ಮಂಜೇಶ್ವರ ಮಂಡಲದಲ್ಲಿ ಸಮಾಜ ದ್ರೋಹಿಗಳ ಅಟ್ಟಹಾಸ : ಬಿಜೆಪಿ ಖಂಡನೆ
ಕುಂಬಳೆ: ಯಾವುದೇ ಮುನ್ಸೂಚನೆ ನೀಡದ ಹರತಾಳದಿಂದ ಒಂದು ವಿಭಾಗದವರು ಹರತಾಳದ ಹೆಸರಿನಲ್ಲಿ ವ್ಯಾಪಕವಾಗಿ ಬಲ ಪ್ರಯೋಗಿಸಿ ಜನರ ಅಂಗಡಿ ಮುಂಗಟ್ಟುಗಳನ್ನು ಮತ್ತು ವಾಹನಗಳನ್ನು ಬಲವಂತವಾಗಿ ಬಂದ್ ಮಾಡಿಸಿ ಕೋಮು ಸಂಘರ್ಷ ಸೃಷ್ಟಿಸಲು ನಡೆಸಿದ ಕೃತ್ಯವನ್ನು ಮಂಜೇಶ್ವರ ಮಂಡಲ ಬಿಜೆಪಿ ಸಮಿತಿ ಖಂಡಿಸಿದೆ.
ಆಡಳಿತದ ಬಲದಿಂದ ಪೊಲೀಸರನ್ನು ಉಪಯೋಗಿಸಿ ವ್ಯಾಪಕ ಹಿಂಸಾಚಾರ ನಡೆಸಿ, ಕೇವಲ ಒಂದು ವಿಭಾಗದ ಜನರಿಗೆ ತೊಂದರೆ ನೀಡುತ್ತಿದ್ದಾರೆ. ಕೋಮು ಸೌಹಾರ್ದತೆಗೆ ಧಕ್ಕೆ ತರುವ ರೀತಿಯಲ್ಲಿ ಮತೀಯ ಉಗ್ರವಾದಿಗಳಿಗೆ ಬೆಂಬಲ ನೀಡುವ ಎಡ ಬಲ ರಂಗಗಳಿಗೆ ಸೂಕ್ತ ಪಾಠವನ್ನು ಜನರು ಕಲಿಸಬೇಕೆಂದು ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಕೋಳಾರು ಸತೀಶ್ಚಂದ್ರ ಭಂಡಾರಿ ಜನರಿಗೆ ಕರೆ ನೀಡಿದ್ದಾರೆ.
ಪೊಲೀಸ್ ಇಲಾಖೆ ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮಕೈಗೊಳ್ಳದೆ ಇದ್ದಲ್ಲಿ ಭಾರತೀಯ ಜನತಾ ಪಕ್ಷ ತೀವ್ರ ಪ್ರತಿಭಟನೆ ನಡೆಸಲಿದೆಯೆಂದು ಅವರು ತಿಳಿಸಿದ್ದಾರೆ. ಈ ಬಗ್ಗೆ ಕುಂಬಳೆಯಲ್ಲಿ ಬುಧವಾರ ನಡೆದ ಸಭೆಯಲ್ಲಿ ಮಂಜೇಶ್ವರ ಮಂಡಲ ಉಪಾಧ್ಯಕ್ಷ ವಿನೋದನ್, ಮಂಡಲ ಪ್ರಧಾನ ಕಾರ್ಯದಶರ್ಿ ಮುರಳೀಧರ ಯಾದವ್, ಆದಶರ್್ ಬಿ.ಎಂ, ಜನಪ್ರತಿನಿಧಿಗಳಾದ ಸುಧಾಕರ ಕಾಮತ್, ರಮೇಶ್ ಭಟ್, ಸುಜಿತ್ ರೈ, ಹರೀಶ್ ಗಟ್ಟಿ ಮಾತನಾಡಿದರು. ಕುಂಬಳೆ ಬಿಜೆಪಿ ಪಂಚಾಯತು ಪ್ರಧಾನ ಕಾರ್ಯದಶರ್ಿ ವಸಂತ ಕುಮಾರ್ ಸ್ವಾಗತಿಸಿ, ಶಶಿ ಕುಂಬಳೆ ವಂದಿಸಿದರು.