ಉಪರಾಷ್ಟ್ರಪತಿ ಭೇಟಿ : ಸಿದ್ಧತೆಗಳ ಅವಲೋಕನಾ ಸಭೆ
ಕಾಸರಗೋಡು: ರಾಷ್ಟ್ರದ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರು ಎ.29ರಂದು ಕಾಸರಗೋಡು ಜಿಲ್ಲೆಗೆ ಆಗಮಿಸಲಿದ್ದು, ಇದಕ್ಕಿರುವ ಪೂರ್ವ ಸಿದ್ಧತೆಗಳ ಅವಲೋಕನಾ ಸಭೆಯನ್ನು ನಡೆಸಲಾಯಿತು. ಎ.29ರಂದು ಬೆಳಗ್ಗೆ 10.30ಕ್ಕೆ ಮಂಗಳೂರಿಗೆ ತಲುಪುವ ಉಪರಾಷ್ಟ್ರಪತಿ ಹೆಲಿಕಾಪ್ಟರ್ ಮೂಲಕ ಪೆರಿಯ ವಿ.ವಿ. ಹೆಲಿಪ್ಯಾಡ್ಗೆ ಆಗಮಿಸಿ 11ಗಂಟೆಗೆ ವಿಶ್ವ ವಿದ್ಯಾನಿಲಯದ ನೂತನ ಕ್ಯಾಂಪಸ್ ಉದ್ಘಾಟಿಸುವರು.
ಮಧ್ಯಾಹ್ನ 12.30ಕ್ಕೆ ಅವರು ಮಂಗಳೂರಿಗೆ ಹಿಂತಿರುಗುವರು. ಉಪರಾಷ್ಟ್ರಪತಿಯ ಸಂದರ್ಶನಕ್ಕೆ ಸಂಬಂಧಿಸಿ ಸಿದ್ಧತೆಗಳ ಕುರಿತು ತೀಮರ್ಾನಿಸಲು ಕಾಸರಗೋಡು ಜಿಲ್ಲಾಧಿಕಾರಿ ಕೆ.ಜೀವನ್ಬಾಬು ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಮಗ್ರ ಅವಲೋಕನಾ ಸಭೆ ಜರಗಿತು.
ಉಪರಾಷ್ಟ್ರಪತಿಗಳ ಭೇಟಿಯನ್ನು ಲೋಪದೋಷ ರಹಿತವಾಗಿ ಮಾಡಲು ಜಿಲ್ಲಾಧಿಕಾರಿಯವರು ಎಲ್ಲಾ ಇಲಾಖೆಗಳ ಮುಖ್ಯ ಅಧಿಕಾರಿಗಳಿಗೆ ಆದೇಶ ನೀಡಿದರು. ಎಡಿಎಂ ಎನ್.ದೇವಿದಾಸ್, ಆರ್ಡಿಓ ಸಿ.ಬಿಜು, ಎಎಸ್ಪಿ ವಿಶ್ವನಾಥನ್, ಪುಲ್ಲೂರು ಪೆರಿಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಶಾರದಾ ಎಸ್.ನಾಯರ್ ಸಹಿತ ಹಲವು ಮಂದಿ ಗಣ್ಯರು ಸಭೆಯಲ್ಲಿ ಭಾಗವಹಿಸಿದ್ದರು.