HEALTH TIPS

No title

       ದೇಶದಲ್ಲಿ ತಂತು ಬಲ್ಬು ರಹಿತ ಮೊದಲ ಗ್ರಾಮ ಪಂಚಾಯತು ಪಿಲಿಕ್ಕೋಡು
          ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಂದ ಘೋಷಣೆ
   ಕಾಸರಗೋಡು: ಜಿಲ್ಲೆಯ ದಕ್ಷಿಣದಲ್ಲಿರುವ ಪಿಲಿಕ್ಕೋಡು ಗ್ರಾ.ಪಂ ತಂತು ಬಲ್ಬುರಹಿತ ಮೊದಲ ಗ್ರಾ.ಪಂ ಎಂದು ಘೋಷಿಸಲಾಗಿದೆ. ಗುರುವಾರ ಕಾಲಿಕಡವಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಈ ಘೋಷಣೆ ಮಾಡಿದ್ದಾರೆ. ತಂತು ಬಲ್ಬು ಉಪಯೋಗವನ್ನು ಸಂಪೂರ್ಣ ನಿಲ್ಲಿಸಿ ವಿದ್ಯುತ್ ಉಳಿತಾಯ ಯೋಜನೆಯ ವಿಶೇಷ ಸಾಧನೆಯೊಂದಿಗೆ ಪಿಲಿಕ್ಕೋಡು ಗ್ರಾಮವು ಇತರ ರಾಜ್ಯಗಳ ಗಮನವನ್ನು ತನ್ನತ್ತ ಸೆಳೆಯುವಲ್ಲಿ ಸಫಲವಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ. ಜಿಲ್ಲೆ ಮತ್ತು ರಾಜ್ಯದ ಇತರ ಗ್ರಾ.ಪಂಗಳಲ್ಲಿಯೂ ತಂತು ಬಲ್ಬುಗಳ ಉಪಯೋಗವನ್ನು ನಿಲ್ಲಿಸಿ ವಿದ್ಯುತ್ ಉಳಿತಾಯ ಯೋಜನೆಯ ಮೂಲಕ ರಾಜ್ಯವನ್ನು ಮಾದರಿಯಾಗಿಸಬೇಕಿದೆ ಎಂದರು.
   ವಿದ್ಯುತ್ ಶಕ್ತಿ ಸಂರಕ್ಷಣೆಗಾಗಿ ತಂತು ಬಲ್ಬುಗಳ ಉಪಯೋಗವನ್ನು ಸಂಪೂರ್ಣವಾಗಿ ನಿಲ್ಲಿಸಿದ ಮೊದಲ ಗ್ರಾ.ಪಂ ಎನ್ನುವ ಗೌರವಕ್ಕೆ ಪಿಲಿಕ್ಕೋಡು ಗ್ರಾ.ಪಂ ಭಾಜನವಾಗಿದೆ. ಕೇರಳ ವಿದ್ಯುತ್ ಶಕ್ತಿ ನಿಗಮ ಮತ್ತು ಸಾರ್ವಜನಿಕರ ಪೂರ್ಣ ಸಹಕಾರದೊಂದಿಗೆ ಯೋಜನೆಯು ಸಫಲತೆಯನ್ನು ಕಂಡಿದೆ ಎಂದು ಮುಖ್ಯಮಂತ್ರಿ ಹೇಳಿದರು.ಊಜ್ರ್ವಯಾನ ಯೋಜನೆಯಡಿ ಸುಮಾರು 40,000 ದಷ್ಟು ತಂತು ಬಲ್ಬುಗಳು ಗ್ರಾ,ಪಂ ವ್ಯಾಪ್ತಿಯ ಮನೆ,ಅಂಗಡಿ, ಸಾರ್ವಜನಿಕ ಸ್ಥಳಗಳಿದ್ದವು, ಅವುಗಳನ್ನು ತೆರವುಗೊಳಿಸಿ ಎಲ್.ಇ.ಡಿ ಬಲ್ಬುಗಳನ್ನು ಉಪಯೋಗಿಸುವ ಮೂಲಕ ಹೊಸ ದಿಶೆಯಲ್ಲಿ ಸಾಗಲಾಗಿದೆ ಎಂದವರು ತಿಳಿಸಿದರು. ಅನವಶ್ಯಕ ವಿದ್ಯುತ್ ಪೋಲು ತಡೆಯಲುಯೋಜನೆಯ ಮೂಲಕ ಸಾಧ್ಯವಾಗಿದೆ. ಗ್ರಾ.ಪಂ ಪರಿಧಿಯಲ್ಲಿ ಒಟ್ಟು ಹತ್ತು ಸಾವಿರ ಮನೆಗಳಿದ್ದು. ಎಲ್.ಇ.ಡಿ ಬಲ್ಬು ಉಪಯೋಗದ ಮೂಲಕ ಮೊದಲ ವರ್ಷದಲ್ಲಿ ಮೂಲಕ 1,20,328 ಯುನಿಟ್ ವಿದ್ಯುತ್ ಉಳಿತಾಯವಾಗಿದೆ. ಊಜ್ರ್ವಯಾನದ ಸಾಫಲ್ಯತೆಯನ್ನು ಕಂಡಿರುವ ಪಿಲಿಕ್ಕೋಡು ಗ್ರಾ.ಪಂಗೆ ಕಳೆದ ಬಾರಿ ವಿದ್ಯುತ್ ಸಂರಕ್ಷಣಾ ಪ್ರಶಸ್ತಿಯು ಲಭಿಸಿತ್ತು ಎಂದು ಮುಖ್ಯಮಂತ್ರಿ ಹೇಳಿದರು.
   ತ್ರಿಕರಿಪುರ ಶಾಸಕ ಎಂ.ರಾಜಗೋಪಾಲನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಂತೋಷ್ಟ್ರೋಫಿ ಪುಟ್ಬಾಲ್ ಪಂದ್ಯಾಟ ಜಯಿಸಿದ ಕೇರಳ ತಂಡದ ಆಟಗಾರ ಕೆ.ಪಿ.ರಾಹುಲ್ ಅವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಸಂಸದ ಪಿ.ಕರುಣಾಕರನ್ ಮುಖ್ಯ ಅತಿಥಿಯಾಗಿದ್ದರು. ಖಾದಿ ನಿಗಮದ ಅಧ್ಯಕ್ಷ ಎಂ.ವಿ.ಬಾಲಕೃಷ್ಣನ್, ನೀಲೇಶ್ವರ ಬ್ಲಾ.ಪಂ ಅಧ್ಯಕ್ಷ ವಿ.ಪಿ ಜಾನಕಿ, ಮಾಜಿ ಶಾಸಕ ಕೆ.ಕುಞರಾಮನ್, ಜಿ.ಪಂ ಸದಸ್ಯ ಪಿ.ವಿ.ಪದ್ಮಜಾ, ಬ್ಲಾ.ಪಂ ಸದಸ್ಯಎ.ಕೃಷ್ಣನ್, ಬ್ಲಾ.ಪಂ ಮಾಜಿಅಧ್ಯಕ್ಷ ಟಿ.ವಿ.ಗೋವಿಂದನ್, ಇ.ಕುಞರಾಮನ್, ಪಿಲಿಕ್ಕೋಡುಗ್ರಾ.ಪಂ ಅಧ್ಯಕ್ಷ ಟಿ.ವಿ ಶ್ರೀಧರನ್  ಉಪಸ್ಥಿತರಿದ್ದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries