HEALTH TIPS

No title

                      ಬಾಯಾರು ಬಂಡಿ ಉತ್ಸವಕ್ಕೆ ಹೊಸ ಕಳೆ
           97 ವರ್ಷಗಳ ಹಿಂದಿನ ಬಂಡಿ ಮಾಣಿ ಕೂರುವ ಆಚರಣೆ ಈ ಬಾರಿ ಆರಂಭ
     ಉಪ್ಪಳ: ಬಾಯಾರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ರಕ್ಷಕ ದೈವ ಶ್ರೀ ಮಲರಾಯ ಸನ್ನಿಧಿಯಲ್ಲಿ ವಾಷರ್ಿಕ ಜಾತ್ರಾ ಮಹೋತ್ಸವವು ಇಂದಿನಿಂದ (ಎ.26 ಗುರುವಾರ) ಆರಂಭಗೊಳ್ಳಲಿದೆ. ಐದು ದಿನಗಳ ಕಾಲ ನಡೆಯುವ ವಾಷರ್ಿಕ ಜಾತ್ರೆಯಲ್ಲಿ ಬಂಡಿಮಾರು ಜಾತ್ರೆ ವಿಶೇಷವಾಗಿದ್ದು, ನಡು ಬಂಡಿ ಉತ್ಸವ ಆಕರ್ಷಣೀಯವಾಗಿರುತ್ತದೆ. ಈ ಬಾರಿಯ ಬಂಡಿ ಉತ್ಸವದಲ್ಲಿ ಮಾನ್ಯಂತಾಯರು ಬಂಡಿ ಮೇಲೆ ಆಸೀನರಾಗಲಿದ್ದು, ನೂರು ವರ್ಷ ಹಿಂದಿನ ಆಚರಣೆಯನ್ನು ಪುನಃ ಆರಂಭಿಸಲು ಕಾರಣರಾಗಲಿದ್ದಾರೆ.
   ಸುಮಾರು ಒಂದು ಶತಮಾನದ ಹಿಂದೆ ಚಾಲ್ತಿಯಲ್ಲಿದ್ದ ಆಚರಣೆಯೊಂದು ಪುನಃ ಆರಂಭವಾಗುವ ಮೂಲಕ ಗ್ರಾಮೀಣ ಭಾಗದ ಜನರಲ್ಲಿ ಹೊಸ ಚೈತನ್ಯ ಶಕ್ತಿ ಜಾಗೃತವಾಗುವುದರೊಂದಿಗೆ ಆಸ್ಮಿತೆಯನ್ನು ಕಂಡುಕೊಳ್ಳಲು ಕಾರಣವಾಗಿದೆ. ಪ್ರತಿ ವರ್ಷ ಬಾಯಾರು ಜಾತ್ರೆಯು ತುಳು ಮಾಸ ಪಗ್ಗು(ಮೇಷ)ದ ಹನ್ನೆಡನೇ ದಿನ ಆರಂಭವಾಗುತ್ತದೆ. ಕೊಡಿಯೇರಿದ ನಂತರ ನಾಲ್ಕು ದಿನಗಳ ಪರ್ಯಂತ ನಡೆಯುವ ಜಾತ್ರೋತ್ಸವದಲ್ಲಿ ದೈವಾರಾಧನೆಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಬಾಯಾರು ಶ್ರೀ ಪಂಚಲಿಂಗೇಶ್ವರ ಸನ್ನಿಧಿಯ ಸನಿಹದಲ್ಲಿರುವ ಮಲರಾಯ ದೈವದ ಗುಡಿ ಮತ್ತು ವಿಶಾಲವಾದ ಪ್ರದೇಶದಲ್ಲಿ ನಡೆಯುವ ವಾಷರ್ಿಕ ಜಾತ್ರಾ ಮಹೋತ್ಸವ ನಾಡಿನ ಸಂಭ್ರಮ, ಗ್ರಾಮದ ಹೆಮ್ಮೆಯಾಗಿ ಗುರುತಿಸಿಕೊಂಡಿದೆ.
   ರಾಜಂದೈವ ಮಲರಾಯ ದೈವವು ಕ್ಷೇತ್ರದ ರಕ್ಷಕ ಎನ್ನುವ ನಂಬುಗೆಯು ಜನಜನಿತವಾಗಿದ್ದು, ಪಾಡ್ದನಗಳಲ್ಲಿ ದೈವ ಆಗಮನದ ಹಿನ್ನೆಲೆ ಮತ್ತು ಕ್ಷೇತ್ರ ರಕ್ಷಕನಾದ ಪರಿಯನ್ನು ಹೇಳಲಾಗುತ್ತದೆ. ಮಲರಾಯ ದೈವದ ಜೊತೆಯಲ್ಲಿರುವ ಉಪದೈವಗಳಿಗೂ ವಾಷರ್ಿಕ ಜಾತ್ರೋತ್ಸವದ ಸಂದರ್ಭ ಕೋಲ ನೀಡುವುದು ವಾಡಿಕೆ.
   ಜಾತ್ರೋತ್ಸವದ ಕೊನೆ ದಿನದಂದು ನಡೆಯುವ ಬಾಯಾರು ಬಂಡಿ ಇಲ್ಲಿನ ವಿಶೇಷತೆಗಳಲ್ಲೊಂದು. ಕೃಷಿ ಸಹಜೀವನದೊಂದಿಗೆ ಜಾನಪದ ವೈದಿಕ ಆಚರಣೆಗಳ ಸಂಗಮವನ್ನು ಆಚರಣೆ ತೋರ್ಪಡಿಸುತ್ತದೆ. 
       ಮಾನ್ಯಂತಾಯರು ನಿರ್ಣಯ:
   ಹಲವು ವರ್ಷಗಳ ಹಿಂದೆ ನಿಂತು ಹೋಗಿದ್ದ ಬಂಡಿ ಮೇಲೆ ಕುಳಿತುಕೊಳ್ಳುವ ಅನುವಂಶಿಕ ಗೌರವವನ್ನು ಪುನಃ ಪಡೆದುಕೊಂಡು ಮುಂದುವರಿಸಲು ಸಿದ್ಧರಾದವರು ಬಾಯಾರು ಶ್ರೀ ಪಂಚಲಿಂಗೇಶ್ವರ ಮತ್ತು ಮಲರಾಯ ದೈವಂಗಳ ಗುರಿಕಾರರಾದ ಸುದೆಂಬಳ ಮನೆತನದ ಮಾನ್ಯಂತಾಯ ಶ್ರೀನಿವಾಸ ಭಟ್ಟರು. ಬಂಡಿಯಲ್ಲಿ ಕೂರುವವನ ದೇಹ, ಮನಸ್ಸಿನ ಜೊತೆಯಲ್ಲಿ ಆತ್ಮಶುದ್ಧಯು ಇರಬೇಕು. ಶತಮಾನಗಳ ಹಿಂದಿನ ಆಚರಣೆಯನ್ನು ಮುಂದುವರಿಸುವ ದೊಡ್ಡ ಜವಾಬ್ದಾರಿ ತನ್ನ ಮೇಲಿದೆ. ದೈವಜ್ಞ ಚಿಂತನೆಯಲ್ಲಿ ಕಂಡು ಬಂದಂತೆ, ಕುಟುಂಬ ವರ್ಗದವರ ಆಶಯ ಮತ್ತು ದೈವ ದೇವಸ್ಥಾನದ ಸಮಿತಿ, ಸಮಾಜದ ಕಳಕಳಿಯ ವಿನಂತಿಯ ಮೇರೆಗೆ ಈ ಜವಾಬ್ದಾರಿ ಮತ್ತು ಗೌರವವನ್ನು ತಾನು ಸ್ವೀಕರಿಸುತ್ತಿರುವುದುದಾಗಿ ಮಾನ್ಯಂತಾಯ ಶ್ರೀನಿವಾಸ ಭಟ್ಟರು ಹೇಳಿದ್ದಾರೆ. 
       ಸುದೆಂಬಳ ಮನೆತನದವರು ಮಾನ್ಯಂತಾಯರು:
   ಆಡು ಭಾಷೆಯಲ್ಲಿ ಮಾಣಿ ಎಂದು ಕರೆಸಿಕೊಂಡು, ದೈವ ಭಾಷೆಯಲ್ಲಿ ತೇಜಿ ಎಂದು ಕರೆಸಿಕೊಳ್ಳುವ ಮಾನ್ಯಂತಾಯರು 97 ವರ್ಷಗಳ ನಂತರ ಮೊದಲ ಬಾರಿಗೆ ಬಂಡಿಯ ಮೇಲೆ ಕುಳಿತುಕೊಳ್ಳುವ ಮೂಲಕ ವಿಶೇಷ ಗೌರವಕ್ಕೆ ಭಾಜನರಾಗಲಿದ್ದಾರೆ. ಈ ಬಾರಿಯ ಬಂಡಿಮಾರು ಜಾತ್ರಾ ಮಹೋತ್ಸವದಲ್ಲಿ ಶತಮಾನ ಹಿಂದಿನ ವಿಶೇಷ ಆಚರಣೆಯು ಪುನರಾರಂಭಗೊಳ್ಳಲಿದ್ದು ಸುದೆಂಬಳ ಮಾನ್ಯಂತಾಯ ಶ್ರೀನಿವಾಸ ಭಟ್ಟರು ವಿಶೇಷ ಗೌರವ ಸ್ವೀಕರಿಸಲಿದ್ದಾರೆ. ಮಾನ್ಯಂತಾಯ ಎಂದರೆ ಮಾನ್ಯತೆ ಉಳ್ಳುವ ಎಂದೂ, ತೇಜಿ ಎಂದರೆ ಗೌರವ ಉಳ್ಳವ ಎಂದರ್ಥ. 1921 ರಲ್ಲಿ ತಮ್ಮ ಪೂರ್ವಜರಾದ ಸುದೆಂಬಳ ಕೃಷ್ಣ ಭಟ್ಟರು ಈ ಗೌರವಕ್ಕೆ ಭಾಜನರಾದ ಕೊನೆಯವರು, ಕಾಲ ನಂತರ ಆಚರಣೆ ನಡೆಯದೆ ಸ್ತಬ್ದವಾಯಿತು ಎನ್ನುತ್ತಾರೆ ಮಾನ್ಯಂತಾಯ ಶ್ರೀನಿವಾಸ ಭಟ್ಟರು.
    ಬಹಳ ಹಿಂದೆ ಮಲರಾಯ ದೈವದ ಭಂಡಾರ ಸಹಿತ ಉತ್ಸವಾದಿಗಳನ್ನು ನಡೆಸಿಕೊಂಡು ಹೋಗುವ ಗುರುತರ ಜವಾಬ್ದಾರಿ ಸುದೆಂಬಳ ಮನೆಯವರಿಗಿತ್ತು, ಸುದೆಂಬಳ ಮನೆಯಲ್ಲೂ ಮಲರಾಯ ದೈವದ ದೈವಸ್ಥಾನ ಮತ್ತು ಮೂಲಸ್ಥಾನವಿದ್ದು, ಪರ್ವ ದಿನಗಳಲ್ಲಿ ವಿಶೇಷ ಪೂಜೆ, ಪುನಸ್ಕಾರ ಸಹಿತ ತಂಬಿಲ ಸೇವೆಗಳು ನಡೆಯುತ್ತವೆ. ಬಾಯಾರು ಶ್ರೀ ಪಂಚಲಿಂಗೇಶ್ವರ ದೇವರು ಮತ್ತು ದೈವಸ್ಥಾನಕ್ಕೆ ಒಟ್ಟು 36 ಮಂದಿ ಗುರಿಕ್ಕಾರರಿದ್ದು ಎಲ್ಲರ ಸಮ್ಮುಖದಲ್ಲಿ ಕ್ಷೇತ್ರದ ಕಾರ್ಯಚಟುವಟಿಕೆಗಳು ಮುಂದುವರಿಯುತ್ತಿವೆ. ಬಹಳ ಹಿಂದಿನಿಂದಲೂ ವಿಟ್ಲ ಮಾಗಣೆಯ ಭಾಗವಾಗಿದ್ದ ಬಾಯಾರು ದೇವಸ್ಥಾನ ಮತ್ತು ದೈವಸ್ಥಾನವು ಬಾಯಾರು ಗ್ರಾಮಕ್ಕೆ ಒಳಪಟ್ಟಿದ್ದು ಒಟ್ಟು ಆರು ಉಪಗ್ರಾಮಗಳಿವೆ. ಹಳೆ ದಾಖಲೆಗಳಲ್ಲಿ ಬಾಯಾರು ಕಸಬಾ ಎಂದು ಉಲ್ಲೇಖಿಸಲ್ಪಟ್ಟಿದೆ.
       ಮಾನ್ಯಂತಾಯರು ಜೌಷಧೋಪಚಾರದಲ್ಲಿ ಸಿದ್ಧ ಹಸ್ತರು:
   ಈ ಹಿಂದೆ ಮಾನ್ಯಂತಾಯರಾಗಿ ಬಂಡಿ ಮೇಲೆ ಕುಳಿತುಕೊಳ್ಳುತ್ತಿದ್ದ ವ್ಯಕ್ತಿಗಳಿಗೆ ಸಮಾಜದಲ್ಲಿ ವಿಶೇಷ ಗೌರವ ಇತ್ತು. ವಿಟ್ಲ ಅರಸರ ಆಸ್ಥಾನ ವೈದ್ಯರಾಗಿಯೂ ಸೇವೆ ಸಲ್ಲಿಸುತ್ತಿದ್ದ ಸುದೆಂಬಳ ಮನೆತನದ ಮಾನ್ಯಂತಾಯರುಗಳು ಆಯುವರ್ೆದ ಜೌಷದೋಪಚಾರದಲ್ಲೂ ಎತ್ತಿದ ಕೈ. ಹಾವು ಕಚ್ಚಿ ಸತ್ತನೆಂದು ಕಬರಸ್ಥಾನಕ್ಕೆ ಕರೆದೊಯ್ಯುತ್ತಿದ್ದ ಮಾಪಿಳ್ಳ ಸಮುದಾಯದ ಯುವಕನನ್ನು ಬದುಕಿಸಿದ ಓರ್ವ ಮಾನ್ಯಂತಾಯರ ಕೀತರ್ಿಯ ಬಗ್ಗೆಗಿನ ಮಾತುಗಳು ಜನಜಿನಿತವಾಗಿವೆ. ಇದೇ ಕಾರಣಕ್ಕೆ ಸುದೆಂಬಳ ಮನೆತನದ ವೈದ್ಯರಿಗೆ ಮಾಪಿಳ್ಳ ಸಮುದಾಯದ ವ್ಯಕ್ತಿಯೋರ್ವ ವಿಟ್ಲ ಮಾಗಣೆಗೆ ಮಾನ್ಯಂತಾಯರು ಬರುವ ಸಂದರ್ಭ ತಂಗಲು ಅನುಕೂಲವಾಗುವಂತೆ ಚಾವಡಿಯೊಂದನ್ನು ಕಟ್ಟಿಸಿದ್ದ ಎನ್ನಲಾಗಿದೆ.
    ಮಾನ್ಯಂತಾಯ ಗೌರವಕ್ಕೆ ಭಾಜನನಾದ ವ್ಯಕ್ತಿ ಯಾವುದೇ ದುಶ್ಚಟಗಳಿಂದ ಮುಕ್ತನಾಗಿರಬೇಕು, ಜೊತೆಗೆ ಮರವೇರುವ, ಭಾರಹೊರುವಂತಹ ತ್ರಾಸದಾಯಕ ಕೆಲಸಗಳನ್ನು ಮಾಡಬಾರದು ಎಂಬ ನಿಯಮವಿದ್ದು, ಹೊಲಿಸಿದ ಬಟ್ಟೆ ಧರಿಸಬಾರದು, ಸಮುದ್ರ ಲಂಘನೆ ಮಾಡಬಾರದು ಎಂಬ ನಿಯಮವಿದೆ. ವಿಶೇಷ ಪರ್ವ ದಿನಗಳಲ್ಲಿ ದೇವಸ್ಥಾನ ಸಹಿತ ದೈವಸ್ಥಾನದಲ್ಲಿ ಉಪಸ್ಥಿತರಿರಬೇಕಿದೆ. ತೋಳಿಗೆ ತೋಳಪಟ್ಟಿ, ಸೊಂಟಕ್ಕೆ ಚಿನ್ನದ ಸೊಂಟಪಟ್ಟಿ ಧರಿಸಿ ದೇವರ ಬಲಿ ಸೇವೆಯ ಸಂದರ್ಭ ದೇವರಿಗೆ ಅಭಿಮುಖವಾಗಿ ಹಿಂದಕ್ಕೆ ಸಾಗಬೇಕಿದೆ. ಇತ್ತೀಚೆಗೆ ದೇವಸ್ಥಾನದ ಬಲಿ ಉತ್ಸವ ಸಂದರ್ಭ ಶ್ರೀನಿವಾಸ ಭಟ್ಟರಿಗೆ ಮಾನ್ಯಂತಾಯ ಬಿರುದು ನೀಡಿದ್ದು, ಅಧಿಕೃತವಾಗಿ ಚಿನ್ನದ ಬಳೆ(ಕಡಗ) ತೊಡಿಸುವ ಮೂಲಕ ತೇಜಿ ಸ್ಥಾನವನ್ನು ನೀಡಲಾಗಿದೆ. ಮಂಗಳೂರು ಕದ್ರಿಯ ಮಂಜುನಾಥ ಕ್ಷೇತ್ರದ ಕೆರೆಯಲ್ಲಿ ಪುಣ್ಯ ಸ್ನಾನ ಮಾಡಿ ಬಂದಿರುವ ಭಟ್ಟರಿಗೆ ದೇವಸ್ಥಾನದಲ್ಲಿ ಕಲಶ ಸ್ನಾನ ನೆರವೇರಿಸುವ ಮೂಲಕ ಮಾನ್ಯಂತಾಯ ಉಪಾಧಿ ಸಹಿತ ಜವಾಬ್ದಾರಿಯನ್ನು ನೀಡಲಾಗಿದೆ.
      ಹೆಚ್ಚು ಜನ ಸೇರುವ ನಿರೀಕ್ಷೆ:
  ಬಹಳ ಹಿಂದೆ ನಿಂತು ಹೋದ ಆಚರಣೆ ಪುನರಾರಂಬಗೊಳ್ಳುತ್ತಿರುವ ಸಂದರ್ಭ ಬಾಯಾರು ಜಾತ್ರೋತ್ಸವದಲ್ಲಿ ಅತೀ ಹೆಚ್ಚಿನ ಭಕ್ತಾದಿಗಳು ಸೇರುವ ನಿರೀಕ್ಷೆಯಿದೆ ಎಂದು ಸಮಿತಿ ಅಧ್ಯಕ್ಷರು ಹೇಳಿದ್ದಾರೆ. ಬಾಯಾರು ಜಾತ್ರಾ ಮಹೋತ್ಸವವು ಎ.26 ರಿಂದ ಆರಂಭವಾಗಲಿದೆ. 26 ರಂದು ರಾತ್ರಿ ಭಂಡಾರ ಇಳಿದು ಧ್ವಜಾರೋಹಣ ನಡೆಯಲಿದೆ. 27 ರಂದು ಕೊಟ್ಯದಾಯನ, 28 ರಂದು ಅಪರಾಹ್ನ 4 ಗಂಟೆಗೆ ಅಯ್ಯರ ಬಂಟ ನೇಮ ಮತ್ತು ಪ್ರಥಮ ಬಂಡಿ ಉತ್ಸವ. 29 ರಂದು ಆದಿತ್ಯವಾರ ಮಲರಾಯ ನೇಮ ನಡು ಬಂಡಿ ಉತ್ಸವ ನಡೆಯಲಿದ್ದು. ಎ.30 ರಂದು ಅಪರಾಹ್ನ ಪಿಲಿಚಾಮುಂಡಿ ನೇಮ, ಕಡೇ ಬಂಡಿ ಉತ್ಸವ, ವಾಲಸರಿ ಧ್ವಜಾರೋಹಣ ನಡೆಯಲಿದೆ. ಎ.30 ರಂದು ನಡೆಯುವ ಕಡೇ ಬಂಡಿ ಉತ್ಸವದಲ್ಲಿ ಮಾನ್ಯಂತಾಯರು 97 ವರ್ಷಗಳ ನಂತರ ಬಂಡಿ ಏರಲಿದ್ದು, ಇತಿಹಾಸ ಮರುಕಳಿಸಲಿದೆ. ಮೇ. 2 ರಂದು ಬಂಡಿಮಾರು ಕೊರತಿ ಗುಳಿಗ ನೇಮ ನಡೆಯಲಿದೆ.
ಎ. 29 ರಂದು ಸಂಜೆ 5.30 ಕ್ಕೆ ನಡೆಯುವ ಧಾಮರ್ಿಕ ಸಭಾ ಕಾರ್ಯಕ್ರಮದಲ್ಲಿ ಯುವ ವಾಗ್ಮಿ ಕುಮಾರಿ ಅಕ್ಷತಾ ಬಜ್ಪೆ ಧಾಮರ್ಿಕ ಉಪನ್ಯಾಸ ನೀಡಲಿದ್ದಾರೆ. ಕ್ಯಾಂಪ್ಕೋ ನಿದರ್ೇಶಕ ಬಾನೊಟ್ಟು ಬಾಲಕೃಷ್ಣ ರೈ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. 930 ರಂದು ಸಾಯಂಕಾಲ 5.30 ಕ್ಕೆ ವೈಷ್ಣವಿ ನಾಟ್ಯ ನಿಲಯ ಪತ್ತೂರು ಇವರಿಮದ ಭರತನಾಟ್ಯ. ರಾತ್ರಿ 10.30 ಕ್ಕೆ ದೇವದಾಸ್ ಕಾಪಿಕಾಡ್ ನಿದರ್ೇಶನದ ಪನಿಯರೆ ಆವಂದಿನ ನಾಟಕ ಪ್ರದರ್ಶನಗೊಳ್ಳಲಿದೆ. 28 ರಂದು ರಾತ್ರಿ 8 ಗಂಟೆಗೆ ಶ್ರೀಕೃಷ್ಣ ಲೀಲಾಮೃತಮ್ ಯಕ್ಷಗಾನ, 29 ರಂದು ರಾತ್ರಿ 8 ಗಂಟೆಗೆ ನೃತ್ಯ ಪ್ರದರ್ಶನ ನಡೆಯಲಿದೆ.
    ಏನಂತಾರೆ ಮಾನ್ಯಂತಾಯರು:
  ನಮ್ಮ ಹಿರಿಯರು ಬಾಯಾರು ಬಂಡಿಯ ಮೇಲೆ ಕೂರುತ್ತಿದ್ದರು, ಅದು ಒಂದು ಗೌರವ ಮತ್ತು ಪ್ರತಿಷ್ಠೆಯ ಸಂಕೇತದೊಂದಿಗೆ ರಾಜಮಯರ್ಾದೆಯು ಹೌದು. ಇದೀಗ ಮತ್ತೆ ಪ್ರಾಚೀನತೆಯ ಸಂಕಲ್ಪವನ್ನು ಮರು ಸ್ಥಾಪಿಸಲುದ್ದೇಶಿಸಿರುವುದು ಮಹತ್ವಪೂರ್ಣ. ಇದು ಧಾಮರ್ಿಕ, ಸಾಮಾಜಿಕ ನೆಲೆಗಟ್ಟನ್ನು ಸನ್ಮಾರ್ಗದಲ್ಲಿ ಮುನ್ನಡೆಸುವ ಆಶಯ ಹೊಂದಿದೆ. ಬಾಯಾರು ಬಂಡಿಮಾರು ಜಾತ್ರೆಯು ಗ್ರಾಮೀಣ ಧಾಮರ್ಿಕ ಸಂಸ್ಕೃತಿಯಲ್ಲಿ ಜಾತಿ ಮತ ಬೇಧವಿಲ್ಲದೆ ಎಲ್ಲರೂ ಒಟ್ಟಾಗಿ ದೈವ ಶಕ್ತಿಯ ಅನುವು ಆಶೀವರ್ಾದವನ್ನು ಪಡೆದು ಆನಂದಿಸಿ ಸಂಭ್ರಮಿಸುವ ಮಹೋತ್ಸವವಿದು.
     -ಸುದೆಂಬಳ ಶ್ರೀನಿವಾಸ ಭಟ್
     ಮಾನ್ಯಂತಾಯರು ಬಾಯಾರು, ದೈವಸ್ಥಾನ
 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries