ಮಧೂರು ಶ್ರೀ ಕಾಳಿಕಾಂಬಾ ಮಠದ ಧರ್ಮದೈವಗಳ ಪುನರ್ಪ್ರತಿಷ್ಠಾ ಬ್ರಹ್ಮಕಲಶೋತ್ಸವ
ಸತ್ ಚಿಂತನೆಯ ಪ್ರಯತ್ನಕ್ಕೆ ಸತ್ ಫಲವು ನಿಶ್ಚಯ : ಆನೆಗುಂದಿ ಶ್ರೀ
ಮಧೂರು: ಈ ಪ್ರಪಂಚ ಭಗವಂತನ ಇಚ್ಛೆಯಂತೆ ನಡೆಯುತ್ತದೆ. ನಾವು ನಮ್ಮ ಪಯತ್ನವನ್ನು ಮಾಡಬೇಕು. ಇಲ್ಲಿ ನಾವು ನೆಪ ಮಾತ್ರ. ಭಗವಂತ ಎಲ್ಲವನ್ನೂ ನಡೆಸುವುದಿದ್ದಲ್ಲಿ ನಾವ್ಯಾಕೆ ಪ್ರಯತ್ನ ಮಾಡಬೇಕು ಎನ್ನುವ ಯೋಚನೆ ಸಲ್ಲದು. ಯಾವಾಗ ಏನು ಆಗಬೇಕು ಎನ್ನುವುದು ಪೂರ್ವ ನಿರ್ಧರಿತ, ಭಗವಂತನ ಸೂತ್ರದಂತೆ ಆಡುವ ಲೀಲೆಯಲ್ಲಿ ನಾವು ಕೇವಲ ಪಾತ್ರಧಾರಿಗಳು. ಇಲ್ಲಿ ನಮ್ಮ ಇಚ್ಛೆಯು ನಗಣ್ಯ ಎಂದು ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರ ಪರಮಪೂಜ್ಯ ಜಗದ್ಗುರು ಅನಂತಶ್ರೀ ವಿಭೂತ ಕಾಳಹಸ್ತೇಂದ್ರ ಮಹಾಸ್ವಾಮಿಗಳವರು ನುಡಿದರು.
ಅವರು ಮಧೂರು ಶ್ರೀ ಕಾಳಿಕಾಂಬಾ ಮಠದಲ್ಲಿ ಭಾನುವಾರ ನಡೆದ ಧರ್ಮದೈವಗಳ ಪುನರ್ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಧಾಮರ್ಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಸತ್ ಚಿಂತನೆಯ ಪ್ರಯತ್ನಕ್ಕೆ ಸತ್ ಫಲವನ್ನು ಖಂಡಿತ ಭಗವತಿಯಾದ ಮಾತೆಯು ಅನುಗ್ರಹಿಸುತ್ತಾಳೆ ಎಂದು ತಿಳಿಸಿದರು.
ಇದೇ ವೇಳೆ ಅವರು ಮಹಾಸಂಸ್ಥಾನದ ವತಿಯಿಂದ ವರ್ಷಂಪ್ರತಿ ನಡೆಸಲಾಗುವ ಆಚಾರ್ಯ ಶಂಕರರ 1230ನೇ ಜಯಂತ್ಯುತ್ಸವವನ್ನೂ ದೀಪ ಬೆಳಗಿಸಿ ಉದ್ಘಾಟಿಸಿದರು. ಇಂದಿನ ಈ ಸುದಿನವು ಆಚಾರ್ಯ ಶಂಕರರು ನಮ್ಮೆಲ್ಲರ ಪಾಪವನ್ನು ತೊಳೆಯಲು ಅವತರಿಸಿದ ದಿನ. ಆಚಾರ್ಯ ಶಂಕರರು ಅವತರಿಸದೇ ಇದ್ದಲ್ಲಿ ಇತರ ಮತಗಳ ಧಾಳಿಯಿಂದ ಹಿಂದೂ ಧರ್ಮವು ಅಪಾರ ಹಾನಿಯುಂಟಾಗುವ ಸಾಧ್ಯತೆ ಇತ್ತು. ಅವರ ಅವತಾರದಿಂದ ಮಾತ್ರ ಹಿಂದೂ ಧರ್ಮವು ಉಳಿದು, ಹೊಸ ಆಯಾಮ ಚೌಕಟ್ಟಿನಿಂದ ವ್ಯವಸ್ಥಿತವಾಗಿ ಸುದೃಢವಾಗಿ ಬೆಳೆಯಲು ಸಾಧ್ಯವಾಯಿತು. ಇದಕ್ಕಾಗಿ ಅವರು ಪೂಜನೀಯರು, ಸರ್ವವಂದ್ಯರಾಗಿದ್ದಾರೆ. ಸಮಸ್ತ ಹಿಂದೂಗಳು ಅವರಿಗೆ ಚಿರ ಋಣಿಗಳಾಗಿರುತ್ತಾರೆ ಎಂದು ಅವರು ಶಂಕರ ತತ್ವಗಳನ್ನು ವಿವರಿಸಿ ತಿಳಿಸಿದರು.
ಸಭೆಯ ಅಧ್ಯಕ್ಷತೆಯನ್ನು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಬಿ.ಜನಾರ್ಧನ ಆಚಾರ್ಯ ಕೂಡ್ಲು ಅವರು ವಹಿಸಿದ್ದರು. ಮಂಜೇಶ್ವರ ಶ್ರೀ ಕಾಳಿಕಾಪರಮೇಶ್ವರೀ ದೇವಸ್ಥಾನದ ಅಧ್ಯಕ್ಷ ಪೋಳ್ಯ ಉಮೇಶ ಆಚಾರ್ಯ, ಆರಿಕ್ಕಾಡಿ ಕಾಳರ್ೆ ಶ್ರೀ ಕಾಳಿಕಾಂಬಾ ದೇವಸ್ಥಾನದ ಅಧ್ಯಕ್ಷ ಎಡನೀರು ಸುಧಾಕರ ಆಚಾರ್ಯ, ಮಧೂರು ಗ್ರಾಮ ಪಂಚಾಯತು ಸದಸ್ಯ ಎಂ.ಆರ್ ಯೋಗೀಶ್, ಮಹಿಳಾ ವೃಂದದ ಅಧ್ಯಕ್ಷೆ ಕನಕ ಪ್ರಭಾಕರ ಆಚಾರ್ಯ ಕೋಟೆಕ್ಕಾರು, ಯುವಕ ಸಂಘದ ಸಂಚಾಲಕ ಎಂ.ಮಹೇಶ ಆಚಾರ್ಯ ಮಧೂರು, ಭಜನಾ ಸಂಘದ ಅಧ್ಯಕ್ಷ ಅಡ್ಕ ಪದ್ಮನಾಭ ಆಚಾರ್ಯ ಅವರು ಮಾತನಾಡಿದರು. ಎಲ್ಲಾ ಸಮಾಜ ಬಾಂಧವರ ಆಹೋರಾತ್ರಿಯ ಪರಿಶ್ರಮ ಹಾಗೂ ದೈವದೇವರುಗಳ ಮತ್ತು ಶ್ರೀ ಗುರುವರ್ಯರ ಕೃಪಾಶೀವರ್ಾದದಿಂದ ಕೇವಲ ಒಂದು ತಿಂಗಳ ಕಾಲಾವಧಿಯೊಳಗೆ ಪುನರ್ ನಿಮರ್ಾಣಕಾರ್ಯವು ಸಂಪನ್ನಗೊಂಡು ಬ್ರಹ್ಮಕಲಶೋತ್ಸವವು ಜರಗಲು ಸಾಧ್ಯವಾಗಿದೆ. ಸಂಘಟನೆಯ ಶಕ್ತಿಯಿಂದ ಅಸಾಧ್ಯವಾದುದು ಸಾಧ್ಯವಾಗುವಂತಾಗಿದೆ ಎಂದು ಸಮಿತಿ ಪ್ರಧಾನ ಕಾರ್ಯದಶರ್ಿ ವೈ.ಧಮರ್ೇಂದ್ರ ಆಚಾರ್ಯ ಮಧೂರು ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ತಿಳಿಸಿದರು. ಸಮಿತಿ ಉಪಾಧ್ಯಕ್ಷ ಕೆ.ಪ್ರಭಾಕರ ಆಚಾರ್ಯ ಕೋಟೆಕ್ಕಾರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಆನೆಗುಂದಿ ಮಠದ ವಿದ್ಯಾಥರ್ಿಗಳಿಂದ ವೇದಘೋಷ ನಡೆಯಿತು. ಸಮಾಜದ ಶಿಷ್ಯವೃಂದವು ಹೆಚ್ಚಿನ ಸಂಖ್ಯೆಯಲ್ಲಿದ್ದು ಕಾರ್ಯಕ್ರಮವನ್ನು ಯಶಸ್ವೀಗೋಳಿಸಿದರು. ಇದಕ್ಕೆ ಮುಂಚಿತವಾಗಿ ಬ್ರಹ್ಮಕಲಶೋತ್ಸವದ ವೈದಿಕ ಕಾರ್ಯಕ್ರಮಗಳು ತಂತ್ರಿವರ್ಯ ಬ್ರಹ್ಮಶ್ರೀ ಮಾಯಿಪ್ಪಾಡಿ ಮಾಧವ ಆಚಾರ್ಯ ಅವರ ನೇತೃತ್ವದಲ್ಲಿ ನಡೆಯಿತು.