ಬೇಸಗೆ ಮಳೆ; ಪಯಸ್ವಿನಿಯಲ್ಲಿ ಬಲಗೊಂಡ ನೀರ ಹರಿವು
ಮುಳ್ಳೇರಿಯ: ಜನರಿಗೆ, ಸಸ್ಯಜಾಲಗಳಿಗೆ, ಪ್ರಾಣಿ ಸಂಕುಲಕ್ಕೆ ನೀರುಣಿಸುವ ಜೀವಜಲ ಪಯಸ್ವಿನಿ. ವಾತಾವರಣದ ಅತಿ ಬಿಸಿ ಮಾಚರ್್ ತಿಂಗಳಲ್ಲೇ ಇದು ಬತ್ತ ತೊಡಗಿದ್ದು ನೀರಿಗಾಗಿ ಹಾಹಾಕಾರ ಆರಂಭಗೊಂಡಿತ್ತು. ಆದರೆ ಇದೇ ಸಂದರ್ಭದಲ್ಲಿ ಆಗಾಗ ಸುರಿಯುತ್ತಿರುವ ಬೇಸಗೆ ಮಳೆ ನಿಟ್ಟುಸಿರುವಂತೆ ಮಾಡಿದೆ.
ಸಾಕಷ್ಟು ಕೃಷಿಕರು ಪಯಸ್ವಿನಿ ನದಿಯನ್ನು ಆಶ್ರಯಿಸುತ್ತಾರೆ. ಕುಡಿಯುವ ನೀರಿಗಾಗಿ ಉಪಯೋಗಿಸುವ ಸಾಕಷ್ಟು ಜನರು ಈ ನದಿಯ ಇಕ್ಕಡೆಯಲ್ಲಿ ವಾಸಿಸುತ್ತಿದ್ದಾರೆ. ಹೊರತಾಗಿ ಕಿರು ನೀರಾವರಿ ಯೋಜನೆಗಳು, ಕುಡಿಯುವ ನೀರಿನ ಯೋಜನೆಗಳು ಪಯಸ್ವಿನಿಯ ಉದ್ದಗಲಕ್ಕೂ ಹರಡಿಕೊಂಡಿದೆ. ನದಿ ಬತ್ತಿದಾಗ ಪ್ರಾಣಿ-ಪಕ್ಷಿಗಳ, ಜಲ ಚರಗಳು ವಿಲಿವಿಲಿ ಒದ್ದಾಡ ಬೇಕಾಗುತ್ತದೆ. ಜೊತೆಗೆ ಮನುಷ್ಯನೂ. ಏಪ್ರಿಲ್-ಮೇ ತಿಂಗಳಲ್ಲಿ ಅತೀ ಹೆಚ್ಚು ನೀರಿನ ಉಪಯೋಗವಾಗುವ ಕಾರಣ ಬಲು ಬೇಗ ನದಿ ಬತ್ತುತ್ತದೆ. ಆದರೆ ಈ ವರ್ಷ ಮಾಚರ್್ ಆರಂಭದಲ್ಲಿಯೇ ನದಿಯ ನೀರಿನ ಹರಿವು ಕಡಿಮೆಯಾಗಿ ನದಿಯ ಅಸ್ಥಿಪಂಜರ ಕಾಣತೊಡಗಿತ್ತು. ಆಗ ಸುರಿದ ಮಳೆಯು ನೀರಿಲ್ಲ ಎಂಬ ಕೂಗನ್ನು ತಗ್ಗಿಸಿತು. ಹಾಗೆಯೇ ಪಯಸ್ವಿನಿ ನದಿಯಲ್ಲಿ ಸ್ವಲ್ಪ ನೀರಿನ ಹರಿವು ಕಾಣಿಸಿಕೊಂಡಿತ್ತು. ಆದರೆ ಪುನಃ ಬಿಸಿಲ ಬೇಗೆ ಅಸಾಧ್ಯವಾಗಿ ನೀರಿನ ಕೊರತೆ ಎದುರಾಯಿತು. ಈಗ ಪುನಃ ಬೇಸಗೆ ಮಳೆ ಪದೇ ಪದೇ ಬರುತ್ತಿರುವ ಕಾರಣ ಪಯಸ್ವಿನಿ ನದಿಯಲ್ಲೂ ನೀರಿನ ಹರಿವು ಹೆಚ್ಚಾಗಿದೆ.
ಅಡಕೆ ಕೃಷಿಗೆ ಹೆಚ್ಚು ಉಪಯೋಗ:
ಈ ದಿನಗಳಲ್ಲಿ ಅಡಕೆ ಕೃಷಿಗೆ ಹೆಚ್ಚಾಗಿ ನೀರು ಉಪಯೋಗವಾಗುತ್ತದೆ. ಪಯಸ್ವಿನಿಗೆ ಹೊಂದಿಕೊಂಡು ಹೇರಳವಾಗಿ ಅಡಕೆ ಮತ್ತು ತೆಂಗಿನ ಕೃಷಿ ಇದೆ. ನದಿಯ ನೀರೇ ಇಲ್ಲಿನ ಮಂದಿಗೆ ಜಲಮೂಲ. ನದಿಯ ನೀರಿನ ಹರಿವು ನಿಂತಾಗ ಬೊಬ್ಬೆ ಆರಂಭವಾಗುತ್ತದೆ. ಅಡಿಕೆ-ತೆಂಗು ಕೃಷಿಗೆ ಈ ದಿನಗಳಲ್ಲಿ ಹೆಚ್ಚು ನೀರು ಅಗತ್ಯವಿರುವ ಕಾರಣ ಎಡೆ ಬಿಡದೆ ಕೃಷಿಕರ ಮೋಟಾರು ಓಡುತ್ತಿರುತ್ತದೆ. ನದಿಯಲ್ಲೇ ಹೊಂಡತೋಡಿ ನೀರನ್ನು ಹೀರಲು ಆರಂಭ ಮಾಡುವ ಕಾರಣ ನದಿ ಬಯಲಾಗುತ್ತದೆ. ಇದೆಲ್ಲಕ್ಕೂ ಈಗ ಸುರಿಯುತ್ತಿರುವ ಮಳೆ ಪರಿಹಾರ ನೀಡಿದೆ. ಇನ್ನು ಏನಿದ್ದರೂ ಒಂದು ತಿಂಗಳ ಕಾಲ. ನದಿಯನ್ನು ಆಶ್ರಯಿಸಿದ ಎಲ್ಲರೂ ನೀರಿನ ತತ್ವಾರವನ್ನು ಅನುಭವಿಸಲಾರರು. ಆಗ ಮಳೆಗಾಲವೂ ಆರಂಭವಾದೀತು. ನೀರ ಹರಿವು ಆರಂಭವಾದ ಕಾರಣ ನದಿಯನ್ನು ದಾಟಿ ಹೋಗುವ ವಾಹನಗಳಿಗೆ ಅಡಚಣೆಯುಂಟಾಗಿದೆ.
ನೀರು ಸರಬರಾಜು ಯೋಜನೆಗಳು:
ಪಯಸ್ವಿನಿಯ ಉದ್ದಗಲಕ್ಕೂ ಸಾಕಷ್ಟು ಕುಡಿಯುವ ನೀರು ಮತ್ತು ಕೃಷಿ ಉಪಯೋಗಕ್ಕಾಗಿರುವ ಸಾರ್ವಜನಿಕ ನೀರು ಸರಬರಾಜು ಯೋಜನೆಗಳಿವೆ. ಈಗಾಗಲೇ ಬೆಳ್ಳೂರು ಗ್ರಾಮ ಪಂಚಾಯತಿನ ಜನರಿಗೆ ನೀರು ನೀಡುವ ಯೋಜನೆಗಳಂತಹಾ ಕೆಲವು ಯೋಜನೆಗಳು ಜ್ಯಾರಿಗೊಳ್ಳಬೇಕಷ್ಟೇ! ಅಂದರೆ ಊರೆಲ್ಲಾ ನೀರು ಹರಿಸುವ ಯೋಜನೆಗಳಿಗೆ ಪಯಸ್ವಿನಿಯೇ ಮೂಲ. ಕಾಸರಗೋಡು ಪೇಟೆಯ ಮಂದಿಗೂ ನೀರುಣಿಸುವ ಬಾವಿಕ್ಕೆರೆ ಬೃಹತ್ತ್ ನೀರು ಸರಬರಾಜು ಯೋಜನೆಗೂ ಈ ಪಯಸ್ವಿನಿಯ ನೀರೇ ಮೂಲ. ಇವೆಲ್ಲವೂ ನೀರ ಹರಿವು ಹೆಚ್ಚದ ಕಾರಣ ಸಜೀವವಾಗಬಹುದು.
ಗ್ರಾಮೀಣ ಪ್ರದೇಶದಲ್ಲಿ ಸಮಸ್ಯೆ:
ನದಿಯನ್ನು ಆಶ್ರಯಿಸಿದವರಿಗೆ ಸಮಸ್ಯೆ ಇಲ್ಲದಿದ್ದರೂ ಉಳಿದ ಗ್ರಾಮೀಣ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಇದ್ದೇ ಇದೆ. ಈಗ ಸುರಿಯುತ್ತಿರುವ ಮಳೆಯು ಕೆರೆ, ಬಾವಿಗಳನ್ನು ಆಶ್ರಯಿಸಿರುವ ಜನರಿಗೆ ಹೆಚ್ಚಿನ ಪ್ರಯೋಜನ ಲಭಿಸಿಲ್ಲ. ಇವರು ನೀರಿಗಾಗಿ ಆಶ್ರಯಿಸಿರುವ ಜಲಮೂಲಗಳಲ್ಲಿ ನೀರಿನ ಒಸರು ಹೆಚ್ಚಾದಾಗ ಇವರು ನಿಟ್ಟುಸಿರು ಬಿಡಬಹುದು. ಅದಕ್ಕೆ ಬೇಸಗೆ ಮಳೆ ಇನ್ನಷ್ಟು ರಭಸವಾಗಿ ಸುರಿಯಬೇಕು.
ಜಲಮಾಲಿನ್ಯ:
ನದಿಯ ನೀರು ಕಡಿಮೆಯಾಗುತ್ತಿದ್ದಂತೆಯೇ ನೀರಿನ ಬಣ್ಣ ಬದಲಾಗುತ್ತದೆ. ಮಾಲಿನ್ಯ ಹೆಚ್ಚಾಗುತ್ತದೆ. ಈ ಸಂದರ್ಭದಲ್ಲಿ ಜಲಮಾಲಿನ್ಯವಾಗದಂತೆ ಸಾರ್ವಜನಿಕರು ಎಚ್ಚರ ವಹಿಸುವುದು ಅನಿವಾರ್ಯ. ಇದ್ದ ಬಿದ್ದ ನೀರಿನಲ್ಲಿ ವಾಹನವನ್ನು ತೊಳೆಯುವುದಕ್ಕೂ ಕಡಿವಾಣ ಹಾಕಬೇಕಾಗುತ್ತದೆ. ಇಲ್ಲದಿದ್ದಲ್ಲಿ ಇದೇ ನೀರನ್ನು ಕುಡಿಯುವ ಮಂದಿಗೆ ಸಮಸ್ಯೆಯಾಗಲಿದೆ. ಮಲಿನ ನೀರನ್ನು ಕುಡಿದವರು ರೋಗಕ್ಕೆ ತುತ್ತಾಗಲಿದ್ದಾರೆ. ಈ ಬಗ್ಗೆ ಅಧಿಕೃತರು ಮುಂಜಾಗರೂಕತೆ ವಹಿಸಬೇಕು.
ಉಪ್ಪು ನೀರಿನಿಂದ ಮುಕ್ತಿ:
ಕಾಸರಗೋಡು ಪೇಟೆ, ಮುಳಿಯಾರು, ಚೆಂಗಳ ಗ್ರಾಮ ಪಂಚಾಯತು ಮೊದಲಾದ ಪ್ರದೇಶಗಳಿಗೆ ನೀರು ಸರಬರಾಜು ಮಾಡುವ ಬಾವಿಕ್ಕೆರೆ ಕುಡಿಯುವ ನೀರು ಯೋಜನೆಗೂ ಪಯಸ್ವಿನಿ ನದಿಯ ನೀರೇ ಬೇಕು. ನದಿಯಲ್ಲಿ ನೀರು ಕಡಿಮೆಯಾಗುತ್ತಿರುವಂತೆಯೇ ಈ ಪ್ರದೇಶದವರಿಗೆ ಉಪ್ಪು ನೀರು ಕುಡಿಯಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಪಯಸ್ವಿನಿ ನದಿಗೆ ಉಪ್ಪು ನೀರನ್ನು ತಡೆಯುವ ತಾತ್ಕಾಲಿಕ ತಡೆಗೋಡೆ ಬಾವಿಕ್ಕೆರೆ ಸಮೀಪ ಆಲೂರಿನಲ್ಲಿ ನಿಮರ್ಾಣ ನಡೆದರೂ ಪೇಟೆಯ ಮಂದಿಗೆ ಉಪ್ಪಿನ ರುಚಿ ಲಭಿಸುತ್ತಿದೆ. ನದಿಯ ನೀರು ಬತ್ತಿದಷ್ಟೂ ಹೆಚ್ಚು ಹೆಚ್ಚು ಉಪ್ಪು ತಿನ್ನಬೇಕಾಗುತ್ತದೆ. ಆದರೆ ಇವೆಲ್ಲದರಿಂದಲೂ ಈ ಬೇಸಗೆ ಮಳೆ ಮುಕ್ತಿ ನೀಡಬಹುದು.
ಆದರೂ ನೀರಿನ ಕೊರತೆಯನ್ನು ಮನಗಂಡು ಸೂಕ್ತ ಮುಂಜಾಗ್ರತೆ ಅನಿವಾರ್ಯವಾಗಿದೆ. ಇದು ಮುಂದಿನ ದಿನಗಳಲ್ಲಿ ಒದ್ದಾಡು ಪರಿಸ್ಥಿತಿಯಿಂದ ಪಾರು ಮಾಡಬಹುದು.