HEALTH TIPS

No title

                  ಸಾಂಕ್ರಾಮಿಕ ರೋಗಗಳ ವಿರುದ್ಧ ಜಾಗೃತಿ ಶಿಬಿರ
    ಮುಳ್ಳೇರಿಯ: ಕಾರಡ್ಕ ಗ್ರಾಮ ಪಂಚಾಯಿತಿ, ಆರೋಗ್ಯ ಇಲಾಖೆ, ಸಾಕ್ಷರತಾ ಮಿಶನ್, ಶುಚಿತ್ವ ಮಿಶನ್, ಖಿಲಾ ತ್ರಿಶ್ಶೂರ್ ಸಹಯೋಗದೊಂದಿಗೆ ಹರಿತ ಕೇರಳ ಮಿಶನ್ ಅಂಗವಾಗಿ ಸಾಂಕ್ರಾಮಿಕ ರೋಗಗಳ ವಿರುದ್ಧ ಪ್ರತಿಧ್ವನಿ ಪ್ರತಿದಿನ ಜಾಗೃತೋತ್ಸವ-2018 ಎರಡು ದಿನಗಳ ಪಂಚಾಯಿತಿ ಮಟ್ಟದ ತರಬೇತಿ ಶಿಬಿರ ಮುಳ್ಳೇರಿಯ ಗಣೇಶ ಕಲಾ ಮಂದಿರದಲ್ಲಿ ಸೋಮವಾರ ನಡೆಯಿತು.
   ಶಿಬಿರವನ್ನು ಕಾರಡ್ಕ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಗೋಪಾಲಕೃಷ್ಣ ಉದ್ಘಾಟಿಸಿದರು. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಜನನಿ ಅಧ್ಯಕ್ಷತೆ ವಹಿಸಿದ್ದರು. ಬ್ಲಾಕ್ ಜಿಒ ಮಜೀಬ್, ಗ್ರಾಮ ವಿಸ್ತರಣಾಧಿಕಾರಿ ಅರುಣ್, ಜೂನಿಯರ್ ಹೆಲ್ತ್ ಇನ್ಸ್ಫೆಕ್ಟರ್ ಸುರೇಶ್ ಕುಮಾರ್, ಆರ್ಪಿ ಕೃಷ್ಣವೇಣಿ ತರಗತಿ ನಡೆಸಿಕೊಟ್ಟರು. ಸಾಕ್ಷರತಾ ಮಿಶನ್ನ ಶಾಂತಿ, ಮಾಲತಿ, ತಂಗಮಣಿ ಮೊದಲಾದವರು ಉಪಸ್ಥಿತರಿದ್ದರು.
 ಸಿಡಿಎಸ್ ಅಧ್ಯಕ್ಷೆ ಗೀತಾ ದಾಮೋದರನ್ ಸ್ವಾಗತಿಸಿ, ಮೆಂಬರ್ ಸೆಕ್ರೆಟರಿ ಬೇಬಿ.ಎಂ ವಂದಿಸಿದರು. 60 ಮಂದಿ ಬಾಲಸಭಾ ಮಕ್ಕಳು ಮತ್ತು ಕುಟುಂಬಶ್ರೀ ಸದಸ್ಯರು ಒಳಗೊಂಡ ವಾಡರ್ುಮಟ್ಟದ ಸಾಂಕ್ರಾಮಿಕ ರೋಗಗಳ ವಿರುದ್ಧ ಜಾಗೃತಿ ತರಬೇತಿ ಮೇ 20ರ ಮುಂಚಿತವಾಗಿ ನಡೆಯಲಿದೆ.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries