ಎರಿಂಜೇರಿ ಶ್ರೀ ಲಕ್ಷ್ಲೀ ವೆಂಕಟ್ರಮಣ ದೇವಸ್ಥಾನದ ಪುನರ್ ಪ್ರತಿಷ್ಠೆ ಬ್ರಹ್ಮಕಲಶೋತ್ಸವ
ಮುಳ್ಳೇರಿಯ: ಮುಳ್ಳೇರಿಯ ಸಮೀಪದ ಎರಿಂಜೇರಿ ಶ್ರೀ ಲಕ್ಷ್ಲೀ ವೆಂಕಟ್ರಮಣ ದೇವಸ್ಥಾನದ ಪುನರ್ ಪ್ರತಿಷ್ಠೆ ಬ್ರಹ್ಮಕಲಶೋತ್ಸವ ಎ.7 ರಿಂದ 9 ರ ವರೆಗೆ ವಿವಿಧ ಧಾಮರ್ಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಎ.7 ರಂದು ಬೆಳಗ್ಗೆ ಹಸಿರುವಾಣಿ ಹೊರೆಕಾಣಿಕೆ ಮತ್ತು ನೂತನ ಬಿಂಬಗಳ ಶೋಭಾಯಾತ್ರೆ ನಡೆಯಲಿದೆ. 10 ಗಂಟೆಗೆ ಪುಣ್ಯಾಹ ಗಣಪತಿ ಹೋಮದೊಂದಿಗೆ ಕಾರ್ಯಕ್ರಮ ಆರಂಭಗೊಳ್ಳಲಿದ್ದು ಸಂಜೆ 5 ಕ್ಕೆ ಕ್ಷೇತ್ರದ ತಂತ್ರಿಗಳಾದ ಕುಂಟಾರು ಬ್ರಹ್ಮಶ್ರೀ ವಾಸುದೇವ ತಂತ್ರಿ ಹಾಗೂ ತಾಂತ್ರಿಕ ವರ್ಗದವರಿಗೆ ಪೂರ್ಣ ಕುಂಭ ಸ್ವಾಗತ, 6 ರಿಂದ ಧಾಮರ್ಿಕ ಸಭೆ ನಡೆಯಲಿದೆ. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ತಾರಾನಾಥ ಮಧೂರು ಅವರ ಅಧ್ಯಕ್ಷತೆಯಲ್ಲಿ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅವರು ದೀಪ ಬೆಳಗಿಸಿ ಆಶೀರ್ವಚನ ನೀಡುವರು. ಕಾರಡ್ಕ ಗ್ರಾಮ ಪಂಚಾಯತು ಅಧ್ಯಕ್ಷೆ ಸ್ವಪ್ನಾ, ಮುಳಿಯಾರು ಗ್ರಾಮ ಪಂಚಾಯತು ಸದಸ್ಯ ಪಿ.ಬಾಲಕೃಷ್ಣ ಮತ್ತು ಗಣೇಶ ಮಜಕ್ಕಾರು ಸಹಿತ ಹಲವರು ಉಪಸ್ಥಿತರಿರುವರು. ನ್ಯಾಯವಾದಿ ಪ್ರವೀಣ್ ಕೋಡೋತ್ ಧಾಮರ್ಿಕ ಭಾಷಣ ಮಾಡುವರು. ರಾತ್ರಿ 7 ರಿಂದ ವಿವಿಧ ವಿಧಿವಿಧಾನಗಳು ನಡೆಯಲಿದೆ. 9.30 ರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಲಿದೆ.
ಎ.8 ರಂದು ಬೆಳಗ್ಗೆ ಗಣಪತಿ ಹೋಮ, ರಾತ್ರಿ 7.30 ಕ್ಕೆ ಧಾಮರ್ಿಕ ಸಭೆ, 9.30 ರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಲಿದೆ. ಎ.9 ರಂದು ಬೆಳಗ್ಗೆ 7 ರಿಂದ ಗಣಪತಿ ಹವನ, ಬ್ರ್ರಹ್ಮಕಲಶ ಪೂಜೆ, 11.07 ಮಿಥುನ ಲಗ್ನ ಸುಮುಹೂರ್ತದಲ್ಲಿ ಪ್ರತಿಷ್ಠೆ ಮತ್ತು ಬ್ರಹ್ಮಕಲಶಾಭಿಷೇಕ, ಮಹಾಪೂಜೆ, ನಿತ್ಯ ನೈಮಿತ್ತಿಕಾದಿಗಳ ನಿರ್ಣಯ, ಪ್ರಸಾದ ವಿತರಣೆ, ಮಧ್ಯಾಹ್ನ 1 ರಿಂದ ಅನ್ನ ಸಂತರ್ಪಣೆ, ಸಂಜೆ 5 ರಿಂದ ಭಜನೆ, ರಾತ್ರಿ 7 ರಿಂದ ಶ್ರೀ ಉಗ್ರಮೂತರ್ಿ ಮಂತ್ರವಾದಿ ಗುಳಿಗನ ಕೋಲ, 9 ರಿಂದ ಅನ್ನದಾನ ನಡೆಯುವುದು.