯಕರು ಗಡಿನಾಡು ಕಾಸರಗೋಡು ಸಹಿತ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮಣ್ಣಿನ ಸತ್ವ-ಮಹತ್ವಗಳನ್ನು ಸಂಶೋಧಿಸಿ ಮುಂದಿನ ತಲೆಮಾರಿಗೆ ಗ್ರಹಿಸಲು ದಾಖಲೀಕರಣಗೊಳಿಸಿದ ಸಾಧನೆಗಳು ಋಷಿ ಸದೃಶ ಪರಮೋಚ್ಚ ತಪಸ್ಸಾಗಿದೆ. ಇತಿಹಾಸ ಸಾಗಿಬಂದ ಸ್ಪಷ್ಟ ಜ್ಞಾನದಿಂದಷ್ಟೆ ವರ್ತಮಾನದ ಬದುಕಿನ ಸವಿ ಅಥರ್ೈಸಲು ಸಾಧ್ಯ ಎಂದು ಅವರು ತಿಳಿಸಿದರು. ಹಿಂದಿನ ಕಾಲಘಟ್ಟದಲ್ಲಿ ಭಾಷೆ, ಸಂಸ್ಕೃತಿಯ ಬೆಳವಣಿಗೆಗಳಿಗೆ ರಾಜಾಶ್ರಯದ ನೆರಳಿತ್ತು.ಆದರೆ ಇಂದದು ಅಸಾಧ್ಯವಾಗಿದ್ದು, ಎಲ್ಲರೂ ಪರಸ್ಪರ ಕೈಜೋಡಿಸಿ ಮುಂದಡಿಯಿಟ್ಟಲ್ಲಿ ಬೆಳವಣಿಗೆ ಸಾಧ್ಯ ಎಂದು ತಿಳಿಸಿದ ಅವರು, ವ್ಯಕ್ತವಾಗಿರುವಾಗಲೇ ವ್ಯಕ್ತಿತ್ವ ಬೆಳೆಸುವ ಸನ್ಮನಸ್ಸು ಜಾಗೃತವಾಗಿರಲಿ ಎಂದು ಕರೆನೀಡಿದರು.
   ಕನ್ನಡ ಭವನ ಗ್ರಂಥಾಲಯ ಸಮಿತಿಯ ಸಂಸ್ಥಾಪಕ ಕೆ.ವಾಮನ ರಾವ್ ಬೇಕಲ್ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಉಪಜಿಲ್ಲಾಧಿಕಾರಿ ಬಿ.ಬಾಲಕೃಷ್ಣ ಅಗ್ಗಿತ್ತಾಯ, ಬೇಕಲ ರಾಮ ನಾಯಕರ ಸುಪುತ್ರ ಯಜ್ಞನಾರಾಯಣ ಬೇಕಲ್ ಉಪಸ್ಥಿತರಿದ್ದರು.
   ಸಮಾರಂಭದಲ್ಲಿ ಡಿವಿಜಿ ಸಾಹಿತ್ಯ ಪ್ರಶಸ್ತಿ ಪುರಸ್ಕೃತ ಸಾಹಿತಿ, ಭಾಷಾಂತರಕಾರ ಎ.ನರಸಿಂಹ ಭಟ್ ರವರನ್ನು ಅಭಿನಂದಿಸಿ ಗೌರವಿಸಲಾಯಿತು.ಜೊತೆಗೆ ಹಿರಿಯ ಲೇಖಕಿ ಮಾಲತಿ ಕಮಲಾಕ್ಷರನ್ನು ಅಭಿನಂದಿಸಲಾಯಿತು. ಕನ್ನಡ ಭವನ ಸಮಿತಿ ಅಧ್ಯಕ್ಷ, ಪತ್ರಕರ್ತ, ಸಾಹಿತಿ ರಾಧಾಕೃಷ್ಣ ಕೆ. ಉಳಿಯತ್ತಡ್ಕ ನರಸಿಂಹ ಭಟ್ ರವರ ಕುರಿತು ಅಭಿನಂದನಾ ಭಾಷಣಗೈದರು. ಬೇಕಲ ರಾಮ ನಾಯಕರ ಬದುಕು-ಸಾಧನೆಗಳ ಕುರಿತು ಕನ್ನಡ ಭವನ ಮಹಿಳಾ ಸಮಿತಿಯ ಸಂಚಾಲಕಿ ಆಶಾ ಜಗದೀಶ್ ಕೂಡ್ಲು ಸಂಸ್ಮರಣಾ ಭಾಷಣ ಮಾಡಿದರು.
    ಕನ್ನಡ ಭವನ ಸಮಿತಿಯ ಕಾರ್ಯದಶರ್ಿ ಜಗದೀಶ್ ಕೂಡ್ಲು ಸ್ವಾಗತಿಸಿ, ಸಂಚಾಲಕ ತಾರಾನಾಥ ಶೆಟ್ಟಿ ವಂದಿಸಿದರು. ಕನ್ನಡ ಭವನ ಸಮಿತಿ ಮಹಿಳಾ ಸಂಚಾಲಕಿ ಲತಾ ಪ್ರಕಾಶ್ ರಾವ್ ಕಾರ್ಯಕ್ರಮ ನಿರೂಪಿಸಿದರು.
   


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries