ಬದಿಯಡ್ಕದಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ
ಬದಿಯಡ್ಕ : ಸಂವಿಧಾನ ಶಿಲ್ಪಿ, ರಾಷ್ಟ್ರದ ಮಹೋನ್ನತ ನಾಯಕರಲ್ಲೋರ್ವರಾದ ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮದಿನಾಚರಣೆಯನ್ನು ಇಂದು ಕೇವಲ ದಲಿತರಿಗೆ ಮಾತ್ರ ಸೀಮಿತವಾಗಿ ಆಚರಿಸುತ್ತಿರುವುದು ವರ್ತಮಾನದ ಮನೋಭಾವಗಳ ಸಂಕೇತ. ಯಾವುದೇ ರಾಜಕೀಯ ಪಕ್ಷಗಳೂ ಇಂತಹ ದೇಶದ ಮಹಾನ್ ವ್ಯಕ್ತಿತ್ವದ ರಾಷ್ಟ್ರ ನಾಯಕನ ಜನ್ಮದಿನಾಚರಣೆಯನ್ನು ನಡೆಸದಿರುವುದು ಖೇದಕರ ವಿಷಯವಾಗಿದೆ ಎಂದು ಮಧೂರು ಮದರು ಮಾತೆ ಮೊಗೇರ ಸಮಾಜದ ಅಧ್ಯಕ್ಷ ಆನಂದ ಕೆ.ಮವ್ವಾರು ತಿಳಿಸಿದರು.
ಅವರು ಶನಿವಾರ ಬೆಳಗ್ಗೆ ಬದಿಯಡ್ಕ ಮೇಲಿನ ಪೇಟೆಯಲ್ಲಿ ಮಧೂರು ಶ್ರೀ ಮದರು ಮಹಾಮಾತೆ ಮೊಗೇರ ಸಮಾಜದ ನೇತೃತ್ವದಲ್ಲಿ ನಡೆದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರರ 127ನೇ ಜನ್ಮದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಅಂಬೇಡ್ಕರ್ ರವರ ದೂರದೃಷ್ಟಿಯ ಚಿಂತನೆಗಳ ಫಲವಾಗಿ ರಾಷ್ಟ್ರದ ಪ್ರಬುದ್ದ ಸಂವಿಧಾನ ರಚಿತವಾಗಿದ್ದು, ಧರ್ಮಗ್ರಂಥಕ್ಕೆ ಸರಿಸಮವಾದ ಶ್ರೇಷ್ಠ ಸಂವಿಧಾನ ರಚಿತನ ಸ್ಮರಣೆ ಹೊಸ ತಲೆಮಾರಿಗೆ ಅಗತ್ಯವಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಸಂತ ಅಜಕ್ಕೋಡು, ರಾಮಪ್ಪ ಮಂಜೇಶ್ವರ, ಗೋಪಾಲ ಡಿ., ಕೃಷ್ಣ ದಭರ್ೆತ್ತಡ್ಕ, ಸುಂದರ ಮಾಳಂಗೈ, ರಾಮ ಪಟ್ಟಾಜೆ, ಅನಿಲ್ ಅಜಕ್ಕೋಡು, ಸುರೇಶ ಅಜಕ್ಕೋಡು, ಬಾಬು ಅಜಕ್ಕೋಡು ಮೊದಲಾದವರು ಪಾಲ್ಗೊಂಡು ಶುಭಹಾರೈಸಿದರು.