ಕಯ್ಯಾರು ಕ್ರಿಸ್ತರಾಜ ದೇಗುಲದಲ್ಲಿ ಸಂಭ್ರಮದ ಈಸ್ಟರ್
ಉಪ್ಪಳ: ಯೇಸು ಕ್ರಿಸ್ತರ ಪುನರುತ್ಥಾನದ ಹಬ್ಬ ಈಸ್ಟರ್ನ್ನು ಕಯ್ಯಾರು ಕ್ರಿಸ್ತರಾಜ ದೇಗುಲದಲ್ಲಿ ಶ್ರದ್ಧೆ ಭಕ್ತಿ ಸಡಗರದಿಂದ ಆಚರಿಸಲಾಯಿತು. ಚಚರ್್ನಲ್ಲಿ ಶನಿವಾರ ರಾತ್ರಿ ಮತ್ತು ಭಾನುವಾರ ಬೆಳಗ್ಗೆ ಈಸ್ಟರ್ ಹಬ್ಬದ ಬಲಿಪೂಜೆ ನಡೆಯಿತು. ಕಯ್ಯಾರು ಕ್ರಿಸ್ತರಾಜ ದೇಗುಲದಲ್ಲಿ ನಡೆದ ವಿಧಿ ವಿಧಾನಗಳನ್ನು ಧರ್ಮಗುರು ವಂದನೀಯ ವಿಕ್ಟರ್ ಡಿ'ಸೋಜಾ ನೆವೇರಿಸಿದರು.
ಹೊಸ ಅಗ್ನಿಯ ಆಶರ್ೀವಚನದೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಹೊಸ ಅಗ್ನಿಯಿಂದ ಈಸ್ಟರ್ ಮೊಭತ್ತಿಯನ್ನು ಧರ್ಮಗುರುಗಳು ಬೆಳಗಿಸಿದ ಬಳಿಕ ಭಾಗವಹಿಸಿದ್ದ ಸಮಸ್ತ ಬಾಂಧವರು ಅಗ್ನಿಯ ಮೂಲಕ ಮೇಣದ ಬತ್ತಿ ಉರಿಸಿ ಪ್ರಾರ್ಥನೆ ಸಲ್ಲಿಸಿದರು. ಬೈಬಲಿನ ಹಳೆ ಮತ್ತು ಹೊಸ ಒಡಂಬಡಿಕೆಯ ಆಯ್ದ ಭಾಗಗಳ ವಾಚನದ ಬಳಿಕ ಧರ್ಮಗುರುಗಳು ಪ್ರವಚನ ಮತ್ತು ಸಂದೇಶ ನೀಡಿದರು. ಪವಿತ್ರ ಜಲದ ಸಿಂಚನ ಮತ್ತು ಆಶೀರ್ವಚನ ಧರ್ಮದ ವಿಶ್ವಾಸ ಮತ್ತು ಸತ್ಯದ ದೃಢೀಕರಣ ಈ ಸಂದಭ್ ನಡೆಯಿತು. ಕ್ರೈಸ್ತ ಸಂತರನ್ನು ಸ್ಮರಿಸಿ ಅವರ ಶುಭಾಶರ್ೀವಾದ ಕೋರಲಾಯಿತು. ಸಂಭ್ರಮದ ಬಲಿಪೂಜೆಯ ಬಳಿಕ ಕ್ರೈಸ್ತ ಬಾಂಧವರು ಈಸ್ಟರ್ ಹಬ್ಬದ ಶುಭಾಶಯವನ್ನು ವಿನಿಮಯ ಮಾಡಿಕೊಂಡರು. ಜಿಲ್ಲೆಯ ವಿವಿಧ ಕೆಥೋಲಿಕ್ ಚಚರ್್ಗಳಲ್ಲಿ ಈಸ್ಟರ್ ಹಬ್ಬದ ಮೂರು ದಿನಗಳ ಕಾರ್ಯಕ್ರಮ ನಿನ್ನೆ ಸಮಾಪ್ತಿಗೊಂಡಿತು. ಆಯಾ ದೇವಾಲಯಗಳ ಧರ್ಮಗುರುಗಳು ಈಸ್ಟರ್ ಹಬ್ಬದ ದಿನದಂದು ವಿಶೇಷ ಪ್ರಾರ್ಥನೆ ಸಲ್ಲಿಸಿ ಶುಭಾಶರ್ೀವಾದವನ್ನು ಬೇಡಿಕೊಂಡರು.