ಮತ್ತಲಿಬ್ ಎಂದಿಗೂ ಮಾದರಿ-ಪುಂಡರೀಕಾಕ್ಷ ಕೆ.ಎಲ್.
ಕುಂಬಳೆ: ಸಮಾಜದ ಸಮಗ್ರ ಅಭಿವೃದ್ದಿ ಪ್ರಕ್ರಿಯೆಗಳ ಸಮತೋಲನಕ್ಕೆ ಪತ್ರಕರ್ತರ ಕೊಡುಗೆ ಅಪಾರವಾದುದು. ವೈಯುಕ್ತಿಕ ಆಶೋತ್ತರಗಳನ್ನು ಬದಿಗಿರಿಸಿ ಸಮಾಜದ ವಿವಿಧ ಕಾಲಘಟ್ಟಗಳ ಏಳು-ಬೀಲುಗಳಿಗೆ ಧ್ವನಿಯಾಗುವಲ್ಲಿ ಮಾಧ್ಯಮಗಳ ಕಟಿಬದ್ದತೆ ಸ್ತುತ್ಯರ್ಹವಾಗಿದ್ದು, ಇಂತಹ ಸಾಧನೆಗಳಿಗೆ ಮೈಲುಗಲ್ಲಾಗಿ ಕರ್ತವ್ಯ ನಿರ್ವಹಿಸಿದ ಅಗಲಿದ ಪತ್ರಕರ್ತರ ಸ್ಮರಣೆ ನಮ್ಮನ್ನು ಎಚ್ಚರಿಸುತ್ತದೆ ಎಂದು ಕುಂಬಳೆ ಗ್ರಾಮ ಪಂಚಾಯತು ಅಧ್ಯಕ್ಷ ಪುಂಡರೀಕಾಕ್ಷ ಕೆ.ಎಲ್. ಅಭಿಪ್ರಾಯ ವ್ಯಕ್ತಪಡಿಸಿದರು.
ಕುಂಬಳೆ ಫ್ರೆಸ್ಪೋರಂ ಸಭಾಂಗಣದಲ್ಲಿ ಬುಧವಾರ ಸಂಜೆ ಏರ್ಪಡಿಸಲಾದ ಅಗಲಿದ ಪತ್ರಕರ್ತ ಮುತ್ತಲಿಬ್ ಅಗಲುವಿಕೆಯ ಒಂದನೇ ಪುಣ್ಯ ತಿಥಿಯ ಗೌರವಾರ್ಥವಾಗಿ ನಡೆದ ಸಂಸ್ಮರಣಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸ್ಥಳೀಯಾಡಳಿತ ಸಹಿತ ವಿವಿಧ ಆಡಳಿತ ವಿಭಾಗಗಳ ಒಳಹೊರಗಿನ ವಿದ್ಯಮಾನಗಳ ಸಹಿತ ಸಾಮಾಜಿಕ ಸ್ಥಿತಿಗತಿಗಳನ್ನು ಹೊರ ಪ್ರಪಂಚಕ್ಕೆ ತೆರೆದಿಡುವ ಮಾಧ್ಯಮಗಳ ಜವಾಬ್ದಾರಿ ಮಹತ್ತರವಾಗಿದ್ದು, ಒತ್ತಡಗಳ ಮಧ್ಯೆ ಬದ್ದತೆಯಿಂದ ಕರ್ತವ್ಯ ನಿರ್ವಹಿಸುವ ಪತ್ರಕರ್ತರ ವೈಯುಕ್ತಿಕ ಭಾವಗಳಿಗೆ ಸ್ಪಂಧಿಸಿ ಅಥ್ರ್ಯಯಿಸುವ ಗುಣವನ್ನು ಸಮಾಜ ಹೊಂದಿರಬೇಕು. ಜನಸಾಮಾನ್ಯರಲ್ಲಿ ಒಬ್ಬರಾಗಿರುವ ಮಾಧ್ಯಮ ಮಿತ್ರರ ನೋವುಗಳಿಗೆ ಜನಸ್ಪಂಧನ ದೊರೆತಾಗ ಮಾತ್ರ ಮಾಧ್ಯಮ ಕ್ಷೇತ್ರ ಇನ್ನಷ್ಟು ವಸ್ತುನಿಷ್ಠವಾಗಿ ಮೂಡಿಬರಲು ಸಾಧ್ಯ ಎಂದು ಅವರು ಈ ಸಂದರ್ಭ ತಿಳಿಸಿದರು.
ಫ್ರೆಸ್ಪೋರಂ ಅಧ್ಯಕ್ಷ ಸುರೇಂದ್ರನ್ ಚೀಮೇನಿ ಅದ್ಯಕ್ಷತೆ ವಹಿಸಿದ ಸಮಾರಂಭದಲ್ಲಿ ಕುಂಬಳೆ ಪೋಲೀಸ್ ಠಾಣಾಧಿಕಾರಿ ಕೆ.ಪ್ರೇಂಸದನ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿ, ಇಂದಿನ ಹೆಚ್ಚುತ್ತಿರುವ ಸಾಮಾಜಿಕ ಪಿಡುಗುಗಳ ನಿಯಂತ್ರಣದಲ್ಲಿ ಮಾಧ್ಯಮಗಳ ಪಾತ್ರವೂ ಮಹತ್ವದ್ದಾಗಿದ್ದು, ಜಿಲ್ಲೆಯ ಗಡಿ ಗ್ರಾಮಗಳನ್ನು ಕೇಂದ್ರೀಕರಿಸಿ ವ್ಯಾಪಕಗೊಳ್ಳುತ್ತಿರುವ ವಿವಿಧ ಅಸ್ತಿರತೆಗಳ ಬಗ್ಗೆ ಪೋಲೀಸ್ ಇಲಾಖೆ ಗಮನಿಸುವಲ್ಲಿ ಮಾಧ್ಯಮಗಳು ಅತ್ಯಂತ ಧನಾತ್ಮಕವಾಗಿ ನೆರವಾಗುತ್ತಿವೆ ಎಮದು ತಿಳಿಸಿದರು. ಅಗಲಿದ ಪತ್ರಕರ್ತ ಮುತ್ತಲಿಬ್ ರವರ ಕರ್ತವ್ಯ ನಿಷ್ಠೆ, ಸಾಮಾಜಿಕ ಕಳಕಳಿ ಇತರರಿಗೂ ಮಾದರಿಯಾಗಿದ್ದು, ಸ್ಥಳೀಯ ಪತ್ರಕರ್ತರ ನಿರಂತರ ಪ್ರಯತ್ನಗಳಿಂದ ಮುತ್ತಲಿಬ್ ರ ನಿರಾಶ್ರಿತಗೊಂಡ ಕುಟುಂಬಕ್ಕೆ ಶೀಘ್ರ ಸೂರಿನ ಭಾಗ್ಯ ಕೂಡಿಬರಲಿ ಎಂದು ತಿಳಿಸಿದರು.
ಸಮಾರಂಭದಲ್ಲಿ ಹಿರಿಯ ಪತ್ರಕರ್ತ ನಾರಾಯಣನ್ ಕಣ್ಣಾಲಯಂ ಮುತ್ತಲಿಬ್ ಬಗ್ಗೆ ಸಂಸ್ಮರಣಾ ಭಾಷಣಗೈದು ಮಾತನಾಡಿ, ಸಾಮಾನ್ಯ ವೃತ್ತಿಯನ್ನು ಆಶ್ರಯಿಸಿ ಮಾಧ್ಯಮ ಕ್ಷೇತ್ರಕ್ಕೆ ಪಾದಾರ್ಪಣಗೈದ ಮತ್ತಲಿಬ್ ಬಳಿಕ ಬೆಳೆದ ಪರಿ ಅದ್ಬುತವಾದುದಾಗಿದ್ದು, ಎಲ್ಲರಿಗೂ ಎಂದಿಗೂ ಮಾದರಿ ಎಂದು ತಿಳಿಸಿದರು.
ಕುಂಬಳೆ ಗ್ರಾ.ಪಂ.ಸದಸ್ಯ ರಮೇಶ್ ಭಟ್, ಕೆ.ಪಿ.ಸತ್ತಾರ್, ಅಶ್ರಫ್ ಕಾಳರ್ೆ, ಅಹಮ್ಮದಾಲಿ ಮಾವಿನಕಟ್ಟೆ ಮೊದಲಾದವರು ಮಾತನಾಡಿದರು.ಫ್ರೆಸ್ಪೋರಂ ಕಾರ್ಯದಶರ್ಿ ಅಬ್ದುಲ್ಲ ಕುಂಬಳೆ ಸ್ವಾಗತಿಸಿ, ಕೋಶಾಧಿಕಾರಿ ಕೆ.ಎಂ.ಎ.ಸತ್ತಾರ್ ವಂದಿಸಿದರು.