HEALTH TIPS

No title

                     ಸಂಸದರಿಂದ ಶಾಲಾ ನೂತನ ಕಟ್ಟಡ ಉದ್ಘಾಟನೆ
   ಮಂಜೇಶ್ವರ: ಸರಕಾರಿ ವಿದ್ಯಾಸಂಸ್ಥೆಗಳು ನೈಜ ವಿದ್ಯಾಭ್ಯಾಸ ಮೌಲ್ಯಗಳನ್ನು ದಾಟಿಸುವಲ್ಲಿ ಅರ್ಥಪೂರ್ಣವಾಗಿ ಕರ್ತವ್ಯ ನಿರ್ವಹಿಸುತ್ತಿದೆ.  ಸಾರ್ವಜನಿಕ ವಿದ್ಯಾಸಂಸ್ಥೆಗಳನ್ನು ಉಳಿಸಿ ಕಾಪಾಡಬೇಕಾದುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಮದು ಸಂಸದ ಪಿ.ಕರುಣಾಕರನ್ ಅಭಿಪ್ರಾಯ ವ್ಯಕ್ತಪಡಿಸಿದರು.
   ಮೂಡಂಬೈಲು ಸರಕಾರಿ ಫ್ರೌಢಶಾಲೆಯಲ್ಲಿ ಸರ್ವಶಿಕ್ಷಾ ಅಭಿಯಾನದ ಭಾಗವಾಗಿ ಮಂಜೂರಾಗಿ ನಿಮರ್ಾಣಗೊಂಡ ನೂತನ ಕಟ್ಟಡವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.
   ಸರಕಾರಿ ವಿದ್ಯಾಸಂಸ್ಥೆಗಳ ಕಲಿಕಾ ಸೌಲಭ್ಯ ಮತ್ತು ಮಟ್ಟವನ್ನು ಉನ್ನತೀಕರಿಸುವಲ್ಲಿ ಸರಕಾರಗಳು ಸದಾ ಕಟಿಬದ್ದವಾಗಿದೆ. ಆದರೆ ಜನಸಾಮಾನ್ಯರು ಅನಗತ್ಯ ಗೊಂದಲ, ಪ್ರಲೋಭನೆಗೊಳಗಾಗದೆ ಬಳಸಿಕೊಳ್ಳಬೇಕೆಂದು ಅವರು ತಿಳಿಸಿದರು.
   ಮೀಂಜ ಗ್ರಾ.ಪಂ. ಅಧ್ಯಕ್ಷೆ ಶಂಶಾದ್ ಶುಕೂರ್ ಅಧ್ಯಕ್ಷತೆ ವಹಿಸಿದ್ದರು. ಮೀಂಜ ಗ್ರಾ.ಪಂ. ವಿದ್ಯಾಭ್ಯಾಸ ಸ್ಥಾಯೀ ಸಮಿತಿ ಅಧ್ಯಕ್ಷ ಕೃಷ್ಣ ಕೆ, ಬ್ಲಾ.ಪಂ. ಸದಸ್ಯೆ ಆಶಾಲತ, ಗ್ರಾ.ಪಂ. ಸದಸ್ಯರಾದ ಚಂದ್ರಾವತಿ, ಶಾಂತಾರಾಮ ಶೆಟ್ಟಿ, ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ದಿನೇಶ್ ವಿ, ಕ್ಷೇತ್ರ ನಿರೂಪಣಾಧಿಕಾರಿ ವಿಜಯಕುಮಾರ್ ಪಿ, ಗೋವಿಂದ ಹೆಗ್ಡೆ, ಎಂ.ಜಿ.ನಾರಾಯಣ ರಾವ್, ಶೇಖರ ಎಂ, ಅಬ್ದುಲ್ಲ ಕರಿಬೈಲು, ಅಬ್ಬಾಸ್ ಪಮ್ಮಾರ್, ಜಗನ್ನಾಥ ಕೆ, ರಮೇಶ್ ಸುವರ್ಣ, ಮೊಹಮ್ಮದ್ ಕಂಚಿಲ, ರಮಾ ಬಾಯಿ, ಶೋಭಾ ಟೀಚರ್ ಮೊದಲಾದವರು ಉಪಸ್ಥಿತರಿದ್ದರು.
   ಸಭಾ ಕಾರ್ಯಕ್ರಮದ ಮೊದಲು ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಬಶೀರ್ವ ಮೂಡಂಬೈಲು ಧ್ವಜಾರೋಹಣಗೈದರು. ಶಿಕ್ಷಕರಾದ ಪದ್ಮನಾಭ ಹಾಗೂ ಸುಕೇಶ್ ರವರು ಕೊಡಮಾಡಿದ ನೂತನ ಪರದೆಯನ್ನು ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷ ಶಿವರಾಮ ಪದಕಣ್ಣಾಯ ಅನಾವರಣಗೊಳಿಸಿದರು. ಮುಖ್ಯೋಪಾಧ್ಯಾಯ ಇಬ್ರಾಹಿಂ ಬಿ. ಸ್ವಾಗತಿಸಿ, ಶಿಕ್ಷಕ ಶಂಕರನಾರಾಯಣ ಭಟ್ ವ0ದಿಸಿದರು.

   

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries