ಮಧೂರು ದೇವಸ್ಥಾನದ ನವೀಕರಣ ಕಾಮಗಾರಿಗೆ ಚಾಲನೆ
ಮಧೂರು: ಇತಿಹಾಸ ಪ್ರಸಿದ್ಧ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ನವೀಕರಣ ಕಾಮಗಾರಿಗಳಿಗೆ ಭಾನುವಾರ ಚಾಲನೆ ನೀಡಲಾಯಿತು.
ಭಾನುವಾರ ಬೆಳಗ್ಗೆ ಎಡನೀರು ಮಠದ ಶ್ರೀ ಕೇಶವಾನಂದ ಭಾರತೀ ಸ್ವಾಮಿಗಳು ಹಾಗೂ ತಂತ್ರಿವರ್ಯರಾದ ಶಿವಪ್ರಸಾದ್ ತಂತ್ರಿ ದೇರೇಬೈಲು ಅವರು ಕ್ಷೇತ್ರಕ್ಕೆ ಆಗಮಿಸಿದರು. ಅವರನ್ನು ನವೀಕರಣ ಸಮಿತಿ ಸದಸ್ಯರು ಹಾಗೂ ಭಕ್ತ ಜನರು ಸೇರಿ ಸ್ವಾಗತಿಸಿದರು. ಸ್ವಾಮೀಜಿಯವರಿಗೆ ಸಮಿತಿಯ ಅಧ್ಯಕ್ಷ ಯು.ಟಿ.ಆಳ್ವ, ಉಪಾಧ್ಯಕ್ಷ ಡಾ.ಬಿ.ಎಸ್.ರಾವ್ ಮತ್ತು ಪ್ರಧಾನ ಕಾರ್ಯದಶರ್ಿ ಜಯದೇವ ಖಂಡಿಗೆ ಅವರು ಫಲಪುಷ್ಪ ಕಾಣಿಕೆ ಇತ್ತು ಗೌರವಿಸಿದರು.
ಶ್ರೀಗಳು ಈ ಸಂದರ್ಭ ಅನುಗ್ರಹ ಆಶೀರ್ವಚನ ನೀಡಿ ನವೀಕರಣ ಕಾಮಗಾರಿ ಯಾವುದೇ ಅಡೆತಡೆ ಇಲ್ಲದೆ ಸಾಂಗವಾಗಿ ನೆರವೇರಲಿ ಎಂದು ಹರಸಿದರು. ತಂತ್ರಿವರ್ಯರ ನೇತೃತ್ವದಲ್ಲಿ ಕಾಮಗಾರಿಗೆ ಶುಭಾರಂಭ ಮಾಡಲು ಪ್ರಾರ್ಥನೆ ನಡೆಸಿದ ಬಳಿಕ ಕಾಮಗಾರಿ ಆರಂಭಿಸಲಾಯಿತು. ಕಾರ್ಯಕ್ರಮದಲ್ಲಿ ನವೀಕರಣ ಸಮಿತಿಯ ಸದಸ್ಯರ ಸಹಿತ ಭಕ್ತ ಜನ ಸಮಿತಿಯ ಪದಾಧಿಕಾರಿಗಳೂ, ಸೀಮೆಯ ಭಕ್ತರೂ ಉಪಸ್ಥಿರಿದ್ದರು.