HEALTH TIPS

No title

                   ಸಾಧಕರಿಗೆ ಅಭಿನಂದನೆ
    ಪೆರ್ಲ: 2017-18 ಸಾಲಿನ ಕನರ್ಾಟಕ ಹಾಗೂ ಕೇರಳ ಎಸ್ ಎಸ್ ಎಲ್ ಸಿ ವಿಭಾಗದಲ್ಲಿ ಶಾಲಾ ಮಟ್ಟದಲ್ಲಿ ಅತ್ಯಧಿಕ ಅಂಕಗಳಿಸಿದ  ಸ್ಥಳೀಯರಿಗೆ ಸ್ವರ್ಗದ ಸುದರ್ಶನ ಗ್ರಾಮೀಣ ಅಭಿವೃದ್ಧಿ  ಕ್ರಿಯಾ ಸಮಿತಿ ವತಿಯಿಂದ  ಅಭಿನಂದಿಸಲಾಯಿತು.
  ಶನಿವಾರ ಸ್ವರ್ಗ ಸ್ವಾಮಿ ವಿವೇಕಾನಂದ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಸಮಾರಂಭದ ಅಧ್ಯಕ್ಷತೆ ವಹಿಸಿದ ಎಣ್ಮಕಜೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೂಪವಾಣಿ ಆರ್ ಭಟ್ ಅವರು ಅಭಿನಂದನಾ ಕಾರ್ಯಕ್ರಮ ಆಯೋಜಿಸಿದ ಸುದರ್ಶನ ಬಳಗದ ಸಾಮಾಜಿಕ ಕಳಕಳಿ ಶ್ಲಾಘನೀಯ ಎಮದು ತಿಳಿಸಿ ವಿದ್ಯಾಥರ್ಿಗಳನ್ನು ಅಭಿನಂದಿಸಿ ಉಜ್ವಲ ಭವಿಷ್ಯಕ್ಕೆ ಶುಭ ಹಾರೈಸಿದರು.
    ಪ್ರಿಯದಶರ್ಿನಿ ಆಂಗ್ಲ ಮಾಧ್ಯಮ ಶಾಲೆ ಬೆಟ್ಟಂಪಾಡಿ ವಿದ್ಯಾಥರ್ಿನಿ  ಸುರಕ್ಷ ಕೆದಂಬಾಯಿಮೂಲೆ (96ಶೇ), ಸುಬೋಧ ಪ್ರೌಢಶಾಲೆ ವಿದ್ಯಾಥರ್ಿನಿ  ವರೇಣ್ಯಾ ಬಿ. ಚಾಕಟಕುಮೇರಿ(93.12ಶೇ), ಪಡ್ರೆ ಸರಕಾರೀ ಹೈಯರ್ ಸೆಕೆಂಡರಿ ಶಾಲೆ  ವಾಣೀನಗರದ ವಿದ್ಯಾಥರ್ಿ ಜೀವನ್ ಕುಮಾರ್ ಇಳಂತೋಡಿ(87ಶೇ), ಪ್ಲಸ್ ಟು ವಿಭಾಗದಲ್ಲಿ ಸರಕಾರಿ ಹೈಯರ್ ಸೆಕೆಂಡರಿ ಕಾಲೇಜು ಪಡ್ರೆ ವಾಣೀನಗರದ ವಿದ್ಯಾಥರ್ಿ ಹಾಗೂ ಸುದರ್ಶನ ಏತಡ್ಕ ವಿಭಾಗದ ಸಂಚಾಲಕನೂ ಆದ ಪ್ರದೀಪ್ ಶಾಂತಿಯಡಿ (86ಶೇ) ಇವರಿಗೆ ಸಮಾರಂಭದ ಅತಿಥಿಯಾಗಿ ಆಗಮಿಸಿದ ಬ್ಲಾಕ್  ಪಂಚಾಯಿತಿ ಸದಸ್ಯೆ ಸವಿತಾ ಬಾಳಿಕೆ ಸುದರ್ಶನದ ಸ್ಮರಣಿಕೆ ಹಾಗೂ ಪಾರಿತೋಷಕ ವಿತರಿಸಿ ಶುಭಹಾರೈಸಿದರು.
  ಜಲ,ಪರಿಸರ ತಜ್ಞ ಶ್ರೀಪಡ್ರೆ, ಸ್ವರ್ಗ ಶಾಲಾ ನಿವೃತ್ತ ಮುಖ್ಯೋಪಾಧ್ಯಾಯ ಸುಬ್ರಹ್ಮಣ್ಯ ಭಟ್ ಕೆ.ವೈ., ಗ್ರಾ.ಪಂ. ಸದಸ್ಯೆ ಶಶಿಕಲಾ ವೈ, ಸುದರ್ಶನ ಸದಸ್ಯರಾದ ಶ್ಯಾಮಲಾ ಆರ್ ಭಟ್ ಪತ್ತಡ್ಕ,ಸ್ವರ್ಗ ಶಾಲಾ ಮುಖ್ಯೋಪಾಧ್ಯಾಯಿನಿ ಗೀತಾ ಕುಮಾರಿ ಬಿ., ನಳಿನಿ ಸೈಪಂಗಲ್ಲು,ಗೀತಾ ಶಾರದ ವಿದ್ಯಾಥರ್ಿಗಳ ಪೋಷಕರು ಮತ್ತಿತರರು ಉಪಸ್ಥಿತರಿದ್ದರು.
 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries