HEALTH TIPS

No title

             ಜೀವನ ಶ್ರೇಷ್ಠತೆಯ ಮೌಲ್ಯಗಳು ಕಲೆಗಳಿಂದ-ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ
                  ರಂಗಚಿನ್ನಾರಿಯ 12ನೇ ವಾಷರ್ಿಕೋತ್ಸವ ಉದ್ಘಾಟನೆ 
       ಕಾಸರಗೋಡು: ಭರತ ಖಂಡದಲ್ಲಿರುವಷ್ಟು ವೈವಿಧ್ಯತೆ ಜಗತ್ತಿನ ಬೇರೊಂದು ಪ್ರದೇಶದಲ್ಲಿರದು. ಈ ಕಾರಣದಿಂದ ನಮ್ಮ ರಾಷ್ಟ್ರದ ಸಾಂಸ್ಕೃತಿಕ, ಸಾಮಾಜಿಕ ಮೌಲ್ಯಗಳು ಜಾಗತಿಕ ಮಾನ್ಯತೆ ಹೊಂದಿದೆ ಎಂದು ಕ್ಯಾಂಪ್ಕೋದ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಅಭಿಪ್ರಾಯ ವ್ಯಕ್ತಪಡಿಸಿದರು.
   ಕಾಸರಗೋಡಿನ ಸಾಮಾಜಿಕ, ಸಾಂಸ್ಕೃತಿಕ ಸಂಘಟನೆಯಾದ "ರಂಗಚಿನ್ನಾರಿ ಕಾಸರಗೋಡು" ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಶನಿವಾರ ಸಂಜೆ ಕಾಸರಗೋಡು ನಗರಸಭಾ ಸಭಾಂಗಣದಲ್ಲಿ ಹಮ್ಮಿಕೊಂಡ ಹನ್ನೆರಡನೇ ವಾಷರ್ಿಕೋತ್ಸವ-ಪ್ರಶಸ್ತಿ ಪ್ರಧಾನ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
   ಮಾತೃ ಸ್ವರೂಪಿಯಾದ ಭಾಷೆ ಎಳವೆಯಲ್ಲಿ ಜ್ಞಾನರೂಪದಲ್ಲಿ ಎಲ್ಲವನ್ನೂ ಗ್ರಹಿಸಲು ಕಾರಣವಾಗುತ್ತದೆ. ಆದರೆ ಬಳಿಕ ಅದನ್ನು ಪರಿಪೋಶಿಸಿ ಬೆಳೆಸುವ ಹೊಣೆ ನಮ್ಮೆಲ್ಲರದು ಎಂದು ತಿಳಿಸಿದ ಅವರು, ಕಲೆ, ಸಂಸ್ಕೃತಿಗಳು ವ್ಯಕ್ತಿತ್ವ ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಜೀವನಕ್ಕೆ ಶ್ರೇಷ್ಠತೆಯ ಮೂಲಕ ಮೌಲ್ಯವೊದಗಿಸುವ ಕಲೆಗಳು ಹೊಸ ಪೀಳಿಗೆಯ ಬೆಳವಣಿಗೆಗೆ ಪ್ರೇರಣೆಯಾಗಿದೆ. ಗಡಿನಾಡಲ್ಲಿ ರಂಗಚಿನ್ನಾರಿಯ ಅವಿರತ ವಿವಿಧ ಮುಖಗಳ ಚಲನೆಗಳು ಸಂಸ್ಕೃತಿ ಸಂವರ್ಧನೆಯಲ್ಲಿ ಮುಂಚೂಣಿಯಲ್ಲಿರುವುದು ಹೆಮ್ಮೆಯ ಕತೃತ್ವದ ಸಂಕೇತ ಎಂದು ಅವರು ಹೇಳಿದರು.
    ಪಣಂಬೂರು ಬೀಚ್ ಪ್ರವಾಸೋಧ್ಯಮ ಅಭಿವೃದ್ದಿ ಯೋಜನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯತೀಶ್ ಬೈಕಂಪಾಡಿ, ರಂಗನಟ, ಉದ್ಯಮಿ ಸುಭಾಶ್ ಕಾಮತ್ ಕಾರ್ಕಳ ಮುಖ್ಯ ಅಭ್ಯಾಗತರಾಗಿ ಉಪಸ್ಥಿತರಿದ್ದು ಮಾತನಾಡಿದರು.
   ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ದೆಹಲಿ ರಾಷ್ಟ್ರೀಯ ನಾಟಕ ಶಾಲೆ(ಎನ್ಎಸ್ಡಿ)ಯ ಪ್ರಾಚಾರ್ಯ ಸುರೇಶ್ ಶೆಟ್ಟಿ ಮಾತನಾಡಿ, ಪ್ರಾದೇಶಿಕ ಭಾಷಾ ನಾಟಕಗಳ ಸಹಿತ ಸ್ಥಳೀಯ ವಿವಿಧ ಕಲಾ ಪ್ರಕಾರಗಳು ಎನ್ಎಸ್ಡಿ ಸಹಿತ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಡುವಲ್ಲಿ ಇಂದಿನ ಆಧುನಿಕ ಯುಗದಲ್ಲೂ ಕಳವಳಕಾರಿಯಾದ ತೊಡಕಿದೆ. ಈ ಜಟಿಲತೆಯ ಹೊರತು ಮಿಕ್ಕೆಲ್ಲಾ ದೃಷ್ಟಿಯಲ್ಲಿ ಈ ಮಣ್ಣಿನ ನೈಜ ಕಲಾ ರೂಪಗಳು ಅಧಮ್ಯ ಶ್ರೀಮಂತಿಕೆಯುಳ್ಳವು ಎಂದು ತಿಳಿಸಿದರು. ಚಿಂದಿ ಆಯುವ ಬೀದಿಬದಿಯ ಮಕ್ಕಳ ಸಂಕೀರ್ಣ ಮನೋಸ್ಥಿತಿಯನ್ನು ಗ್ರಹಿಸಿ ಮುಖ್ಯವಾಹಿನಿಗೆ ಕರೆತರುವ ಯತ್ನದಲ್ಲಿ ಪ್ರಾದೇಶಿಕ ಭಾಷಾ ನಾಟಕ ಸಹಿತ ಇತರ ಕಲಾ ಪ್ರಕಾರಗಳ ಮೂಲಕ ಕೊಡುಗೆ ಸ್ತುತ್ಯರ್ಹ ಎಂದು ರಂಗಚಿನ್ನಾರಿಯ ವೈವಿಧ್ಯಮಯ ಕಾರ್ಯಚಟುವಟಿಕೆಯನ್ನು ಶ್ಲಾಘಿಸಿದರು.
   ವೇದಿಕೆಯಲ್ಲಿ ನಾಗಭೂಷಣ ವಿಪಿನ್ ರಾಗವೀಣಾ ನೀಲೇಶ್ವರ ಉಪಸ್ಥಿತರಿದ್ದರು. ರಂಗಚಿನ್ನಾರಿಯ ನಿದರ್ೇಶಕ, ಚಲನಚಿತ್ರ ಹಾಗೂ ರಂಗನಟ, ನಿದರ್ೇಶಕ ಕಾಸರಗೋಡು ಚಿನ್ನಾ ಪ್ರಾಸ್ತಾವಿಕವಾಗಿ ಮಾತನಾಡಿ ಹನ್ನೆರಡು ವರ್ಷಗಳಲ್ಲಿ ರಂಗಚಿನ್ನಾರಿ ಹಾದುಬಂದ ನೆನಪುಗಳನ್ನು ಪ್ರಸ್ತುತಪಡಿಸಿದರು. ಆಪ್ತರ ಚಿಕಿತ್ಸೆಗಾಗಿ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಕಾಸರಗೋಡಿನ ಹಿರಿಯ ಚರ್ಮರೋಗ ತಜ್ಞ ಡಾ.ಎಸ್.ಆರ್.ನರಹರಿಯವರನ್ನು ಭೇಟಿಯಾದ ಸಂದರ್ಭ ಅವರ ವೈದ್ಯಕೀಯ ಸಂಶೋಧನಾ ಕೇಂದ್ರ ಐಎಡಿಯಲ್ಲಿ ಚಿಂದಿ ಆಯುವ ಅಲೆಮಾರಿ ಯುವಕರ ಪುನರ್ವಸತಿಗಾಗಿ ಕೈಗೊಂಡ ಯೋಜನೆಯಿಂದ ಪ್ರೇರಣೆಪಡೆದು ಅಲ್ಲಿಯ ಮಕ್ಕಳನ್ನೇ ಬಳಸಿ ಮೊದಲ ಮಕ್ಕಳ ನಾಟಕ ಪ್ರದಶರ್ಿಸಿದ್ದು ಮತ್ತು ಅದು ಬಳಿಕ ಮಕ್ಕಳ ಸಾಂಸ್ಕೃತಿಕ, ಸಾಮಾಜಿಕ ಬೆಳವಣಿಗೆಗೆ ಪೂರಕವಾಗುವಂತೆ ರಂಗಚಿನ್ನಾರಿಯ ಹುಟ್ಟಿಗೆ ಕಾರಣವಾದ ರಸನಿಮಿಷಗಳನ್ನು ಕಾಸರಗೋಡು ಚಿನ್ನಾ ಈ ಸಂದರ್ಭ ನೆನಪಿಸಿದರು.
   ರಂಗಚಿನ್ನಾರಿಯ ನಿದರ್ೇಶಕ ಕೋಳಾರು ಸತೀಶ್ಚಂದ್ರ ಭಂಡಾರಿ ಸ್ವಾಗತಿಸಿ, ಸತ್ಯನಾರಾಯಣ ಕೆ. ವಂದಿಸಿದರು.ಮನೋಹರ ಶೆಟ್ಟಿ ಸಹಕರಿಸಿದರು. ಸಭಾ ಕಾರ್ಯಕ್ರಮಕ್ಕೂ ಮೊದಲು ನಡೆದ ಸಂಕೀರ್ತನಾ ಕಾರ್ಯಕ್ರಮವನ್ನು ಖ್ಯಾತ ಗಾಯಕ ರಾಮಕೃಷ್ಣ ಕಾಟುಕುಕ್ಕೆ ದೀಪ ಬೆಳಗಿಸಿ ಚಾಲನೆ ನೀಡಿದರು. ಇಚ್ಲಂಪಾಡಿಯ ಮಹಾದೇವಿ ಭಜನಾ ಮಂಡಳಿ, ತ್ರಿಕ್ಕನ್ನಾಡಿನ ಶಿವಪ್ರಿಯ ಮಹಿಳಾ ಭಜನಾ ಮಂಡಳಿ, ಬಾಯಾರು ಶ್ರೀಪಂಚಲಿಂಗೇಶ್ವರ ಭಜನಾ ಮಂಡಳಿ ಹಾಗೂ ಚಿಪ್ಪಾರು ಶ್ರೀವಿಷ್ಣುಮೂತರ್ಿ ಭಜನಾ ಮಂಡಳಿಗಳಿಂದ ಭಜನಾ ಸಂಕೀರ್ತನೆ ನಡೆಯಿತು. ಸಭಾ ಕಾರ್ಯಕ್ರಮದ ಬಳಿಕ ಡಾ.ದೀಪಾ ಮಾಧವನ್ ಪೊಡವೂರ್ ರವರಿಂದ ಆಕರ್ಷಕ ಮೋಹಿನಿಯಾಟ್ಟಂ, ಬಳಿಕ ಗಾನ ಭೂಷಣ ವಿಪಿನ್ ರಾಗವೀಣಾ ನೀಲೇಶ್ವರರಿಂದ ರಾಗಸುಧಾ ಗಾಯನ ಕಾರ್ಯಕ್ರಮ ನಡೆಯಿತು. ಪಕ್ಕವಾದ್ಯದಲ್ಲಿ ಕಾಸರಗೋಡು ಡಿವೈಎಸ್ಪಿ ಪ್ರಭಾಕರನ್(ಮೃದಂಗ), ನಾಗಭೂಷಣ ರಾಜೇಶ್ ವಡಗರ(ಪಿಟೀಲು), ರಾಜೀವ ವೆಳ್ಳಿಕ್ಕೋತ್(ಮೋಸರ್ಿಂಗ್) ಸಹಕರಿಸಿದರು. ಸಹಗಾಯನದಲ್ಲಿ ಅಜಿನ್ ಅಶೋಕ ಹಾಗೂ ಕು.ಸೂರ್ಯಕಿರಣ್ ಭಾಗಿಗಳಾಗಿದ್ದರು.
     

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries