HEALTH TIPS

No title

              ಉಳಿಯತ್ತಡ್ಕ ಗುರುಕೃಪಾ ವೈದಿಕ ಶಿಕ್ಷಣ ಶಿಬಿರ ಸಂಪನ್ನ
    ಮಧೂರು: ಉಳಿಯತ್ತಡ್ಕ ಗುರುಕೃಪಾ ವೈದಿಕ ಶಿಕ್ಷಣ ಸಮಿತಿಯ ನೇತೃತ್ವದಲ್ಲಿ ಜರಗಿದ 18ನೇ ವರ್ಷದ ವೈದಿಕ ಶಿಕ್ಷಣ ಶಿಬಿರ ಹತ್ತು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಿ ಬುಧವಾರ ಸಂಪನ್ನಗೊಂಡಿತು.
  ಬ್ರಹ್ಮಶ್ರೀ ಪುರೋಹಿತ ರತ್ನ ಬಿ.ಕೇಶವ ಆಚಾರ್ಯ ದೀಪ ಬೆಳಗಿಸುವ ಮೂಲಕ ಶಿಬಿರದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ ಸಮಾಜದ ಮಕ್ಕಳಲ್ಲಿ ಸಂಸ್ಕಾರವನ್ನು ಜಾಗೃತಗೊಳಿಸುವ ಉದ್ದೇಶದಿಂದ ಶಿಬಿರ ಹಮ್ಮಿಕೊಳ್ಳಲಾಗುತ್ತಿದ್ದು ಮುಂದೆ ಶಿಬಿರಾಥರ್ಿಗಳನ್ನು ಅವಲೋಕಿಸುವ ಯೋಜನೆ ಅಲ್ಲದೆ ಮಾತೆಯರಿಗೆ ಹಾಗೂ ಹೆಣ್ಮಕ್ಕಳಿಗೆ ನಮ್ಮ ಸಂಸ್ಕೃತಿಯನ್ನು ಬೋಧಿಸುವ ಶಿಬಿರಗಳನ್ನು ಆಯೋಜಿಸಲಾಗುವುದು ಎಂದರು.
  ನಿವೃತ್ತ ಮುಖ್ಯೋಪಾಧ್ಯಾಯ ಎಂ.ವೆಂಕಟ್ರಮಣ ಆಚಾರ್ಯ ಮುಳಿಗದ್ದೆ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಸಹಾಯಕ ಜಿಲ್ಲಾಧಿಕಾರಿ ಬಿ.ಬಾಲಕೃಷ್ಣ ಅಗ್ಗಿತ್ತಾಯ,ಧಾಮರ್ಿಕ ಮುಂದಾಳು ತಾರನಾಥ ಮಧೂರು,ಗುರುಕೃಪಾ ಭಜನಾ ಸಮಿತಿಯ ಅಧ್ಯಕ್ಷ ಗುರುಪ್ರಸಾದ್ ಶರ್ಮ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಅಮನ್ ಆಚಾರ್ಯ ಉಡುಪಿ ಶಿಬಿರಾಥರ್ಿಗಳ ಪರವಾಗಿ ಅನಿಸಿಕೆಗಳನ್ನು ಹಂಚಿಕೊಂಡರು. ಈ ಬಾರಿ ಎಸ್ಸಸೆಲ್ಸಿ ಪರೀಕ್ಷೆಯಲ್ಲಿ ಎಲ್ಲಾ ವಿಷಯಗಳಲ್ಲೂ ಎ ಪ್ಲಸ್ ಅಂಕಗಳಿಸಿದ ಲತೇಶ್ ಆಚಾರ್ಯನನ್ನು ಅಭಿನಂದಿಸಲಾಯಿತು. ರವೀಂದ್ರ ಆಚಾರ್ಯ ಮುಳ್ಳೇರಿಯಾ ಸ್ವಾಗತಿಸಿ, ಹರಿಪ್ರಸಾದ್ ಶರ್ಮ ವಂದಿಸಿದರು. ಜಯ ಮಣಿಯಂಪಾರೆ ಕಾರ್ಯಕ್ರಮ ನಿರೂಪಿಸಿದರು.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries