HEALTH TIPS

No title

                   ಮೇ 11ರಿಂದ ಮಂಜೇಶ್ವರ ತಾಲೂಕಿನಲ್ಲಿ 
                ಇ-ಪೋಸ್ ಯಂತ್ರ ಮೂಲಕ ಪಡಿತರ ವಿತರಣೆ
  ಮಂಜೇಶ್ವರ:  ಮಂಜೇಶ್ವರ ತಾಲೂಕಿನ ಎಲ್ಲಾ  ಪಡಿತರ ಅಂಗಡಿಗಳಲ್ಲಿ  ಮೇ 11ರಂದು ಇ-ಪೋಸ್ ಮೆಶಿನ್ ಮೂಲಕ ರೇಶನ್ ಸಾಮಗ್ರಿ ವಿತರಣೆಯನ್ನು  ಆರಂಭಿಸಲಾಗುವುದು ಎಂದು ತಾಲೂಕು ಸಪ್ಲೈ ಆಫೀಸರ್ ತಿಳಿಸಿದ್ದಾರೆ.
   ಪಡಿತರ ವಿತರಣೆಯನ್ನು  ಇ-ಪೋಸ್ ಯಂತ್ರಗಳ ಮೂಲಕ ಮಾಡಿದರೆ ಪ್ರತಿ ಪಡಿತರ ಕಾಡರ್್ನ ಯಾವುದಾದರೂ ಓರ್ವ ಸದಸ್ಯನ ಬೆರಳಚ್ಚು  ದಾಖಲಿಸಿದರೆ ಮಾತ್ರವೇ ರೇಶನ್ ಸಾಮಗ್ರಿಗಳು ಲಭಿಸುವುದು. ಕಾಡರ್್ನಲ್ಲಿ  ಒಳಗೊಂಡ ಯಾವುದಾದರೂ ಓರ್ವ ಸದಸ್ಯನೇ ಅಂಗಡಿಗೆ ಪಡಿತರ ಖರೀದಿಸಲು ಆಗಮಿಸಬೇಕು.
   ಪಡಿತರ ಖರೀದಿಸದವರ ಪಾಲನ್ನು  ಇನ್ನಾವುದೇ ರೀತಿಯಲ್ಲಿ  ಬದಲಿಸಲು ಸಾಧ್ಯವಿಲ್ಲ. ಇದೇ ವೇಳೆ ಪರರ ಆಶ್ರಯದಲ್ಲಿರುವವರು, ಶಯ್ಯಾವಲಂಬಿಗಳು ಆಗಿದ್ದವರು ಮಾತ್ರ ಒಳಗೊಂಡ ಪಡಿತರ ಕಾಡರ್್ಗಳಲ್ಲಿ  ತಾಲೂಕು ಸಪ್ಲೈ ಆಫೀಸರ್ರ ಅನುಮತಿಯೊಂದಿಗೆ ಇನ್ನೊಂದು ಪಡಿತರ ಕಾಡರ್್ನ ಸದಸ್ಯನನ್ನು  ಆಯ್ಕೆ ಮಾಡಿ ಪಡಿತರ ಖರೀದಿಸಬಹುದು.
  ಪಡಿತರ ಅಂಗಡಿ ತೆರೆಯುವುದು, ಸಂಗ್ರಹ, ವಿತರಣೆ ಮೊದಲಾದವುಗಳನ್ನು  ಆನ್ಲೈನ್ ಮೂಲಕ ತಿಳಿಯಬಹುದಾದುದರಿಂದ ಪಡಿತರ ಅಂಗಡಿಗಳ ಚಟುವಟಿಕೆ, ಅಂಗಡಿಗಳಲ್ಲಿ  ಸಾಮಗ್ರಿಗಳ ಸಂಗ್ರಹ ಇದೆಯೋ ಎಂಬ ಬಗ್ಗೆ  ಮನೆಯಿಂದಲೇ ತಿಳಿದುಕೊಳ್ಳುವ ವ್ಯವಸ್ಥೆ  ಜಾರಿಗೊಳಿಸಲಾಗುತ್ತಿದೆ.
   ಕಾಡರ್್ ಸಹಿತ ಪಡಿತರ ಅಂಗಡಿಗೆ ತಲುಪಿ ಕಾಡರ್್ನ ನಂಬ್ರವನ್ನು  ಮೆಶಿನ್ನಲ್ಲಿ  ದಾಖಲಿಸಬೇಕು. ಆವಾಗಲೇ ಕಾಡರ್್ನ ಸದಸ್ಯರ ಸಂಖ್ಯೆ ಸ್ಕ್ರೀನ್ನಲ್ಲಿ  ಮೂಡುತ್ತದೆ. ಅದರಲ್ಲಿ  ಬಂದಿರುವ ವ್ಯಕ್ತಿಯ ಬೆರಳಚ್ಚು  ಸ್ಕ್ಯಾನ್ ಮಾಡಬೇಕು. ಅದನ್ನು  ಮೆಶಿನ್ ಅಂಗೀಕರಿಸಿದರೆ ಅರ್ಹವಾದ ಪಡಿತರ ಸಾಮಗ್ರಿಗಳ ಮಾಹಿತಿಯೂ ಸ್ಕ್ರೀನ್ನಲ್ಲಿ  ಮೂಡಿಬರಲಿದೆ. ಬಳಿಕ ಅಗತ್ಯದ ಸಾಮಗ್ರಿಗಳ ಅಳತೆಯನ್ನು  ಗ್ರಾಹಕ ಮೆಶಿನ್ನಲ್ಲಿ  ದಾಖಲಿಸಿದರೆ ಬಿಲ್ ಪ್ರಕಾರವಿರುವ ಪಡಿತರ ಸಾಮಗ್ರಿಗಳು ದೊರಕುತ್ತವೆ. ಬಿಲ್ನ್ನು  ಕಾಡರ್್ನ ವಾರೀಸುದಾರ ಕೇಳಿ ಪಡೆಯಬೇಕು.
   ಈ ರೀತಿಯಲ್ಲಿ  ಸಾಮಗ್ರಿಗಳನ್ನು  ಪಡೆದ ಕೂಡಲೇ ಗ್ರಾಹಕನ ಮೊಬೈಲ್ ಫೋನ್ಗೆ ಸಂದೇಶ ತಲುಪಲಿದೆ. ಇದರಿಂದ ತನ್ನ  ಪಡಿತರ ಕಾಡರ್್ನ ಸಾಮಗ್ರಿಗಳನ್ನು  ಇತರರು ಯಾರಾದರೂ ಪಡೆದಿದ್ದಾರೋ ಎಂದು ತಿಳಿಯಲು ಸಾಧ್ಯವಾಗುತ್ತದೆ. ಆಧಾರ್ ನಂಬ್ರ ಪ್ರಕಾರ ವಿತರಿಸಲು ಸಾಧ್ಯವಾಗದಿದ್ದರೆ ಗ್ರಾಹಕನ ಫೋನ್ಗೆ ಓಟಿಪಿ ನಂಬ್ರ ಲಭಿಸುವುದು. ಅದನ್ನು  ಮೆಶಿನ್ನಲ್ಲಿ  ದಾಖಲಿಸಿದರೆ ಪಡಿತರ ಪಡೆಯಬಹುದು. ಇವೆರಡೂ ವಿಫಲಗೊಂಡರೆ ಇನ್ನೊಂದು ರೀತಿಯಲ್ಲಿ ಪಡಿತರ ಪಡೆಯಬಹುದಾದ ವ್ಯವಸ್ಥೆಯನ್ನು  ಮೆಶಿನ್ನಲ್ಲಿ  ಅಳವಡಿಸಲಾಗಿದೆ.   
   ಅವ್ಯವಸ್ಥೆಯ ನಿಯಂತ್ರಣ:
   ಇ-ಪೋಸ್ ಯಂತ್ರ ಅಳವಡಿಕೆಯಾಗುವುದರೊಂದಿಗೆ ಪಡಿತರ ಮಾರಾಟದಲ್ಲಿ ವಂಚನೆ ನಡೆಯುತ್ತಿದೆ ಎಂಬ ದಶಕಗಳ ಹಿಂದಿನಿಂದಲೂ ಕೇಳಿಬರುತ್ತಿರುವ ಆಕ್ರೋಶಕ್ಕೆ ಉತ್ತರ ದೊರಕಲಿದೆ. ಕುಟುಂಬಗಳಿಗೆ ಸರಕಾರ ಪ್ರತಿ ತಿಂಗಳು ನಿಗದಿಪಡಿಸುವ ಗರಿಷ್ಠ ಮಟ್ಟದ ಸಾಮಗ್ರಿಗಳು ಇನ್ನು ಈ ಮೂಲಕ ಲಭಿಸಲೇಬೇಕು. ಅದಕ್ಕೆ ಹೊರತಾದ ವ್ಯವಹಾರಗಳು ಇನ್ನು ನಿಯಂತ್ರಣಕ್ಕೆ ಬರುವ ನಿರೀಕ್ಷೆ ಇರಿಸಲಾಗಿದೆ. ಜೊತೆಗೆ ಇತರರ ಪಡಿತರ ಕಾಡರ್್ಗಳನ್ನು ಬಳಸಿ ವಸ್ತುಗಳನ್ನು ಖರೀಧಿಸಲು ಸಾಧ್ಯವಾಗದು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries