ಪಾಲೆಪ್ಪಾಡಿ : ದೃಢ ಕಲಶ ಮಹೋತ್ಸವ ಆರಂಭ
ಪೆರ್ಲ: ಪಾಲೆಪ್ಪಾಡಿ ಶ್ರೀ ವನಶಾಸ್ತಾರ ದೇವಸ್ಥಾನದಲ್ಲಿ ದೃಢ ಕಲಶ ಮಹೋತ್ಸವ ಏ.23 ರಂದು ಆರಂಭಗೊಂಡಿತು. 23 ರಂದು ಸಂಜೆ ವಾಸ್ತು ಬಲಿ, ರಾಕ್ಷೋಘ್ನ ಹೋಮ ನಡೆಯಿತು.
ಎ.24 ರಂದು ಬೆಳಗ್ಗೆ 7 ಕ್ಕೆ 12 ತೆಂಗಿನ ಕಾಯಿ ಗಣಪತಿ ಹೋಮ, ದೃಢ ಕಲಶ, ನಾಗ ತಂಬಿಲ, ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ, ಅನ್ನಸಂತರ್ಪಣೆ, 2 ಗಂಟೆಗೆ ಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ವೈಭವ ನಡೆಯಲಿದೆ. ಭಾಗವತರಾಗಿ ಪ್ರಸಾದ ಬಲಿಪ, ಸತ್ಯನಾರಾಯಣ ಪುಣಿಂಚಿತ್ತಾಯ ಪೆರ್ಲ, ಸತೀಶ್ ಶೆಟ್ಟಿ ಪಟ್ಲ, ಗಿರೀಶ್ ರೈ ಕಕ್ಕೆಪದವು, ಚೆಂಡೆಯಲ್ಲಿ ಪದ್ಮನಾಭ ಉಪಾಧ್ಯಾಯ, ಮದ್ದಳೆಯಲ್ಲಿ ಶ್ರೀಧರ ಪಡ್ರೆ, ಚಕ್ರ ತಾಳದಲ್ಲಿ ಅವಿನಾಶ ಶಾಸ್ತ್ರಿ ಕೊಲ್ಲಂಗಾನ, ನಿರೂಪಕರಾಗಿ ವಾದಿರಾಜ ಕಲ್ಲೂರಾಯ ಭಾಗವಹಿಸಲಿದ್ದಾರೆ.