HEALTH TIPS

No title

                  ಗುರುವಾಯೂರು ಕ್ಷೇತ್ರ ಪ್ರಸಾದ ಸಭಾಂಗಣಕ್ಕೆ ಅಹಿಂದುಗಳಿಗೂ ಪ್ರವೇಶ ಅನುಮತಿ
      ತಿರುವನಂತಪುರ: ವಿಶ್ವವಿಖ್ಯಾತ ಪ್ರಸಿದ್ಧ  ಗುರುವಾಯೂರು ಶ್ರೀ ಕೃಷ್ಣ ದೇವಸ್ಥಾನದ ಆವರಣ ಗೋಡೆಯ ಹೊರಗಿರುವ ಅನ್ನಲಕ್ಷ್ಮಿ ಸಭಾಂಗಣಕ್ಕೆ ಪ್ರಸಾದ ಸ್ವೀಕರಿಸಲು ಅಹಿಂದುಗಳಿಗೂ ಅನುಮತಿ ನೀಡಲು ಶ್ರೀ ದೇಗುಲದ ಮುಜರಾಯಿ ಆಡಳಿತ ಸಮಿತಿಯ ಸಭೆಯಲ್ಲಿ  ತೀಮರ್ಾನಿಸಲಾಗಿದೆ.
   ಪ್ರಸ್ತುತ ಸಭಾಂಗಣಕ್ಕೆ ಈ ವರೆಗೆ ಅಹಿಂದುಗಳಿಗೆ ಪ್ರವೇಶ ನೀಡುತ್ತಿರಲಿಲ್ಲ. ಅಲ್ಲದೆ ಅಂಗಿ, ಬನಿಯನ್ ಮತ್ತು  ಚಪ್ಪಲಿ ಧರಿಸಿ ಅನ್ನಲಕ್ಷ್ಮಿ  ಸಭಾಂಗಣಕ್ಕೆ ಪ್ರವೇಶಿಸಬಾರದೆಂಬ ನಿಬಂಧನೆ ಜಾರಿಯಲ್ಲಿತ್ತು. ಇನ್ನು  ಮುಂದೆ ಶಟರ್್, ಬನಿಯನ್ ಧರಿಸಿ ಸಭಾಂಗಣಕ್ಕೆ ಪ್ರವೇಶಿಸಬಹುದು. ಆದರೆ ಇದೇ ವೇಳೆ ಮೊಬೈಲ್ ಫೋನ್ಗಳನ್ನು  ಸಭಾಂಗಣದೊಳಗೆ ಬಳಸುವುದಕ್ಕೆ ನಿಷೇಧ ಹೇರಲಾಗಿದೆ.
    ಅನ್ನಲಕ್ಷ್ಮಿ  ಸಭಾಂಗಣದಲ್ಲಿ  ಈಗ 416 ಆಸನಗಳಿವೆ. ಸ್ಥಳ ಸೌಕರ್ಯ ಕೊರತೆ ಹಿನ್ನೆಲೆಯಲ್ಲಿ  ಅದರ ಹೊರಗಡೆ ವಿಶೇಷ ಚಪ್ಪರ ಏರ್ಪಡಿಸಲಾಗಿದೆ. ಅದರಲ್ಲಿ  ಈಗ 400 ಆಸನ ಸೌಲಭ್ಯ ಕಲ್ಪಿಸಲಾಗಿದೆ. ಆ ಮೂಲಕ ಒಟ್ಟು  ಆಸನ ಸೌಕರ್ಯ ಈಗ ಇಮ್ಮಡಿಗೊಂಡಿದೆ. ಇದು ಭಕ್ತರಿಗೆ ಹೆಚ್ಚು  ಅನುಕೂಲಕರವಾಗಿ ಪರಿಣಮಿಸಲಿದೆ. ಇನ್ನೊಂದೆಡೆ ಅನ್ನಲಕ್ಷ್ಮಿ  ಸಭಾಂಗಣಕ್ಕೆ ಪ್ರವೇಶ ನಿರ್ಬಂಧ ತೆರವುಗೊಳಿಸಿರುವುದರಿಂದ ಶ್ರೀ ಕ್ಷೇತ್ರದ ಆವರಣ ಗೋಡೆಯ ಹೊರಗಡೆ ಸಂದರ್ಶಕರ ಸಂಖ್ಯೆ ಭಾರೀ ಹೆಚ್ಚಳವಾಗುವ ಸಾಧ್ಯತೆ ಇರುವುದಾಗಿ ಅಂದಾಜಿಸಲಾಗಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries