HEALTH TIPS

No title

          ಐಎಡಿಯಲ್ಲಿ ವಿಶೇಷ ಸಭೆ- ದಕ್ಷಿಣ ಭಾರತದಿಂದ ಆರೋಗ್ಯ ಸಂಬಂಧಿತ ಸಂಶೋಧನಾ ಪ್ರಸ್ತಾಪಗಳನ್ನು ಪರಿಶೀಲಿಸಲು ಐಎಡಿಯ
                  ಇನ್ಸ್ಟಿಟ್ಯೂಶನಲ್ ಎಥಿಕ್ಸ್ ಸಮಿತಿ ಸಭೆ
     ಕಾಸರಗೋಡು: ಉಳಿಯತ್ತಡ್ಕದಲ್ಲಿ ಕಾಯರ್ಾಚರಿಸುತ್ತಿರುವ ಇನ್ಸ್ಟಿಟ್ಯೂಟ್ ಆಫ್ ಅಪ್ಲೈಡ್  ಡರ್ಮಟಾಲಜಿ (ಐಎಡಿ)ಯ ಇನ್ಸ್ಟಿಟ್ಯೂಶನಲ್ ಎಥಿಕ್ಸ್ ಸಮಿತಿಯ ಸಭೆ ಇತ್ತೀಚೆಗೆ ಜರುಗಿತು. ಸಭೆಯಲ್ಲಿ ಮಂಗಳೂರು ಕಸ್ತೂಬರ್ಾ ಮೆಡಿಕಲ್ ಕಾಲೇಜಿನ ಎಮೆರಿಟಸ್ ಪ್ರಾಧ್ಯಾಪಕರೂ ಶಿಶುರೋಗ ತಜ್ಞರೂ ಆದ ಪ್ರೊ.ಯು.ವಿ.ಶೆಣೈ ನೇತೃತ್ವದ ಸಮಿತಿಯು ಫಿಸಿಯೋಥೆರಪಿ ಮೊಲಿಕ್ಯುಲಾರ್ ಬಯೋಲಾಜಿ ಮತ್ತು ಫಾರ್ಮಕಾಲಜಿ ವಿಭಾಗದ ಹನ್ನೊಂದರಷ್ಟು ಪ್ರಸ್ತಾಪಗಳನ್ನು ಪರಿಶೀಲಿಸಿತು. ಆರ್.ವಿ.ಯಸ್. ಕಾಲೇಜ್ ಆಫ್ ಫಿಸಿಯೋಥೆರಪಿ ಮತ್ತು ಫಾಮರ್ಾಸ್ಯುಟಿಕಲ್ ಸೈನ್ಸಸ್ ಕೊಯಮತ್ತೂರು ಮತ್ತು ಕೇರಳದ ಕೇಂದ್ರೀಯ ವಿಶ್ವವಿದ್ಯಾಲಯ ಕಾಸರಗೋಡು ಇದರ ಸಂಶೋಧನಾ ಕ್ಷೇತ್ರದ ವಿದ್ಯಾಥರ್ಿಗಳು ತಮ್ಮ ಸಂಶೋಧನಾ ಪ್ರಸ್ತಾಪಗಳನ್ನು ಮಂಡಿಸಿದರು.
   ಎಥಿಕ್ಸ್  ಸಮಿತಿಯ ಕಾರ್ಯದಶರ್ಿ ಡಾ.ಪ್ರದೀಪ್ ಕುಮಾರ್ ಪುತ್ತೂರು ಅವರು ಚಚರ್ಾ ಸಭೆಯನ್ನು ಏರ್ಪಡಿಸಿದರು. ಮಂಗಳೂರಿನ ಯೇನಪೋಯ ಫಿಸಿಯೋಥೆರಪಿ ಕಾಲೇಜಿನ ಪ್ರಾಚಾರ್ಯರಾದ ಪ್ರೊ. ಪದ್ಮಕುಮಾರ್ ವಿಶೇಷ ಆಹ್ವಾನಿತರಾಗಿದ್ದರು. ಪ್ರಸ್ತಾಪಗಳ ನೈತಿಕ ಪರಿಶೀಲನೆಯ ಸಂದರ್ಭದಲ್ಲಿ ಇನ್ಸ್ಟಿಟ್ಯೂಶನಲ್ ಎಥಿಕ್ಸ್  ಸಮಿತಿಯ ಸದಸ್ಯರಾದ ಡಾ.ರವಿಪ್ರಸಾದ, ಡಾ.ರವಿಚಂದ್ರ, ಡಾ.ತಂಬಾನ್, ನ್ಯಾಯವಾದಿ ಬೀನಾ ಕಾಸರಗೋಡು, ಗಣೇಶ್ ಭಟ್, ಚಂದ್ರಮೋಹನ್ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
   ಸಭೆಯಲ್ಲಿ ಐಎಡಿಯ ನಿದರ್ೇಶಕ ಡಾ.ಎಸ್.ಆರ್.ನರಹರಿ ಉಪಸ್ಥಿತರಿದ್ದರು. ಇನ್ಸ್ಟಿಟ್ಯೂಶನಲ್ ಎಥಿಕ್ಸ್ ಸಮಿತಿಯ ಅಧ್ಯಕ್ಷ ಪ್ರೊ.ಯು.ವಿ.ಶೆಣೈ ಅವರು ಇಂತಹ ಪರಿಶೀಲನೆಗಳು ಸಂಶೋಧನೆಯ ನಿಖರತೆಯನ್ನು ಹೆಚ್ಚಿಸುವುದಲ್ಲದೆ ಅದರ ಮೌಲ್ಯವರ್ಧನೆಗೂ ಸಹಾಯಕವಾಗುತ್ತದೆ. ಆ ನಿಟ್ಟಿನಲ್ಲಿ ಜ್ಞಾನಾಭಿವೃದ್ಧಿಗೆ ಪ್ರಚೋದನೆಯನ್ನು ನೀಡುವ ಪ್ರವೃತ್ತಿಯನ್ನು ಹೊರಹೊಮ್ಮಿಸಲು ಇರುವ ಸಂಶೋಧನೆಗಳನ್ನು ಆಯ್ಕೆ ಮಾಡಲು ಇದು ಸರಿಯಾದ ವಿಧಾನವಾಗಿದೆ. ಮಾನವರಲ್ಲಿ ಕೈಗೊಳ್ಳುವ ಸಂಶೋಧನೆಗಳಿಗೆ ನಿಗದಿತ ಮಾನದಂಡಗಳಿದ್ದು ಅದನ್ನು ಸಂಪೂರ್ಣವಾಗಿ ಅನುಸರಿಸುವ ಸಂಶೋಧನೆಗಳಿಗೆ ಮಾತ್ರವೇ ಅನುಮತಿ ನೀಡಲಾಗುವುದು. ಸಭೆಯಲ್ಲಿ ನಡೆಯುವ ಚಚರ್ೆಗಳು ಸಂಶೋಧನಾ ಪ್ರಸ್ತಾಪಗಳ ಜಿಜ್ಞಾಸೆ ಪ್ರಶ್ನೆಗಳಿಗೆ ಉತ್ತರಗಳನ್ನು ಹುಡುಕಲು ಪ್ರಚೋದನೆಯನ್ನು ನೀಡುವುದಲ್ಲದೆ ಪರೀಕ್ಷಾಥರ್ಿಗಳ ಮೇಲೆ ಒದಗಬಹುದಾದ ಅಡ್ಡಪರಿಣಾಮಗಳಿದ್ದಲ್ಲಿ ಅವುಗಳನ್ನು ಮೊದಲೇ ಕಂಡುಕೊಂಡು ಆ ಪ್ರಸ್ತಾಪಗಳನ್ನು ಆಮೂಲಾಗ್ರವಾಗಿ ಬದಲಾಯಿಸಬಲ್ಲಷ್ಟು ಸಾಂದಭರ್ಿಕವಾಗಿರುತ್ತದೆ ಎಂದು ಹೇಳಿದರು.
   ಐಎಡಿ ಯ ಅಧ್ಯಕ್ಷ ಹಾಗೂ ನಿದರ್ೇಶಕರಾದ ಡಾ.ಎಸ್.ಆರ್.ನರಹರಿಯವರು ಒಂದು ಸಂಶೋಧನೆಯು ಬೆಳೆಯುವ ಹಂತದಲ್ಲಿ ಇಂತಹ ಚಚರ್ೆಗೆ ಅವಕಾಶ ನೀಡುವುದರಿಂದ ಅದು ಯಾವುದೇ ಲೋಪವಿಲ್ಲದೆ ಸಾಗುವುದಲ್ಲದೆ ಅದರ ಪ್ರಯೋಜನವನ್ನು ಪಡೆಯುವುದರ ಮೂಲಕ ಮಾನವ ಕುಲವು ಸವರ್ಾಂಗೀಣ ಅಭಿವೃದ್ಧಿ ಹೊಂದಲು ಸಾಧ್ಯವಿದೆ. ಆದುದರಿಂದ ಯಾವುದೇ ಚಚರ್ೆಯು ಪಾರದರ್ಶಕವಾಗಿದ್ದು ವಿಮಶರ್ೆಯು ಉತ್ತಮ ಗುಣಮಟ್ಟವನ್ನು ಹೊಂದಿರಬೇಕು. ಐಎಡಿ ಗುಣಮಟ್ಟದ ಶಿಕ್ಷಣಕ್ಕೆ ಅಗತ್ಯವಾದ ಸಂಶೋಧನೆಯ ಪಾರದರ್ಶಕತೆಯನ್ನು ನಂಬುವುದಲ್ಲದೆ ಅದಕ್ಕೆ ಸಂಪೂರ್ಣ ಬೆಂಬಲವನ್ನು ನೀಡುತ್ತದೆ ಎಂದು ಹೇಳಿದರು.
    ಸುಮಾರು ಎರಡು ದಶಕಗಳಲ್ಲಿ ಐಎಡಿಯು ದೇಶದಾದ್ಯಂತ ಆನೆಕಾಲು ಮತ್ತು ಇತರ ಚರ್ಮ ರೋಗಗಳಿಂದ ಬಳಲುತ್ತಿರುವ ರೋಗಿಗಳಿಗೆ ಚಿಕಿತ್ಸೆ ನೀಡುವುದರ ಮೂಲಕ ಅವರ ಜೀವನ ಮಟ್ಟವನ್ನು ಸುಧಾರಿಸುವಲ್ಲಿ ಕೆಲಸ ಮಾಡುತ್ತಿದೆ. ಆಧುನಿಕ ಔಷಧ, ಆಯುವರ್ೇದ ಮತ್ತು ಯೋಗವನ್ನು ಬಳಸಿಕೊಂಡು ಸಂಯೋಜಿತ ಚಿಕಿತ್ಸೆಯನ್ನು ರೂಪೀಕರಿಸಿ ಯಶಸ್ವಿಯಾಗಿ ಕಾರ್ಯನಿರ್ವಹಿಸುವ ಏಕೈಕ ಸಂಸ್ಥೆ ಇದಾಗಿದೆ. ಈ ಚಿಕಿತ್ಸಾ ಸಂಪ್ರದಾಯವು ಗುಣಪಡಿಸಲಾಗದ ಕಾಯಿಲೆಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಒಂದು ಮಹತ್ತರ ಹೆಜ್ಜೆಯನ್ನು ಇಟ್ಟಿದೆ. ಅದೂ ಅಲ್ಲದೆ ಐಎಡಿಯು ಭಾರತ ಮತ್ತು ವಿದೇಶಗಳಲ್ಲಿ ಅನೇಕ ವಿಶ್ವವಿದ್ಯಾನಿಲಯಗಳೊಂದಿಗೆ ಸಹಯೋಗವನ್ನು ಹೊಂದಿದೆ

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries