ವಿಶ್ವಸಂಸ್ಥೆ ಉಪಸಮಿತಿಗಳ ಚುನಾವಣೆ: ಭಾರತಕ್ಕೆ ಗೆಲುವು
ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಪ್ರಮುಖ ಆಡಳಿತೇತರ ಸಮಿತಿಯೊಂದರ ಚುನಾವಣೆಯಲ್ಲಿ ಅತಿಹೆಚ್ಚು ಮತ ಗಳಿಸುವ ಮೂಲಕ ಭಾರತ ಮಹತ್ವದ ಗೆಲುವು ದಾಖಲಿಸಿದೆ.
ವಿಶ್ವಸಂಸ್ಥೆಯ ಆಥರ್ಿಕ ಮತ್ತು ಸಾಮಾಜಿಕ ಮಂಡಳಿ ಮತ್ತು ಅದರ ಉಪ ಸಮಿತಿಗಳ ಚುನಾವಣೆ ಸೋಮವಾರ ನಡೆದಿತ್ತು. ಆಥರ್ಿಕ, ಸಾಮಾಜಿಕ ಮತ್ತು ಪರಿಸರಾತ್ಮಕ- ಸುಸ್ಥಿರ ಅಭಿವೃದ್ಧಿಗೆ ಈ ಮಂಡಳಿ ಒತ್ತು ನೀಡುತ್ತದೆ.
ಈ ಚುನಾವಣೆ ಗೆಲುವಿನ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ಪ್ರತಿನಿಧಿಯಾಗಿರುವ ಸಯ್ಯದ್ ಅಕ್ಬರುದ್ದೀನ್ ಪಿಟಿಐ ಜತೆ ಮಾತನಾಡುತ್ತ, 'ವಿಶ್ವಸಂಸ್ಥೆ ಸದಸ್ಯರಲ್ಲಿ ಭಾರತದ ಮಿತ್ರರ ಸಂಖ್ಯೆ ಹೆಚ್ಚುತ್ತಿರುವುದರ ದ್ಯೋತಕವಿದು' ಎಂದು ಪ್ರತಿಕ್ರಿಯಿಸಿದ್ದಾರೆ.
ಸರಕಾರೇತರ ಸಂಘಟನೆಗಳ ಸಮಿತಿ ಚುನಾವಣೆಯಲ್ಲಿ ಭಾರತ ಅತಿಹೆಚ್ಚು ಸ್ಥಾನ ಗೆದ್ದಿದೆ.
ಮೊದಲ ಸುತ್ತಿನ ರಹಸ್ಯ ಮತದಾನದಲ್ಲಿ ಮಂಡಳಿಯು ಏಷ್ಯಾ ಪೆಸಿಫಿಕ್ ವಿಭಾಗದಲ್ಲಿ ಬಹ್ರೈನ್, ಚೀನಾ, ಭಾರತ ಮತ್ತು ಪಾಕಿಸ್ತಾನವನ್ನು ಆಯ್ಕೆ ಮಾಡಿದರೆ, ಲ್ಯಾಟಿನ್ ಅಮೆರಿಕ ಮತ್ತು ಕೆರಿಬಿಯನ್ ರಾಷ್ಟ್ರಗಳ ವಿಭಾಗದಲ್ಲಿ ಬ್ರೆಜಿಲ್, ಕ್ಯೂಬಾ, ಮೆಕ್ಸಿಕೋ ಮತ್ತು ನಿಕರಾಗುವಾ ದೇಶಗಳನ್ನು ಆಯ್ಕೆ ಮಾಡಿತು. ಈ ಸಮಿತಿಯ ನಾಲ್ಕು ವರ್ಷಗಳ ಅಧಿಕಾರಾವಧಿ 2019ರ ಜನವರಿ 1ರಿಂದ ಪ್ರಾರಂಭವಾಗುತ್ತದೆ.
ಭಾರತಕ್ಕೆ ಅತ್ಯಧಿಕ 46 ಮತಗಳು ಬಂದರೆ, ನಂತರದ ಸ್ಥಾನಗಳು ಪಾಕಿಸ್ತಾನ (43), ಬಹ್ರೈನ್ (40) ಮತ್ತು ಚೀನಾ (39) ಮತಗಳನ್ನು ಪಡೆದವು. ಇರಾನ್ ಕೇವಲ 27 ಮತಗಳನ್ನು ಪಡೆದು ಸೋಲು ಅನುಭವಿಸಿತು.