1 ರಿಂದ 10 ನೇ ತರಗತಿ ತನಕ ಮಲಯಾಳ ಕಲಿಕೆ ಕಡ್ಡಾಯ
ಕಾಸರಗೋಡು: ಕೇರಳ ರಾಜ್ಯದ ಎಲ್ಲಾ ಶಾಲೆಗಳಲ್ಲೂ 1ರಿಂದ 10 ನೇ ತರಗತಿಯ ವರೆಗೆ ಮಲಯಾಳ ಭಾಷೆ ಕಡ್ಡಾಯವಾಗಿ ಕಲಿಯಬೇಕೆಂಬ ಕಾನೂನಿನ ನಿಬಂಧನೆಗಳಿಗೆ ರಾಜ್ಯ ಸರಕಾರ ರೂಪು ನೀಡಿದೆ.
ಶಾಲೆಗಳಲ್ಲಿ ಕಡ್ಡಾಯವಾಗಿ ಮಲಯಾಳ ಕಲಿಯಬೇಕೆಂಬ ಕಾನೂನಿಗೆ 2017 ಜೂನ್ 1 ರಂದು ರಾಜ್ಯ ಪಾಲರು ಅಂಗೀಕಾರ ನೀಡಿ ಅದು ಜಾರಿಗೆ ಬಂದರೂ ಅದಕ್ಕೆ ಅಗತ್ಯದ ನಿಬಂಧನೆ ರೂಪು ನೀಡದಿರುವ ಹಿನ್ನೆಲೆಯಲ್ಲಿ ಅದನ್ನು ಕಳೆದ ಶೈಕ್ಷಣಿಕ ವರ್ಷದಲ್ಲಿ ವಿದ್ಯುಕ್ತವಾಗಿ ಜಾರಿಗೊಳಿಸಲು ಸಾಧ್ಯವಾಗಿರಲಿಲ್ಲ. ಅದರಿಂದಾಗಿ ಅಗತ್ಯದ ನಿಬಂಧನೆಗಳಿಗೆ ಸರಕಾರ ಈಗ ರೂಪು ನೀಡಿ ಅದಕ್ಕೆ ಅಂಗೀಕಾರ ನೀಡಿದೆ. ಈ ಹಿನ್ನೆಲೆಯಲ್ಲಿ ಕಡ್ಡಾಯ ಮಲಯಾಳ ಕಲಿಕೆ ಈ ಶೈಕ್ಷಣಿಕ ವರ್ಷದಲ್ಲೇ ಜಾರಿಗೆ ತರಲು ತೀಮರ್ಾನಿಸಲಾಗಿದೆ. ಈ ಕಾನೂನಿಗೆ ವಿಧಾನಸಭೆಯ ವಿಷಯ ಸಮಿತಿಯೂ ಅಂಗೀಕಾರ ನೀಡಿದೆ. ಈ ಹಿನ್ನೆಲೆಯಲ್ಲಿ ಭಾಷಾ ಅಲ್ಪಸಂಖ್ಯಾಕ ಶಾಲೆಗಳು, ಸಿಬಿಎಸ್ಇ, ಐಸಿಎಸ್ಇ ಇತ್ಯಾದಿ ಕೇಂದ್ರ ಪಠ್ಯ ಪದ್ಧತಿ ಹೊಂದಿರುವ ಶಾಲೆಗಳು ಮತ್ತು ಓರಿಯಂಟಲ್ ಶಾಲೆಗಳಲ್ಲೂ 1 ನೇ ತರಗತಿಯಿಂದ ಹತ್ತನೇ ತರಗತಿ ತನಕ ಮಲಯಾಳ ಒಂದು ಐಚ್ಛಿಕ ವಿಷಯವನ್ನಾಗಿ ಕಲಿಯಬೇಕಾಗಿದೆ.
ಶಾಲೆಗಳಲ್ಲಿ ಮಲಯಾಳ ಕಲಿಸಲಾಗುತ್ತಿದೆಯೇ ಎಂಬುದರ ಬಗ್ಗೆ ಪ್ರತೀ ವರ್ಷ ಪರಿಶೀಲನೆ ನಡೆಸಲಾಗುವುದು. ಅದಕ್ಕಾಗಿ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಸರಕಾರಿ ಏಯ್ಡೆಡ್ ಶಾಲೆಗಳ ಮಲಯಾಳ ಅಧ್ಯಾಪಕರು, ಪ್ರತಿನಿಧಿಗಳು ಒಳಗೊಂಡ ಪರಿಶೀಲನಾ ಸಮಿತಿಗೂ ರೂಪು ನೀಡಲಾಗಿದೆ. ಶಿಕ್ಷಣ ಉಪನಿದರ್ೇಶಕರು ಅದನ್ನು ಮರುಪರಿಶೀಲಿಸುವರು. ಎಸ್ಸಿಇ ಆರ್ಟಿ ತಯಾರಿಸುವ ಪಠ್ಯ ಪುಸ್ತಕಗಳನ್ನೇ ಕಲಿಸಬೇಕು. ಬಳಿಕ ಅದರ ಮೌಲ್ಯ ನಿರ್ಣಯ ನಡೆಸಲು ಪರೀಕ್ಷೆ ನಡೆಸಲಾಗುವುದು.
ಕಾಸರಗೋಡು ಸೇರಿದಂತೆ ರಾಜ್ಯದ ಭಾಷಾ ಅಲ್ಪಸಂಖ್ಯಾತ ಶಾಲೆಗಳು ಮತ್ತು ಓರಿಯಂಟಲ್ ಶಾಲೆಗಳಿಗೆ ಈಗ ಜಾರಿಯಲ್ಲಿರುವ ಪಠ್ಯ ಪದ್ಧತಿ ಪ್ರಕಾರ ಮಲಯಾಳ ಭಾಷೆ ಕಲಿಕೆ ಕಡ್ಡಾಯವಲ್ಲ. ಅಂತಹ ಶಾಲೆಗಳಿಗೆ ಇನ್ನೂ ಎಸ್ಸಿಇಆರ್ಟಿಯ ಪ್ರತ್ಯೇಕ ಪುಸ್ತಕ ನೀಡಲಾಗುವುದಲ್ಲದೆ ಮಲಯಾಳ ಪರೀಕ್ಷೆಯನ್ನು ನಡೆಸಲಾಗುವುದು. ಇತರ ರಾಜ್ಯಗಳಿಂದ ಮತ್ತು ವಿದೇಶಗಳಿಂದ ಬಂದು ಕೇರಳದಲ್ಲಿ ನೆಲೆಸಿ ಕಲಿಯುತ್ತಿರುವ ವಿದ್ಯಾಥರ್ಿಗಳಿಗೂ ಕೆಲವೊಂದು ರಿಯಾಯಿತಿ ಮೂಲಕ ಮಲಯಾಳ ಕಲಿಕೆ ಕಡ್ಡಾಯಗೊಳಿಸಲಾಗಿದೆ. ಅವರಿಗಾಗಿ ವಿಶೇಷ ಪುಸ್ತಕ ತಯಾರಿಸಲಾಗುವುದು. ಆದರೆ ಅವರಿಗೆ ಮಲಯಾಳ ಪರೀಕ್ಷೆ ಕಡ್ಡಾಯಗೊಳಿಸಿಲ್ಲ.
ಮಲಯಾಳ ಕಲಿಸದಿದ್ದಲ್ಲಿ ದಂಡ : ಶಾಲೆಗಳಲ್ಲಿ ಮಲಯಾಳ ಕಲಿಸಲು ಅಗತ್ಯದ ಸೌಕರ್ಯವೊದಗಿಸದ ಶಾಲೆಗಳ ಮುಖ್ಯೋಪಾಧ್ಯಾಯರಿಗೆ 5000 ರೂ. ದಂಡ ವಿಧಿಸಲಾಗುವುದು. ಈ ಮೊತ್ತವನ್ನು ಅವರ ವೇತನದಿಂದಲೇ ವಸೂಲಿ ಮಾಡಲಾಗುವುದು. ಅದಲ್ಲದಿದ್ದಲ್ಲಿ ಭೂತೆರಿಗೆ ರೀತಿಯಲ್ಲಿ ವಸೂಲು ಮಾಡುವ ನಿಬಂಧನೆಯನ್ನು ಹೇರಲಾಗಿದೆ. ಅನ್ ಏಯ್ಡೆಡ್ ಶಾಲೆಗಳಿಗೆ ಮಲಯಾಳ ಕಲಿಸದಿದ್ದಲ್ಲಿ ಅವುಗಳ ಅಂಗೀಕಾರ ರದ್ದುಪಡಿಸಲಾಗುವುದು. ಅದೇ ರೀತಿ ಸಿಬಿಎಸ್ಇ ಮತ್ತು ಐಸಿಎಸ್ಇ ಶಾಲೆಗಳಲ್ಲಿ ಮಲಯಾಳ ಕಲಿಸದಿದ್ದಲ್ಲಿ ಅಂತಹ ಶಾಲೆಗಳಿಗೆ ರಾಜ್ಯ ಸರಕಾರ ನೀಡಿರುವ ಎನ್ಒಸಿ ಸಟರ್ಿಫಿಕೇಟನ್ನು ರದ್ದುಪಡಿಸಲಾಗುವುದೆಂಬ ನಿಬಂಧನೆಯನ್ನು ಹೇರಲಾಗಿದೆ.
ಭಾಷಾ ಹೇರಿಕೆ ಸಂವಿಧಾನದ ಉಲ್ಲಂಘನೆ : ಬಿಜೆಪಿ
ರಾಜ್ಯದಲ್ಲಿ ಮಲಯಾಳ ಭಾಷೆ ಕಲಿಕೆ ಕಡ್ಡಾಯಗೊಳಿಸಿದ ಬಗ್ಗೆ ವಿರೋಧವಿಲ್ಲ. ಆದರೆ ಕೇರಳದಲ್ಲಿರುವ ಭಾಷಾ ಅಲ್ಪಸಂಖ್ಯಾತರಿಗೂ ಮಲಯಾಳ ಭಾಷಾ ಕಲಿಕೆ ಕಡ್ಡಾಯಗೊಳಿಸಿರುವುದು ಸಂವಿಧಾನದ ಉಲ್ಲಂಘನೆಯಾಗಿದೆ ಎಂದು ಬಿಜೆಪಿ ಕಾಸರಗೋಡು ಜಿಲ್ಲಾ ಅಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್ ಹೇಳಿದ್ದಾರೆ.
ಸಂವಿಧಾನಬದ್ಧವಾಗಿ ಕಾಸರಗೋಡಿನ ಭಾಷಾ ಅಲ್ಪಸಂಖ್ಯಾತರಿಗೆ ನೀಡಲಾದ ಸವಲತ್ತುಗಳನ್ನು ಕಸಿದುಕೊಳ್ಳುವ ರೀತಿಯಲ್ಲಿ ಮಲಯಾಳ ಕಲಿಕೆ ಕಡ್ಡಾಯಗೊಳಿಸಲಾಗಿದೆ. ಭಾಷಾ ಅಲ್ಪಸಂಖ್ಯಾಕರಿಗೆ ಮಲಯಾಳ ಭಾಷಾ ಕಲಿಕೆ ಕಡ್ಡಾಯಗೊಳಿಸಿರುವುದು ಭಾರತೀಯ ಸಂವಿಧಾನಕ್ಕೆ ಎಸಗಿದ ಅಪಚಾರವಾಗಿದೆ. `ಾಷಾ ಅಲ್ಪಸಂಖ್ಯಾಕರಿಗೆ ಮಲಯಾಳ ಕಡ್ಡಾಯಗೊಳಿಸುವ ತೀಮರ್ಾನದಿಂದ ಸರಕಾರ ಹಿಂದೆ ಸರಿಯಬೇಕು. ಇಲ್ಲದಿದ್ದಲ್ಲಿ ಈ ಕಾಯ್ದೆಯ ವಿರುದ್ಧ ತೀವ್ರ ಹೋರಾಟ ನಡೆಸುವುದಾಗಿ ಅವರು ಮುನ್ನೆಚ್ಚರಿಕೆ ನೀಡಿದ್ದಾರೆ.
ಕಡ್ಡಾಯ ಮಲಯಾಳ ಕಲಿಕೆ :ಕಸಾಪ ಖಂಡನೆ
ಭಾಷಾ ಅಲ್ಪಸಂಖ್ಯಾತರಿಗೆ ಸಂವಿಧಾನಬದ್ಧವಾಗಿ ನೀಡಲಾದ ಸವಲತ್ತುಗಳ ವಿರುದ್ಧವಾಗಿ ಕೇರಳ ಸರಕಾರ ಮಲಯಾಳ ಭಾಷಾ ಕಲಿಕೆ ಕಡ್ಡಾಯಗೊಳಿಸಿರುವುದು ಖಂಡನಾರ್ಹ ಎಂದು ಕನ್ನಡ ಸಾಹಿತ್ಯ ಪರಿಷತ್ ಕೇರಳ ರಾಜ್ಯ ಘಟಕ ಅಧ್ಯಕ್ಷ ಎಸ್.ವಿ.ಭಟ್ ಹೇಳಿದ್ದಾರೆ. ಮಲಯಾಳ ಕಡ್ಡಾಯಗೊಳಿಸುವ ತೀಮರ್ಾನದಿಂದ ಸರಕಾರ ಹಿಂದೆ ಸರಿಯಬೇಕೆಂದು ಅವರು ಆಗ್ರಹಿಸಿದ್ದಾರೆ. ಭಾಷಾ ಅಲ್ಪಸಂಖ್ಯಾತರ ಮೇಲೆ ಮಲಯಾಳ ಹೇರಿಕೆಯ ವಿರುದ್ಧ ಹೋರಾಟ ನಡೆಸುವುದಾಗಿ ಅವರು ತಿಳಿಸಿದ್ದಾರೆ.