HEALTH TIPS

No title

                         ಕ್ಷೇತ್ರಗಳ ಧಾಮರ್ಿಕ ಸಾಂಸ್ಕೃತಿಕ ಕೊಡುಗೆ ಜನರ ಸಹಬಾಳ್ವೆಗೆ ಸಹಕಾರಿ-ಸೋಮಶೇಖರ ಜೆ.ಎಸ್

       ಪೆರ್ಲ: ಸಾಮಾಜಿಕ ಏಕತೆ, ನೆಮ್ಮದಿಯ ಸಮಾಜ ನಿಮರ್ಾಣದಲ್ಲಿ ಧಾಮರ್ಿಕ ಕ್ಷೇತ್ರಗಳ ಪಾತ್ರ ಮಹತ್ತರವಾದುದು. ಆಧುನಿಕ ವಾತಾವರಣದಲ್ಲಿ ಜನರ ನಂಬಿಕೆ-ನಡವಳಿಕೆ, ಜೀವನ ಶೈಲಿಯ ಬದಲಾದ ಪ್ರಕ್ಷುಬ್ದತೆಯಲ್ಲಿ ಮತ್ತೆ ಸುಮಧುರ ಜೀವನ ಕಾಪಿಡುವಲ್ಲಿ ಕ್ಷೇತ್ರಗಳು ಶಕ್ತಿಕೇಂದ್ರಗಳಾಗಿ ಮೂಡಿಬರುತ್ತಿದೆ ಎಂದು ಮಂಜೇಶ್ವರ ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ  ಸೋಮಶೇಖರ ಜೆ.ಎಸ್ ಅಭಿಪ್ರಾಯ ವ್ಯಕ್ತಪಡಿಸಿದರು.
    ಸ್ವರ್ಗ ಮಲೆತ್ತಡ್ಕದ ಶ್ರೀ ಜಟಾಧಾರಿ ಮೂಲಸ್ಥಾನದಲ್ಲಿ ಏ.18 ರಿಂದ ಆರಂಭಗೊಂಡು ನಡೆಯುತ್ತಿರುವ ಶ್ರೀನಾಗ ಪ್ರತಿಷ್ಠೆ,, ಜಟಾಧಾರಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮತ್ತು ಜಟಾಧಾರಿ ಮಹಿಮೆ ಉತ್ಸವದ ಅಂಗವಾಗಿ ಸೋಮವಾರ ಬೆಳಿಗ್ಗೆ 9.30 ಕ್ಕೆ ದೀಪ ಪ್ರಜ್ವಲನಗೈದು  ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
   ಧಾಮರ್ಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜನರ ಕೂಡುವಿಕೆಯೊಂದಿಗೆ ಪರೋಕ್ಷವಾಗಿ ಊರಿನ ಅಭಿವೃದ್ಧಿಗೂ ಕಾರಣವಾಗುವುದಾಗಿ ಅವರು ತಿಳಿಸಿದರು. ಜೀಣರ್ೋದ್ಧಾರ, ಬ್ರಹ್ಮಕಲಶೋತ್ಸವ ಸಮಿತಿಗಳ ಕಾರ್ಯನಿರ್ವಹಣೆ,  ಅದರಲ್ಲೂ ಪ್ರಚಾರ ಮಾಧ್ಯಮ ವಿಭಾಗದ ಪ್ರವರ್ತನೆಯನ್ನು ಹಾಗೂ  ಸ್ವರ್ಗ - ಮಲೆತ್ತಡ್ಕ- ದುಗ್ಗಜ್ಜಮೂಲೆ ರಸ್ತೆ  ನಿಮರ್ಾಣಕ್ಕಾಗಿ 16 ಲಕ್ಷ ರೂಪಾಯಿ ಅನುದಾನ ನೀಡಿದ ಪಂಚಾಯತ್ ಆಡಳಿತವನ್ನು ಶ್ಲಾಘಿಸಿದರಲ್ಲದೆ ಬಾಕಿ ಉಳಿಯುವ ರಸ್ತೆಕಾಮಗಾರಿಗಾಗಿ ಉನ್ನತ ಮೂಲಗಳಿಂದ ಅನುದಾನ ಮಂಜೂರು ಮಾಡಲು ಶ್ರಮಿಸುವ ಭರವಸೆ ನೀಡಿದರು. ಕ್ಷೇತ್ರ ಸಮಿತಿ, ಬ್ರಹ್ಮಕಲಶೋತ್ಸವ ಸಮಿತಿಗಳ ಪದಾಧಿಕಾರಿಗಳು ಈ ಸಂದರ್ಭ ಉಪಸ್ಥಿತರಿದ್ದರು.
    ಕಾರ್ಯಕ್ರಮದ ಅಂಗವಾಗಿ ಪ್ರಾತಃಕಾಲ 6. ಕ್ಕೆ ಗಣಪತಿ ಹವನ,  10 ರಿಂದ ಶ್ರೀ ಶಾಸ್ತಾ ಮ್ಯೂಸಿಕಲ್ಸ್,ಪೆರ್ಲ ತಂಡದಿಂದ ಭಕ್ತಿ ಸಂಗೀತ ಭಜನಾ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ12. ಕ್ಕೆ  ಶ್ರೀ ಜಟಾಧಾರಿ ದೈವದ ಭಂಡಾರ ಆಗಮನದ ಬಳಿಕ, ಮಧ್ಯಾಹ್ನ 1.ರಿಂದ ಬ್ರಾಹ್ಮಣ ಸಂತರ್ಪಣೆ, ಮಂತ್ರಾಕ್ಷತೆ, ಪ್ರಸಾದ ಭೋಜನ ನಡೆಯಿತು. 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries