HEALTH TIPS

No title

              ಮಳೆಗೆ ಮೊದಲು-ಕಣ್ತೆರೆಸುವ ಬೀದಿ ನಾಟಕ 
    ಕು0ಬಳೆ :  ಬೆಳೆಯುತ್ತಿರುವ ನಗರೀಕರಣ, ಜನಸಂಖ್ಯಾ ವಧ9ನೆಯ ಮಧ್ಯೆ ಪರಿಸರ ಅಸಮತೋಲನಗೊಂಡು ವ್ಯಾಪಕ ಪ್ರಮಾಣದ ದುಷ್ಪರಿಣಾಮಗಳು ಜೀವ ಸಂಕುಲಗಳ ಬದುಕಿಗೆ ಸವಾಲಾಗುತ್ತಿದೆ. ಇಂತಹ ಜೀವನಾಶಗಳನ್ನು ನಿಯಂತ್ರಿಸಲು, ಆರೋಗ್ಯ ಪೂಣ9 ಬದುಕಿಗೆ ನಾಗರಿಕರೇ ಸ್ವಯಂ ಪ್ರೇರಿತರಾಗಿ ಕೆಲವು ಪೂರ್ವಯೋಜಿತ ಕ್ರಮಗಳನ್ನು ಅಳವಡಿಸಿ ಜಾಗೃತರಾಗುವ ನಿಟ್ಟಿನ ಜಾಗೃತಿ ಕಾಯ9ಕ್ರಮಗಳು ನಡೆಯುತ್ತಿದೆ.
  ಈ ಹಿನ್ನೆಲೆಯಲ್ಲಿ ಜಿಲ್ಲಾ ಶುಚಿತ್ವ ಮಿಷನ್ ಆಶ್ರಯದಲ್ಲಿ ಜಿಲ್ಲೆಯಾದ್ಯಂತ ಜಾಗೃತಿ ಕಾಯ9ಕ್ರಮದ ಭಾಗವಾಗಿ ಬೀದಿ ನಾಟಕಗಳು ಪರಿಣಾಮಕಾರಿಯಾಗಿ ಪ್ರದಶ9ನ ನೀಡುತ್ತಿದೆ.
   ಮುಳಿಯಾರಿನ ಪುಂಜಿರಿ ತ0ಡ 'ಮಳೆಗೆ ಮೊದಲು ' ಬೀದಿ ನಾಟಕ ಪ್ರದಶಿ9ಸಿ ಗಮನ ಸೆಳೆಯುತ್ತಿದ್ದು ಶನಿವಾರ ಕು0ಬಳೆ, ಸೀತಾ ಂಗೋಳಿ, ನೀಚಾ9ಲು , ಬದಿಯಡ್ಕ ಮೊದಲಾದೆಡೆ ಪ್ರದಶ9ನ ನೀಡಿತು.
   ಪುಂಜಿರಿ ತ0ಡದ ಬಿ.ಸಿ.ಕುಮಾರನ್ ನಿದೇ9ಶಿಸಿರುವ ನಾಟಕ ಕಥಾನಕ್ಕೆ ಸವಾಕ್ ಜಿಲ್ಲಾ ಕಾಯ9ದಶಿ9 ತುಳಸೀಧರನ್, ಹಾಗೂ ರತೀಶ್ ಕಾರಡ್ಕ, ವಿನು ಬೋವಿಕ್ಕಾನ, ಮಜೀದ್, ನೆಪ್ಚೂನ್, ಮೋಹಿನಿ ಮುಳಿಯಾರು ಪಾತ್ರಗಳಿಗೆ ಜೀವ ತು0ಬಿದ್ದಾರೆ.
   ವಸತಿ ಸಮುಚ್ಚಯಗಳ ವಠಾರಗಳಲ್ಲಿ ವಾಸಿಸುವ ಜನರ ನಿತ್ಯ ಜೀವನದ ಮಾತುಕತೆಗಳು, ಅಸಂತುಷ್ಠಿ-ಗೊಂದಲಗಳನ್ನು ಕಥಾವಸ್ತುವಾಗಿಸಿ ತೆರೆದುಕೊಳ್ಳುವ ಕಥಾನಕ ಜನಸಾಮಾನ್ಯರ ಜೀವನದಲ್ಲಿ ರೋಗ-ರುಜಿನಗಳು ಬೀರುವ ಕರಾಳ ಪರಿಣಾಮ, ಸಮಾಜದ ಸ್ಪಂಧನ, ಆಶ್ರಿತ ವರ್ಗದ ಉತ್ತರವಿಲ್ಲದ ಬವಣೆಗಳು ವಿಸ್ತರಿಸಲ್ಪಡುವ ನಾಟಕ ಪರಸ್ಪರ ಎಲ್ಲರೂ ಕೈಜೋಡಿಸಿ ಆಂತರಂಗಿಕ ಒಗ್ಗಟ್ಟಿನಿಂದ ಮುನ್ನಡೆಯಬೇಕಾದ ಸಂದೇಶದೊಂದಿಗೆ ಕೊನೆಗೊಳ್ಳುತ್ತದೆ. ಇಂದಿನ ಬಹುತೇಕ ಸಾರ್ವಜನಿಕ ಸವಾಲುಗಳಿಗೆ ಜನರು ಪರಸ್ಪರ ತಿಳಿಯಲು ಪ್ರಯತ್ನಿಸದಿರುವುದು, ತನ್ನ ಹೊರತಾದ ಸಮಷ್ಠಿ ಪ್ರಜ್ಞೆ ಮರೆತಿರುವುದು ಈ ಬೀದಿ ನಾಟಕದ ಮೂಲಕ ನಮ್ಮನ್ನು ಎಚ್ಚರಿಸುವಲ್ಲಿ ಯಶಸ್ವಿಯಾಗಿದೆ.




Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries