HEALTH TIPS

No title

                ಶೇಣಿಯವರ ಯಕ್ಷಗಾನ ಪ್ರಸಂಗ ಸಾಹಿತ್ಯದಲ್ಲಿ ಅಭಿಜಾತ ಕಾವ್ಯ ಮೌಲ್ಯವಿದೆ : ಡಾ.ರತ್ನಾಕರ ಮಲ್ಲಮೂಲೆ
     ಕಾಸರಗೋಡು: ಯಕ್ಷ ಭೀಷ್ಮ ಶೇಣಿ ಗೋಪಾಲಕೃಷ್ಣ ಭಟ್ ಅವರ ಯಕ್ಷಗಾನ ಪ್ರಸಂಗ ಸಾಹಿತ್ಯವು ಶಿಷ್ಟ ಸಾಹಿತ್ಯ ಪ್ರಕಾರಕ್ಕೆ ಹೆಗಲೆಣೆಯಾಗಿದ್ದು ಅಭಿಜಾತ ಕನ್ನಡ ಕಾವ್ಯ ಮೌಲ್ಯವನ್ನು ಪಡೆದುಕೊಂಡಿದೆ ಎಂದು ಕಾಸರಗೋಡು ಸರಕಾರಿ ಕಾಲೇಜಿನ ಯಕ್ಷಗಾನ ಅಧ್ಯಯನ ಕೇಂದ್ರದ ಸಂಯೋಜಕ ಡಾ.ರತ್ನಾಕರ ಮಲ್ಲಮೂಲೆ ಹೇಳಿದರು. 
     ಅವರು ಕನರ್ಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನರ್ಾಟಕ ಯಕ್ಷಗಾನ ಅಕಾಡೆಮಿ ಹಾಗೂ ಕಾಸರಗೋಡಿನ ಶೇಣಿ ರಂಗಜಂಗಮ ಟ್ರಸ್ಟ್ ಆಶ್ರಯದಲ್ಲಿ ಯಕ್ಷ ದಿಗ್ಗಜ, ಹರಿದಾಸ್ ಡಾ.ಶೇಣಿ ಗೋಪಾಲಕೃಷ್ಣ ಭಟ್ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ಕುತ್ಯಾಳ ಶ್ರೀ ಗೋಪಾಲಕೃಷ್ಣ ಕ್ಷೇತ್ರ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ `ಶೇಣಿ ಶತಕ ಸಂಭ್ರಮೋತ್ಸವ'ದಲ್ಲಿ `ಶೇಣಿ ಪ್ರಸಂಗ ದರ್ಶನ' ಎಂಬ ವಿಚಾರ ಸಂಕಿರಣದಲ್ಲಿ ಉಪನ್ಯಾಸ ನೀಡಿದರು. 
   ಭಾಷೆಯನ್ನು ಕಾವ್ಯಾತ್ಮಕವಾಗಿ ಅತ್ಯಂತ ಸಮರ್ಪಕವಾಗಿ ದುಡಿಸಿಕೊಂಡ ಪಂಪ, ರನ್ನ, ನಾಗಚಂದ್ರರಂತಹ ಕವಿಗಳ ಕಾವ್ಯಗಳಲ್ಲಿ ರಾಮಾಯಣ ಮತ್ತು ಮಹಾಭಾರತದ ಕಥಾ ಪಾತ್ರಗಳು ಹೊಸ ರೀತಿಯಲ್ಲಿ ಅನಾವರಣಗೊಂಡುದನ್ನು ಕಾಣುತ್ತೇವೆ. ಆದ ಕಾರಣ ವ್ಯಾಸ ಭಾರತ, ವಾಲ್ಮೀಕಿ ರಾಮಾಯಣಕ್ಕಿಂತ ವಿಭಿನ್ನವಾದ ದೃಷ್ಟಿಕೋನ ಈ ಕವಿಗಳ ಸೃಜನಶೀಲ ಪ್ರತಿಭೆಗೆ ಸಾಕ್ಷಿಯಾಗುತ್ತದೆ. ಇದೇ ರೀತಿಯಲ್ಲಿ ಶೇಣಿಯವರ ಮಧ್ಯಮ ವ್ಯಾಯೋಗ, ಶಂಬೂಕ ವಧೆ, ಉದ್ಧಾಲಕ, ಕವಿರತ್ನ ಕಾಳಿದಾಸ ಈ ಮುಂತಾದ ಯಕ್ಷಗಾನ ಪ್ರಸಂಗ ಸಾಹಿತ್ಯದಲ್ಲಿ ಮೂಡಿ ಬಂದ ಪಾತ್ರಗಳು ಹಿಂದಿನ ಕವಿಗಳಿಗೆ ಋಣಿಯಾಗಿದ್ದುಕೊಂಡೇ ತನ್ನತನದ ಮೂಲಕ ಅನನ್ಯತೆಯನ್ನು ಪಡೆದಿರುವುದನ್ನು ಕಾಣುತ್ತೇವೆ ಎಂದರು.
   ಶೇಣಿ ಅವರ ಅರ್ಥಗಾರಿಕೆಯಲ್ಲೂ ಮೂಡಿ ಬರುವ ವಿವಿಧ ಕಥಾ ಪಾತ್ರಗಳು ಒಂದೊಂದು ಸನ್ನಿವೇಶದಲ್ಲೂ ವಿಭಿನ್ಯ ತಾತ್ವಿಕತೆಯನ್ನು ತಳೆದು ಅರ್ಥಪೂರ್ಣವಾಗಲು ಶೇಣಿಯವರ ಕವಿತ್ವವೇ ಕಾರಣ. ಶೇಣಿಯವರ ಆಳವಾದ ಸಾಹಿತ್ಯ ಅಧ್ಯಯನ ಮತ್ತು ಜೀವನಾನುಭವವನ್ನು ಅವರ ಪ್ರಸಂಗ ಸಾಹಿತ್ಯದಲ್ಲೂ ಅರ್ಥಗಾರಿಕೆಯಲ್ಲೂ ಗುರುತಿಸಲು ಸಾಧ್ಯ. ಯಕ್ಷಗಾನ ಪ್ರಸಂಗ ಸಾಹಿತ್ಯವು ಶಿಷ್ಟ ಕಾವ್ಯಗಳಷ್ಟೇ ಪರಿಪೂರ್ಣವಾಗಿದ್ದರೂ ಯಕ್ಷಗಾನ ಕವಿಗಳನ್ನು ಕವಿಚರಿತೆಗಾರರು, ಸಾಹಿತ್ಯ ಚರಿತೆಗಾರರು ಅಲಕ್ಷ್ಯಗೊಳಪಡಿಸಿದ್ದು ವಿಷಾದನೀಯ ಡಾ.ಮಲ್ಲಮೂಲೆ ಹೇಳಿದರು.
   ಕಾರ್ಯಕ್ರಮದಲ್ಲಿ ಕನರ್ಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ದಾಮೋದರ ಶೆಟ್ಟಿ ಅಧ್ಯಕ್ಷತೆ ವಹಿಸಿದರು. ಶೇಣಿ ಒಡನಾಡಿ, ಅರ್ಥಧಾರಿ ರಾಜೇಂದ್ರ ಕಲ್ಲೂರಾಯ, ಸಂಘಟಕ, ಕಲಾವಿದ ಸತೀಶ ಅಡಪ ಶುಭಹಾರೈಸಿದರು. ಶೇಣಿ ವೇಣುಗೋಪಾಲ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸುವರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries