HEALTH TIPS

No title

                 ಸಾಯಿರಾಂ ಭಟ್ ರ ನಡೆ ಮಾದರಿ=ಡಾ.ಕಲ್ಲಡ್ಕ
     ಬದಿಯಡ್ಕ: ಸಾಯಿರಾಂ ಗೋಪಾಲಕೃಷ್ಣ ಭಟ್ ಅವರ ಸಮಾಜ ಸೇವೆ, ದೀನ-ದಲಿತರ ಬಗೆಗಿನ ಸೇವಾ ಕೈಂಕರ್ಯಗಳು ಹಿಂದೂ ಸಮಾಜದ ಅಭಿಮಾನವಾಗಿದ್ದು, ಅವರ ಈ ನಡೆ ಎಲ್ಲರಿಗೂ ಮಾದರಿ. ರಾಜಕೀಯವಾಗಿ ಭಿನ್ನ ದೃಷ್ಟಿಕೋನದವರಾಗಿದ್ದರೂ, ಧರ್ಮ, ನೆಲೆಕಂಡುಕೊಂಡ ಬದುಕಿನ ಮೂಲ ಸೆಲೆಯ ಅಭಿಮಾನ ಅವರನ್ನು ಸಮಾಜೋತ್ಸವದ ಅಧ್ಯಕ್ಷ ಸ್ಥಾನ ಅಲಂಕರಿಸುವಲ್ಲಿ ಪ್ರೇರಣೆ ನೀಡಿತು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರೀಯ ಸದಸ್ಯ ಡಾ.ಪ್ರಭಾಕರ ಭಟ್ ಕಲ್ಲಡ್ಕ ತಿಳಿಸಿದರು.
   ಅವರು ಬದಿಯಡ್ಕದಲ್ಲಿ ಶುಕ್ರವಾರ ಸಂಜೆ ವಿಹಿಂಪ-ಬಜರಂಗದಳ ಬದಿಯಡ್ಕ ಪ್ರಖಂಡ ಆಯೋಜಿಸಿದ ಬೃಹತ್ ಹಿಂದೂ ಸಮಾಜೋತ್ಸವ ಉದ್ಘಾಟಿಸಿ ಬಳಿಕ ಸಾಯಿರಾಂ ಗೋಪಾಲಕೃಷ್ಣ ಭಟ್ ರವರನ್ನು ಸರ್ವ ಹಿಂದೂ ಸಮಾಜದ ಪರವಾಗಿ ಅಭಿನಂದಿಸಿ ಮಾತನಾಡಿದರು.
  ದಶಕಗಳಿಂದ ಅನುಸರಿಸಿಕೊಂಡು ಬಂದ ರಾಜಕೀಯ ಪಕ್ಷವನ್ನು ಬದಿಗಿಟ್ಟು ಹಿಂದೂ ಸಮಾಜೋತ್ಸವದ ಮಹತ್ವವನ್ನು ಅರಿತು ಪಾಲ್ಗೊಂಡಿರುವುದು ಅತ್ಯಂತ ಪ್ರಶಂಸನೀಯ ಎಂದು ಶ್ಲಾಘಿಸಿದರು.
   ಬದಿಯಡ್ಕ ಗ್ರಾಮ ಪಂಚಾಯತು ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಅಧ್ಯಕ್ಷತೆ ವಹಿಸಿದ್ದರು.  ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ಶ್ರೀಯೋಗಾನಂದ ಸರಸ್ವತೀ ಸ್ವಾಮೀಜಿ, ಉತ್ತರಕಾಶಿ ಕಪಿಲಾಶ್ರಮದ ಶ್ರೀ ರಾಮಚಂದ್ರ ಸ್ವಾಮೀಜಿ, ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದ ಶ್ರೀಯೋಗಾನಂದ ಸರಸ್ವತೀ ಶ್ವಾಮೀಜಿ ದಿವ್ಯ ಉಪಸ್ಥಿತರಿದ್ದು ಮಾತನಾಡಿದರು. ವಿಶ್ವಹಿಂದೂ ಪರಿಷತ್ತು ಕನರ್ಾಟಕ ದಕ್ಷಿಣ ಪ್ರಾಂತ ಕಾಯರ್ಾಧ್ಯಕ್ಷ ಎಂ.ಬಿ.ಪುರಾಣಿಕ್, ಹಿಂದೂ ಐಕ್ಯವೇದಿ ಕೇರಳ ರಾಜ್ಯ ಪ್ರಧಾನ ಕಾರ್ಯದಶರ್ಿ ಕೆ.ಪಿ.ಹರಿದಾಸ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ವಿಶ್ವಹಿಂದೂ ಪರಿಷತ್ತು ಮಂಗಳೂರು ವಿಭಾಗ ಸಂಘಟನಾ ಕಾರ್ಯದಶರ್ಿ ಶರಣ್ ಪಂಪ್ವೆಲ್, ವಿಶ್ವಹಿಂದೂ ಪರಿಷತ್ತು ಮಂಗಳೂರು ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಪಿ.ಅಂಗಾರ ಶ್ರೀಪಾದ, ಬಿ.ನಿತ್ಯಾನಂದ ಶೆಣೈ, ಮಹೇಶ್ ವಳಕ್ಕುಂಜ, ಅವಿನಾಶ್ ರೈ ಉಪಸ್ಥಿತರಿದ್ದರು.
      ನೀರು, ಮಜ್ಜಿಗೆ ವಿತರಣೆ:
    ಬೃಹತ್ ಸಂಖ್ಯೆಯಲ್ಲಿ ನೆರೆದಿದ್ದ ಜನಸ್ತೋಮ ಉರಿಬಿಸಿಲನ್ನೂ ಲೆಕ್ಕಿಸದೆ ಪಾಲ್ಗೊಂಡಿದ್ದರು. ಈ ಸಂದರ್ಭ ದಾಹ ನಿವಾರಣೆಗೆ ವಿಹಿಂಪ, ಭಜರಂಗದಳ ಕಾರ್ಯಕರ್ತರು ಮಜ್ಜಿಗೆ ಹಾಗೂ ನೀರನ್ನು ನಿರಂತರವಾಗಿ ವಿತರಿಸಿದರು.ಕೇಸರಿ ಬಣ್ಣಗಳ ವಸ್ತ್ರಗಳನ್ನು ಧರಿಸಿದ ಯುವಕ-ಯುವತಿಯರ ತಂಡ ನಿರಂತರ ಸೇವಾ ಚಟುವಟಿಕೆಯ ಮೂಲಕ ಜನಪ್ರೀತಿಗೆ ಕಾರಣರಾದರು.
  ರಾಘವೇಶ್ವರ ಶ್ರೀಗಳ ಸಂದೇಶ:
   ಹಿಂದೂ ಸಮಾಜೋತ್ಸವದಲ್ಲಿ ಪಾಲ್ಗೊಳ್ಳಲು ಆಹ್ವಾನಿತರಾಗಿದ್ದ ಶ್ರೀಮದ್ ರಾಮಚಂದ್ರಾಪುರ ಮಠ ಹೊಸನಗರದ ಶ್ರೀರಾಘವೇಶ್ವರ ಶ್ರೀಗಳು ತಮ್ಮ ಕಾರ್ಯಕ್ರಮಗಳ ಒತ್ತಡದ ಮಧ್ಯೆ ಆಗಮಿಸಿರಲಿಲ್ಲ. ಆದರೆ ಸಮಾಜೋತ್ಸವಕ್ಕೆ ಮೊಬೈಲ್ ಮೂಲಕ ವಾಕ್ ಸಂದೇಶ ಕಳಿಸಿ ಶುಭ ಹಾರೈಸಿದ್ದರು. ಅದನ್ನು ಸಾರ್ವಜನಿಕವಾಗಿ ಕೇಳಿಸಲಾಯಿತು. ಅವರು ತಮ್ಮ ಸಂದೇಶದಲ್ಲಿ ಕೇರಳದಲ್ಲಿ ವರ್ತಮಾನ ಕಾಲಘಟ್ಟದಲ್ಲಿ ನಡೆಯುತ್ತಿರುವ ಹಿಂದೂ ವಿರುದ್ದ ಕಾಯರ್?ಚರಣೆಗಳ ಬಗ್ಗೆ ವಿಶಾದ ವ್ಯಕ್ತಪಡಿಸಿ, ಗೋ ಹತ್ಯೆ ಮತ್ತು ಲವ್ ಜಿವಾದ್ ನಂತಹ ಪಿಡುಗಳಿಂದ ಹೊರಬರಲು ಹಿಂದೂ ಸಮಾಜ ಒಗ್ಗಟ್ಟಾಗಿ ಕಾರ್ಯನಿರ್ವಹಿಸಬೇಕಿದೆ ಎಂದು ಸಂದೇಶ ನೀಡಿದರು.
   ಸ್ವಯಂಸೇವಕರ ಅಚ್ಚುಕಟ್ಟು:
   ಶುಕ್ರವಾರ ನಡೆದ ಬೃಹತ್ ಹಿಂದೂ ಸಮಾಜೋತ್ಸವಕ್ಕೆ ಪೂರ್ವಭಾವಿಯಾಗಿ ಗುರುವಾರದಿಂದಲೇ ಸಮಾಜೋತ್ಸವದ ಯಶಸ್ವಿಗೆ ವಿಹಿಂಪ, ಬಜರಂಗದಳದ ಯುವ ಕಾರ್ಯಕರ್ತರ ದಂಡು ಬದಿಯಡ್ಕದಲ್ಲಿ ಸುಡುಬಿಸಿಲನ್ನೂ ಲೆಕ್ಕಿಸದೆ ಕಾರ್ಯಪ್ರವೃತ್ತವಾಗಿತ್ತು. ಕೇಸರೀ ವರ್ಣಗಳಿಂದ ಶೃಂಗಾರಗೊಂಡಿದ್ದ ಬದಿಯಡ್ಕ ಪೇಟೆ ಸಂಭ್ರಮ, ಸಡಗರದ ಜಾತ್ರೆಯ ಪರಿ ಮೂಡಿಸಿತು.
   ನವಜೀವನ ಶಾಲಾ ವಠಾರದಿಂದ ಸಮ್ಮೇಳನಕ್ಕೆ ಪೂರ್ವದಲ್ಲಿ ನಡೆದ ಮೆರವಣಿಗೆಗೆ ಮೂಲೆಮೂಲೆಗಳ ಹಿಂದೂ ಬಾಂಧವರು ಬದಿಯಡ್ಕ ಮುಖ್ಯ ಪೇಟೆಯ ಮೂಲಕ ಸಮ್ಮೇಳನ ನಗರಿ ಬೋಳುಕಟ್ಟೆಗೆ ಮೆರವಣಿಗೆ ನಡೆಸಿದರು. ಮೆರವಣಿಗೆಯಲ್ಲಿ ಪಾಲ್ಗೊಂಡವರಿಗೆ, ಸಮಾಜೋತ್ಸವ ನಡೆದ ಮೈದಾನದಲ್ಲಿ ಪ್ರತಿ ನಿಮಿಷಗಳಲ್ಲೂ ಎಲ್ಲ ಸೇವೆಗಳಿಗೂ ಸಿದ್ದರಾದ ಕೇಸರಿ ವಸ್ತ್ರ ಧಾರಣೆಗೈದ ನೂರಕ್ಕೂ ಮಿಕ್ಕಿದ ಸ್ವಯಂಸೇವಕರು ಜನರ ಆದಾರಕ್ಕೆ ಪಾತ್ರರಾದರು.
    ನಡೆಯದ ಆಟ:
   ಹಿಂದೂ ಸಮಾಜೋತ್ಸವವನ್ನು ನಿಷ್ಕ್ರೀಯಗೊಳಿಸಲು ವಿವಿಧ ಪಕ್ಷಗಳು ನಡೆಸಿದ ತೆರೆಮರೆಯ ಚಟುವಟಿಕೆಗಳು ಕೊನೆಯವರೆಗೂ ಫಲನೀಡಲಿಲ್ಲ. ಕೊನೆಯ ಘಳಿಗೆಯಲ್ಲಿ ಪೋಲೀಸರ ಮೂಲಕ ಸಮಾಜೋತ್ಸವ ಮೆರವಣಿಗೆ ಬದಿಯಡ್ಕ ಪೇಟೆಯ ಮೂಲಕ ಸಾಗದಂತೆ ನಿರ್ಬಂಧಿಸಿ ಆದೇಶ ಜಾರಿಯಾಯಿತಾದರೂ ಸಾಮಾನ್ಯ ಕಾರ್ಯಕರ್ತರ ಹಠದಂತೆ ಶಾಂತರೀತಿಯಲ್ಲಿ ಬದಿಯಡ್ಕ ಪೇಟೆಯ ಮೂಲಕವೇ ಮೆರವಣಿಗೆ ಸಾಗಿ ಸಮಾಜೋತ್ಸವ ನಗರಿ ತಲಪಿತು.
   ಶುಚಿತ್ವ ಪಾಲನೆ:
  ಸುಮಾರು 40 ಸಾವಿರಕ್ಕಿಂತಲೂ ಮಿಕ್ಕಿದ ಜನರು ಪಾಲ್ಗೊಂಡ ಹಿಂದೂ ಸಮಾಜೋತ್ಸವ, ಶನಿವಾರ ಬೆಳಗಾಗುತ್ತಿರುವಂತೆ ಸಮ್ಮೇಳನ ನಡೆದ ಪರಿಸರವೇ ಅಲ್ಲವೇನೋ ಎಂಬಂತೆ ಸಂಪೂರ್ಣ ಶುಚೀಕರಣಗೊಂಡಿರುವುದು ಸಾರ್ವಜನಿಕರ ಮುಕ್ತ ಶ್ಲಾಘನೆಗೆ ಪಾತ್ರವಾದುದು ವಿಶೇಷವಾಗಿತ್ತು. ಶುಕ್ರವಾರ ರಾತ್ರಿ ಸ್ವಯಂಸೇವಕರ ನಿರಂತರ ಕರ್ತವ್ಯನಿಷ್ಠೆಯ ಫಲವಾಗಿ ಸ್ವಚ್ಚತೆ ಕಾಪಾಡುವಲ್ಲಿ ಪರಿಣಾಮಕಾರಿಯಾಗಿ ಮೂಡಿಬಂತು.
 
 
         
   
             

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries