HEALTH TIPS

No title

          ಶೇಣಿ ಶತಕ ಸಂಭ್ರಮೋತ್ಸವ ನಾಳೆಯಿಂದ
  ಕುಂಬಳೆ: ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನರ್ಾಟಕ ಯಕ್ಷಗಾನ ಅಕಾಡೆಮಿ, ಕೇರಳ ಸರಕಾರದ ಭಾರತ್ ಭವನ್ ಹಾಗೂ ಕಾಸರಗೋಡಿನ ಶೇಣಿ ರಂಗಜಂಗಮ ಟ್ರಸ್ಟ್ ಆಶ್ರಯದಲ್ಲಿ ಯಕ್ಷ ದಿಗ್ಗಜ, ಹರಿದಾಸ್ ಡಾ. ಶೇಣಿ ಗೋಪಾಲಕೃಷ್ಣ ಭಟ್ರವರ ಜನ್ಮ ಶತಮಾನೋತ್ಸವದ ಅಂಗವಾಗಿ "ಶೇಣಿ ಶತಕ ಸಂಭ್ರಮೋತ್ಸವ" ಎಂಬ ವಿನೂನ ಕಾರ್ಯಕ್ರಮ ಶನಿವಾರ ಹಾಗೂ ಭಾನುವಾರ ಕಾಸರಗೋಡು ನಗರಸಭಾ ಸಭಾಂಗಣ ಮತ್ತು ಕೂಡ್ಲು ಕುತ್ಯಾಳ ಶ್ರೀಗೋಪಾಲಕೃಷ್ಣ ದೇವಸ್ಥಾನ ಪರಿಸರದಲ್ಲಿ ವೈವಿಧ್ಯಮಯವಾಗಿ ಆಯೋಜಿಸಲಾಗಿದೆ.
   ಏ. 7 ರಂದು ಶನಿವಾರ ಕಾಸರಗೋಡು ನಗರಸಭಾ ಸಭಾಂಗಣದಲ್ಲಿ ಬೆಳಿಗ್ಗೆ 10.30ಕ್ಕೆ ಕನರ್ಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ.ಎಂ.ಎ.ಹೆಗಡೆ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭವನ್ನು ತಂತ್ರಿವರ್ಯ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಉದ್ಘಾಟಿಸುವರು. ವಿದ್ವಾಂಸ ಡಾ.ಎಂ.ಪ್ರಭಾಕರ ಜೋಶಿ ಶೇಣಿ ಗೋಪಾಲಕೃಷ್ಣ ಭಟ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವರು. ಕನ್ನಡ ಸಂಸ್ಕೃತಿ ಇಲಾಖೆಯ ಜಂಟಿ ನಿದರ್ೇಶಕ ಬಲವಂತರಾವ್ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡುವರು. ಕನರ್ಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಜಬ್ಬಾರ್ ಸಮೋ ಸಂಪಾಜೆ, ದಾಮೋದರ ಶೆಟ್ಟಿ, ಭಾರತ್ ಭವನ್ ಕಾರ್ಯದಶರ್ಿ ಪ್ರಮೋದ್ ಪಯ್ಯನ್ನೂರು, ಸಾಂಸ್ಕೃತಿಕೋತ್ಸವ ಪ್ರಧಾನ ಸಂಚಾಲಕ ರವೀಂದ್ರನ್ ಕೊಡಕ್ಕಾಡ್, ಶೇಣಿ ರಂಗಜಂಗಮ ಟ್ರಸ್ಟ್ನ ಶೇಣಿ ಶ್ಯಾಮರಾಜ್ ಉಪಸ್ಥಿತರಿರುವರು.
  ಬಳಿಕ ನಡೆಯಲಿರುವ ಶೇಣಿ ದಶಮುಖ ದರ್ಶನ ವಿಚಾರ ಸಂಕಿರಣದಲ್ಲಿ ಡಾ.ಎಂ.ಪ್ರಭಾಕರ ಜೋಶಿ ಶಿಖರೋಪನ್ಯಾಸ ನೀಡುವರು. ಹಿರಿಯ ಚಿಂತಕ ಲಕ್ಷ್ಮೀಶ ತೋಲ್ಪಾಡಿ(ಆಧ್ಯಾತ್ಮಿಕ ಶೇಣಿ), ಹರಿದಾಸ ಅಂಬಾತನಯ ಮುದ್ರಾಡಿ((ಹರಿದಾಸ ಶೇಣಿ), ಸೇರಾಜೆ ಸೀತಾರಾಮ ಭಟ್(ಶೇಣಿ ವೇಶಾಭಿವ್ಯಕ್ತಿ), ಡಾ.ಜಿ.ಎಲ್ ಹೆಗಡೆ(ಶೇಣಿ ಅಥರ್ಾಭಿವ್ಯಕ್ತಿ), ಎಂ.ಕೆ.ರಮೇಶ ಆಚಾರ್ಯ(ಶೇಣಿ ಒಡನಾಟ) ವಿಯಗಳಲ್ಲಿ ಉಪನ್ಯಾಸ ನೀಡುವರು. ಬಳಿಕ ಕನ್ನಡ ಯುವ ಬಳಗ ಕಾಸರಗೋಡು ತಮಡದಿಂದ ಯಕ್ಷಗಾನ ತಾಳಮದ್ದಳೆ, ಭಾರತ್ ಭವನ್ ಸಾಮಸ್ಕೃತಿಕೋತ್ಸವದ ಅಂಗವಾಗಿ ಬಹುಭಾಷಾ ಕವಿಗೋಷ್ಠಿ, ವಿವಿಧ ತಂಡಗಳಿಂದ ಸಾಮಸ್ಕೃತಿಕ ವೈವಿಧ್ಯಗಳು ನಡೆಯಲಿವೆ.
  ಏ.8 ರಂದು ಭಾನುವಾರ ಕುತ್ಯಾಳ ಶ್ರೀಗೋಪಾಲಕೃಷ್ಣ ಕ್ಷೇತ್ರ ಸಭಾಂಗಣದಲ್ಲಿ ನಡೆಯಲಿರುವ ಎರಡನೇ ದಿನದ ಮೊದಲ ಕಾರ್ಯಕ್ರಮವಾಗಿ ಬೆಳಿಗ್ಗೆ 10ಕ್ಕೆ ಶೇಣಿ ಪ್ರಸಂಗ ಗಾಯನ ಪ್ರಸ್ತುತಗೊಳ್ಳಲಿದ್ದು, ಭಾಗವತರಾದ ಪದ್ಯಾಣ ಗಣಪತಿ ಭಟ್, ಪುತ್ತಿಗೆ ರಘುರಾಮ ಹೊಳ್ಳ, ಚೆಂಡೆ-ಮದ್ದಳೆಯಲ್ಲಿ ಪದ್ಯಾಣ ಶಂಕರನಾರಾಯಣ ಭಟ್, ಅಡುರು ಗಣೇಶ್ ರಾವ್, ಚಕ್ರತಾಳದಲ್ಲಿ ದಿವಾಣ ಶಿವಶಂಕರ ಭಟ್ ಭಾಗವಹಿಸುವರು. ನಾ.ಕಾರಂತ ಪೆರಾಜೆ ಕಾರ್ಯಕ್ರಮ ನಿರೂಪಿಸುವರು.
   11.30 ರಿಂದ ಶೇಣಿ ಪ್ರಸಂಗ ದರ್ಶನ ಎಂಬ ವಿಚಾರ ಸಂಕಿರಣದಲ್ಲಿ ಕಾಸರಗೊಡು ಸರಕಾರಿ ಕಾಲೇಜಿನ ಯಕ್ಷಗಾನ ಅಧ್ಯಯನ ಕೇಂದ್ರದ ಸಂಯೋಜಕ ಡಾ.ರತ್ನಾಕರ ಮಲ್ಲಮೂಲೆ ಉಪನ್ಯಾಸ ನೀಡುವರು. ಕೇರಳ ಪಾತರ್ಿಸುಬ್ಬ ಯಕ್ಷಗಾನ ಕಲಾಕ್ಷೇತ್ರದ ನಿಕಟಪೂರ್ವ ಅಧ್ಯಕ್ಷ ಜಯರಾಮ ಮಂಜತ್ತಾಯ ಎಡನೀರು ಅಧ್ಯಕ್ಷತೆ ವಹಿಸುವರು. ಕೇರಳ ತುಳು ಅಕಡೆಮಿ ಸದಸ್ಯ ಎಂ.ಉಮೇಶ ಸಾಲ್ಯಾನ್, ಶಂಕರ ರೈ ಮಾಸ್ತರ್ ಉಪಸ್ಥಿತರಿರುವರು. ಶೇಣಿ ವೇಣುಗೋಪಾಲ ಭಟ್ ನಿರೂಪಿಸುವರು. ಅಪರಾಹ್ನ 1.30 ರಿಂದ ಯಕ್ಷಗಾನ ತಾಳಮದ್ದಳೆ ಕೃಷ್ಣ ಸಂಧಾನ ನಡೆಯಲಿದ್ದು, ಹಿಮ್ಮೇಳದಲ್ಲಿ ಕುರಿಯ ಗಣಪತಿ ಶಾಸ್ತ್ರಿ, ಎಂ.ಲಕ್ಷ್ಮೀಶ ಅಮ್ಮಣ್ಣಾಯ, ಬಿ.ಸೀತಾರಾಮ ತೋಲ್ಪಡಿತ್ತಾಯ ಭಾಗವಹಿಸುವರು. ಮುಮ್ಮೇಳದಲ್ಲಿ ಕುಂಬಳೆ ಸುಂದರ ರಾವ್, ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ, ಡಾ.ಎಂ.ಪ್ರಭಾಕರ ಜೋಶಿ, ಡಾ.ರಮಾನಂದ ಬನಾರಿ, ವಿದ್ವಾನ್.ಉಮಾಕಾಂತ ಭಟ್ ಮೇಲುಕೋಟೆ, ರಾಜೇಂದ್ರ ಕಲ್ಲೂರಾಯ ಎಡನೀರು ಭಾಗವಹಿಸುವರು.
   ಸಂಜೆ 4ಕ್ಕೆ ನಡೆಯಲಿರುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕನರ್ಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ.ಎಂ.ಎ.ಹೆಗಡೆ ವಹಿಸುವರು. ಕನರ್ಾಟಕ ಲೋಕಸೇವಾ ಆಯೋಗದ ಆಯುಕ್ತ ಡಾ.ಟಿ.ಶ್ಯಾಮ ಭಟ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಹಿರಿಯ ಪತ್ರಕರ್ತ ಎ.ಈಶ್ವರಯ್ಯ ಸಮಾರೋಪ ಭಾಷಣ ಮಡುವರು. ಕೂಡ್ಲು ಕ್ಷೇತ್ರದ ಮೊಕ್ತೇಸರ ಕೆ.ಜಿ.ಶ್ಯಾನುಭೋಗ್,ಧಾಮರ್ಿಕ ಮುಂದಾಳು ಕೆ.ಎನ್ ವೆಂಕಟರಮಣ ಹೊಳ್ಳ ಕಾಸರಗೋಡು ಉಪಸ್ಥಿತರಿರುವರು. ಬಳಿಕ ಬಾಲಯಕ್ಷಕೂಟ ಕದ್ರಿ ಇವರಿಂದ ಸುದರ್ಶನ ವಿಜಯ ಹಾಗೂ ಕೂಡ್ಲು ಕುತ್ಯಾಳ ಶ್ರೀಗೋಪಾಲಕೃಷ್ಣ ಯಕ್ಷಗಾನ ನಾಟಕ ಸಭಾ ದವರಿಂದ ನರಕಾಸುರ ವಧೆ-ಗರುಡ ಗರ್ವಭಂಗ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳುವುದರೊಂದಿಗೆ ಸಮಾರಂಭ ಸಮಾರೋಪಗೊಳ್ಳಲಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries