HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                  ಪಾರಂಪರಿಕ ಸ್ಮಾರಕ ಸಂರಕ್ಷಣೆ ಯೋಜನೆಯಂತೆ ಕೆಂಪು ಕೋಟೆ ದತ್ತು: ಸಚಿವ ಮಹೇಶ್ ಶಮರ್ಾ ಸ್ಪಷ್ಟನೆ
   ನವದೆಹಲಿ: ಐತಿಹಾಸಿಕ ಕೆಂಪು ಕೋಟೆಯನ್ನು ಕೇಂದ್ರ ಸಕರ್ಾರ ಹರಾಜು ಹಾಕಿದೆ ಎನ್ನುವ ಪ್ರತಿಪಕ್ಷ ಕಾಂಗ್ರೆಸ್ ಆರೊಪವನ್ನು ಕೇಂದ್ರ ಸಂಸ್ಕೃತಿ ಇಲಾಖೆ ರಾಜ್ಯ ಸಚಿವ ಮಹೇಶ್ ಶಮರ್ಾ ತಳ್ಳಿಹಾಕಿದ್ದಾರೆ. ಪಾರಂಪರಿಕ ತಾಣದ ಮೌಲ್ಯವರ್ಧನೆಗಾಗಿ ಅದನ್ನು ದಾಲ್ಮಿಯಾ ಭಾರತ್ ಗ್ರೂಪ್ ದತ್ತು ಸ್ವೀಕರಿಸಿದೆ. ಇದು ಕೇಂದ್ರ ಸಕರ್ಾರದ ಯೋಜನೆಯ ಭಾಗವಾಗಿ ನಡೆದಿದೆ ಎಂದಿದ್ದಾರೆ.
    2017ರ ವಿಶ್ವ ಪ್ರವಾಸೋದ್ಯಮ ದಿನದಂದು ಭಾರತ ಸಕರ್ಾರವು ಪಾರಂಪರಿಕ ತಾಣಗಳ ಮೌಲ್ಯವರ್ಧನೆಗಾಗಿ ಅವುಗಳನ್ನು ದತ್ತುತೆಗೆದುಕೊಳ್ಳುವ ಆಸಕ್ತಿ ಹೊಂದಿದವರು ಸಕರ್ಾರಕ್ಕೆ ಅಜರ್ಿ ಸಲ್ಲಿಸಬಹುದು ಎಂದು ಘೊಷಿಸಿತ್ತು. ರಾಷ್ಟ್ರಪತಿಗಳು ಈ ಬಗ್ಗೆ ಘೋಷಣೆ ಮಾಡಿದ್ದರು. ಅದರಂತೆಯೇ ದಾಲ್ಮಿಯಾ ಗ್ರೂಪ್ ಕೆಂಪು ಕೋಟೆಯ ಕೆಲವು ಸೇವೆಗಳನ್ನು ವಹಿಸಿಕೊಂಡಿದೆ. ಇದರಲ್ಲಿ ಲಾಭದ ಉದ್ದೇಶವಿಲ್ಲ. ಇದೇ ಯೋಜನೆಯಡಿಯಲ್ಲಿ ದೇಶದ ಇನ್ನೂ ಹಲವಾರು ಸ್ಮಾರಕಗನ್ನು ವಿವಿಧ ಸಂಸ್ಥೆಗಳಿಗೆ ದತ್ತು ನೀಡುವ ಉದ್ದೇಶ ಹೊಂದಲಾಗಿದೆ ಎಂದು ಶಮರ್ಾ ಹೇಳಿದರು.
    ಇದು 2017 ರ ಸೆಪ್ಟೆಂಬರ್ 27ರಿಂದ ಪ್ರಾರಂಭವಾಗಿದೆ. ಯಾರೇ ಆಗಲಿ ಯಾವುದೇ ಪ್ರಶ್ನೆಗಳನ್ನು ಕೇಳುವುದಾದಲ್ಲಿ ನಮ್ಮನ್ನು ಸಂಪಕರ್ಿಸಬಹುದು. ಶ್ರೀಮಂತ ಸಾಂಸ್ಕೃತಿಕ ಮತ್ತು ನೈಸಗರ್ಿಕ ಪರಂಪರೆಯನ್ನು ಸಂರಕ್ಷಿಸಲು ಮತ್ತು ದೇಶದಾದ್ಯಂತ ಪ್ರವಾಸೋದ್ಯಮವನ್ನು ಉತ್ತೇಜಿಸಲು 'ಅಡಾಪ್ಟ್ ಎ ಹೆರಿಟೇಜ್-ಅಪ್ನಿ ಧರೋಹರ್, ಅಪ್ನಿ ಪೆಹಚಾನಿ'  ಹೆಸರಿನ ಯೋಜನೆ ಪ್ರಾರಂಭಿಸಲಾಗಿದೆ. ಈ ಯೋಜನೆಯಡಿಯಲ್ಲಿ ಕಾಪರ್ೋರೇಟ್ ಸಂಸ್ಥೆಗಳು ಹಾಗೂ ನಾಗರಿಕರು ಪ್ರವಾಸೀ ಸ್ಥಳಗಳಲ್ಲಿ ಮೂಲ ಸೌಕರ್ಯ, ಸುಧಾರಿತ ಸೌಕರ್ಯಗಳ ನಿಮರ್ಾಣ, ಕಾಯರ್ಾಚರಣೆ ಮತ್ತು ನಿರ್ವಹಣೆಗಾಗಿ  ಅವುಗಳನ್ನು ದತ್ತು ಪಡೆಯಬಹುದು. ಇದೇ ಯೋಜನೆಯಡಿಯಲ್ಲಿ ದಾಲ್ಮಿಯಾ ಗ್ರೂಪ್ ಕೆಂಪು ಕೋಟೆಯ ಕೆಲ ಸೇವೆಗಳನ್ನು ನಿರ್ವಹಣೆ ಮಾಡುವುದಾಗಿ ಒಪ್ಪಿಕೊಂಡಿದೆ. ಇದಕ್ಕಾಗಿ ಸಂಸ್ಥೆಯು ವರ್ಷಕ್ಕೆ 5 ಕೋಟಿ ರೂ. ಲೀಸ್ ಒಪ್ಪಂದ ಮಾಡಿಕೊಂಡಿದೆ. ಈ ಸಂಬಂಧ ದಾಲ್ಮಿಯಾ ಭಾರತ್ ಲಿಮಿಟೆಡ್ ಸಂಸ್ಥೆಯು ತಿಳುವಳಿಕೆ ಪತ್ರಕ್ಕೆ ಸಹಿ ಮಾಡಿದೆ. ಮುಂದಿನ 5 ವರ್ಷಗಳಿಗೆ ಸಂಸ್ಥೆಯು ಸ್ಮಾರಕವನ್ನು ದತ್ತು ಪಡೆದಿದೆ ಎನ್ನಲಾಗಿದ್ದು ಇದೀಗ ಕೆಂಪುಕೋಟೆಯು ಖಾಸಗಿ ವಲಯದ ಕಂಪೆನಿಗಳು ಇರುವ "ಸ್ಮಾರಕ ಮಿತ್ರ' ಪಟ್ಟಿಗೆ ಸೇರಿದೆ.
        ಕಾಂಗ್ರೆಸ್ ಟೀಕೆ
    ದೆಹಲಿಯ ಐತಿಹಾಸಿಕ ಸ್ಮಾರಕ ಕೆಂಪು ಕೋಟೆಯನ್ನು ಖಾಸಗಿ ಸಂಸ್ಥೆಗೆ ದತ್ತಕ ನೀಡಿದ ಸಕರ್ಾರದ ನಿಧರ್ಾರವನ್ನು ಪ್ರತಿಪಕ್ಷ ಕಾಂಗ್ರೆಸ್ ಟಿಕಿಸಿದೆ. ಪ್ರವಾಸೋದ್ಯಮ ಇಲಾಖೆಯ ಕ್ರಮವನ್ನು ತನ್ನ ಟ್ವಿಟ್ಟರ್ ನಲ್ಲಿ ಖಂಡಿಸಿದ ಕಾಂಗ್ರೆಸ್ "ಸಕರ್ಾರ ಅತಿಶೀಘ್ರ   ಸಂಸತ್ತು, ಲೋಕಕಲ್ಯಾಣ ಮಾರ್ಗ, ಸಪರ್ೋಚ್ಚ ನ್ಯಾಯಾಲಯ ಮತ್ತು ಇವೆಲ್ಲವನ್ನೂ ದತ್ತು ಕೊಡಲಿದೆ  ಎಂದು ಛೇಡಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries