HEALTH TIPS

No title

                     ಕೇರಳ ಸರಕಾರದ ದ್ವಿತೀಯ ವಾಷರ್ಿಕೋತ್ಸವಕ್ಕೆ ಸಿದ್ಧತೆ
    ಕಾಸರಗೋಡು: ಕೇರಳ ರಾಜ್ಯದ ಎಲ್ಡಿಎಫ್ ನೇತೃತ್ವದ ಸರಕಾರದ ದ್ವಿತೀಯ ವಾಷರ್ಿಕೋತ್ಸವದ ಅಂಗವಾಗಿ ವಿಪುಲ ಕಾರ್ಯಕ್ರಮ, ಪ್ರದರ್ಶನ, ಮಾರಾಟ, ಕಲಾಮೇಳಗಳನ್ನು  ಯಶಸ್ವಿಗೊಳಿಸುವ ನಿಟ್ಟಿನಲ್ಲಿ  ಸ್ವಾಗತ ಸಮಿತಿಯನ್ನು  ರಚಿಸಲಾಯಿತು.
   ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ  ಆಯೋಜಿಸಲಾಗಿದ್ದ  ಸ್ಥಳೀಯಾಡಳಿತ ಸಂಸ್ಥೆಗಳ ಅಧ್ಯಕ್ಷರು, ಇತರ ಜನಪ್ರತಿನಿಧಿಗಳು, ನಾನಾ ಸಂಘಟನೆಗಳ ಪ್ರಮುಖರು, ಜಿಲ್ಲಾ ಮಟ್ಟದ ಅಧಿಕಾರಿಗಳ ಈ ಸಭೆಯಲ್ಲಿ  ಕಂದಾಯ ಮತ್ತು  ಜಿಲ್ಲಾ  ಉಸ್ತುವಾರಿ ಖಾತೆ ಸಚಿವ ಇ.ಚಂದ್ರಶೇಖರನ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.
    ಜಿಲ್ಲೆಯ ಹೊಣೆಗಾರಿಕೆ ಇರುವ ಕಂದಾಯ ಸಚಿವ ಇ.ಚಂದ್ರಶೇಖರನ್, ಕಾಸರಗೋಡು ಸಾಂಸದ ಪಿ.ಕರುಣಾಕರನ್, ಉದುಮ ಶಾಸಕ ಕೆ.ಕುಂಞಿರಾಮನ್, ತೃಕ್ಕರಿಪುರ ಶಾಸಕ ಎಂ.ರಾಜಗೋಪಾಲನ್, ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು , ಮಂಜೇಶ್ವರ ಶಾಸಕ ಪಿ.ಬಿ.ಅಬ್ದುಲ್ ರಝಾಕ್, ಜಿಲ್ಲಾ  ಪಂಚಾಯತ್ ಅಧ್ಯಕ್ಷ  ಎ.ಜಿ.ಸಿ.ಬಶೀರ್ ಸ್ವಾಗತ ಸಮಿತಿಯ ರಕ್ಷಾಕಾರಿಗಳಾಗಿದ್ದಾರೆ. ಜಿಲ್ಲಾಕಾರಿ ಕೆ.ಜೀವನ್ಬಾಬು ಅಧ್ಯಕ್ಷರಾಗಿದ್ದು , ಜಿಲ್ಲಾ  ವಾತರ್ಾಧಿಕಾರಿ ಇ.ವಿ.ಸುಗತನ್ ಸಂಚಾಲಕರಾಗಿದ್ದಾರೆ.
ಇದೇ ವೇಳೆ ಪ್ರದರ್ಶನ ಮತ್ತು  ಸಾಂಸ್ಕೃತಿಕ ಕಾರ್ಯಕ್ರಮಗಳ ಉಪಸಮಿತಿಗಳನ್ನು  ರೂಪಿಸಲಾಗಿದೆ. ಪ್ರದರ್ಶನ ಸಮಿತಿಯಲ್ಲಿ  ಅಧ್ಯಕ್ಷರಾಗಿ ಕಾಂಞಂಗಾಡು ನಗರಸಭಾ ಅಧ್ಯಕ್ಷ ವಿ.ವಿ.ರಮೇಶನ್, ಸಂಚಾಲಕರಾಗಿ ಎಡಿಎಂ ಎನ್.ದೇವಿದಾಸ್ ಅವರನ್ನು  ಆಯ್ಕೆ ಮಾಡಲಾಗಿದೆ. ಸಾಂಸ್ಕೃತಿಕ ಸಮಿತಿಯಲ್ಲಿ  ಅಧ್ಯಕ್ಷರಾಗಿ ನೀಲೇಶ್ವರ ನಗರಸಭಾ ಅಧ್ಯಕ್ಷರು ಮತ್ತು  ಸಂಚಾಲಕರಾಗಿ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿದರ್ೇಶಕರನ್ನು  ಆರಿಸಲಾಗಿದೆ. ಈ ಸಮಿತಿಗಳಲ್ಲಿ  ಸ್ಥಳೀಯಾಡಳಿತ ಸಂಸ್ಥೆಗಳ ಅಧ್ಯಕ್ಷರು, ನಾನಾ ಇಲಾಖಾ ಮಟ್ಟದ ಮುಖ್ಯಸ್ಥರು, ಸಂಘಟನಾ ಪ್ರತಿನಿಧಿಗಳು ಸದಸ್ಯರಾಗಿರುತ್ತಾರೆ.
    ಜಿಲ್ಲಾ ಮಟ್ಟದ ಪ್ರದರ್ಶನ ಮತ್ತು  ಮಾರಾಟ ಮೇಳವನ್ನು  ಮೇ 19ರಿಂದ 26ರ ವರೆಗೆ ಕಾಂಞಂಗಾಡು ಆಲಾಮಿಪಳ್ಳಿ ಬಸ್ ನಿಲ್ದಾಣದ ಪರಿಸರದಲ್ಲಿ  ನಡೆಸಲು ತೀಮರ್ಾನಿಸಲಾಯಿತು. ಜಿಲ್ಲೆಯ ಸ್ಥಾಪಕ ದಿನವಾದ ಮೇ 24ರಂದು ಪ್ರತ್ಯೇಕ ವಿಚಾರ ಸಂಕಿರಣವನ್ನು  ಏರ್ಪಡಿಸಲಾಗಿದೆ. ವಿವಿಧ ಇಲಾಖೆಗಳು ಅವುಗಳ ಕಳೆದ ಎರಡು ವರ್ಷಗಳ ಪ್ರಗತಿ ವರದಿಯನ್ನು , ಪೂತರ್ಿಗೊಳಿಸಿದ ಹಾಗೂ ಆರಂಭಿಸುವ ಯೋಜನೆಗಳ ಮಾಹಿತಿಗಳನ್ನು  ಶೀಘ್ರವೇ ಜಿಲ್ಲಾಧಿಕಾರಿಯವರಿಗೆ ಒದಗಿಸುವಂತೆ ಸಚಿವರು ಈ ಸಂದರ್ಭ ನಿದರ್ೇಶಿಸಿದರು.
ಜಿಲ್ಲಾಧಿಕಾರಿ ಕೆ.ಜೀವನ್ಬಾಬು, ಎಡಿಎಂ ಎನ್.ದೇವಿದಾಸ್, ಜಿಲ್ಲಾ  ವಾತರ್ಾಧಿಕಾರಿ ಇ.ವಿ.ಸುಗತನ್, ವಿವಿಧ ಇಲಾಖೆಗಳ ಮುಖ್ಯಸ್ಥರು, ಸ್ಥಳೀಯಾಡಳಿತ ಸಂಸ್ಥೆಗಳ ಅಧ್ಯಕ್ಷರು, ವಿವಿಧ ಸಂಘಟನೆಗಳ ಪ್ರತಿನಿಧಿಗಳು ಸಭೆಯಲ್ಲಿ  ಪಾಲ್ಗೊಂಡಿದ್ದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries