HEALTH TIPS

No title

                ಇನ್ನು ಪ್ರತಿಭಟನಾ ಸಪ್ತಾಹ ಶತಃಸಿದ್ದ-ಸಭೆಯಲ್ಲಿ ತೀಮರ್ಾನ - ಕನ್ನಡ ಶಾಲೆಗಳಲ್ಲಿ ಮಲಯಾಳ ಭಾಷೆ ಕಲಿಕೆ ಕಡ್ಡಾಯ ಆದೇಶ ರದ್ದತಿಗೆ ಮತ್ತೊಮ್ಮೆ ಕಹಳ
    ಕಾಸರಗೋಡು: ವಾರದಲ್ಲಿ ಆರಂಭಗೊಳ್ಳಲಿರುವ ಹಾಲಿ ಅಧ್ಯಯನ ವರ್ಷದಿಂದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಲೆಯಾಳ ಭಾಷೆ ಕಲಿಕೆ ಕಡ್ಡಾಯಗೊಳಿಸುವ ಶಿಕ್ಷ ಣ ಇಲಾಖೆಯ ತೀಮರ್ಾನದ ವಿರುದ್ಧ ಕಾಸರಗೋಡಿನಲ್ಲಿ ಕನ್ನಡ ಹೋರಾಟ ಸಮಿತಿ ನೇತೃತ್ವದಲ್ಲಿ ಮೇ 23ರಿಂದ ಪ್ರತಿಭಟನಾ ಸಪ್ತಾಹ ನಡೆಸುವ ಬಗ್ಗೆ ಶುಕ್ರವಾರ ಬೀರಂತಬೈಲು ಕನ್ನಡ ಅಧ್ಯಾಪಕ ಭವನದಲ್ಲಿ ನಡೆದ ಸಭೆಯಲ್ಲಿ ತೀಮರ್ಾನ ಕೈಗೊಳ್ಳಲಾಯಿತು.
   ಕೇರಳ ಸರಕಾರ ಕಾಸರಗೋಡಿನಲ್ಲಿ ಕನ್ನಡಿಗರಿಗೆ ಮಲೆಯಾಳ ಭಾಷೆಯನ್ನು ಕಡ್ಡಾಯವಾಗಿ ಹೆಚ್ಚುವರಿಯಾಗಿ ಕಲಿಸುವಂತೆ ಹೊರಡಿಸಿದ ಆದೇಶವು ನ್ಯಾಯಬಾಹಿರವಾದದ್ದು, ಸಂವಿಧಾನ ವಿರೋಧಿ ತೀಮರ್ಾನವಾಗಿದೆ. ಇಂತಹ ಆಜ್ಞೆಯನ್ನು ಸರಕಾರ ಶೀಘ್ರ ಹಿಂತೆಗೆದುಕೊಳ್ಳಬೇಕು, ಈ ಮೂಲಕ ಕನ್ನಡಿಗರಿಗೆ ನ್ಯಾಯ ಒದಗಿಸಬೇಕು. ಈ ನಿಟ್ಟಿನಲ್ಲಿ ಸರಕಾರದ ಗಮನ ಸೆಳೆಯುವುದಕ್ಕಾಗಿ ಕಾಸರಗೋಡಿನ ಹೊಸ ಬಸ್ ನಿಲ್ದಾಣ ಪರಿಸರದಲ್ಲಿ ಮೇ 23ರಿಂದ 29ರ ತನಕ ಒಂದು ವಾರದ ಕಾಲ, ಪ್ರತಿಭಟನಾ ಸಪ್ತಾಹವನ್ನು ನಡೆಸಲು ತೀಮರ್ಾನಿಸಲಾಗಿದೆ. ಅಲ್ಲದೆ ಪ್ರತಿ ಪಂಚಾಯಿತಿ ವ್ಯಾಪ್ತಿಯಲ್ಲೂ ಜನಪ್ರತಿನಿಧಿಗಳ ಸಹಕಾರದೊಂದಿಗೆ ಪ್ರತಿಭಟನೆ ನಡೆಸಲಾಗುವುದು.
   ಕನ್ನಡ ಹೋರಾಟ ಸಮಿತಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕನರ್ಾಟಕ ಸಮಿತಿಯ ನ್ಯಾಯವಾದಿ ಕೆ.ಎಂ. ಬಳ್ಳಕ್ಕುರಾಯ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಗಡಿನಾಡ ಘಟಕ ಅಧ್ಯಕ್ಷ ಎಸ್.ವಿ. ಭಟ್, ಟಿ. ಶಂಕರನಾರಾಯಣ ಭಟ್, ವಿ.ಬಿ. ಕುಳಮರ್ವ, ಡಾ.ಬೇ.ಸಿ. ಗೋಪಾಲಕೃಷ್ಣ ಭಟ್, ಬಳ್ಳಮೂಲೆ ಗೋವಿಂದ ಭಟ್,  ತಾರಾನಾಥ ಮಧೂರು, ಶ್ಯಾಮಪ್ರಸಾದ ಕಲ್ಲಕಟ್ಟ, ಗೋಪಾಲಕೃಷ್ಣ ಭಟ್, ಸುಬ್ರಹ್ಮಣ್ಯ ಭಟ್, ಮಹಾಲಿಂಗೇಶ್ವರ ಭಟ್ ಎಂ.ವಿ., ಡಾ. ರತ್ನಾಕರ ಮಲ್ಲಮೂಲೆ, ಸತೀಶ ಮಾಸ್ತರ್, ಗುರುಪ್ರಸಾದ ಕೋಟೆಕಣಿ, ಪ್ರದೀಪ್ ಬೇಕಲ, ಪ್ರದೀಪ್, ಅಬ್ದುಲ್ರಹಿಮಾನ್, ಸೌಮ್ಯಪ್ರಸಾದ್, ಪ್ರಶಾಂತ್ ಹೊಳ್ಳ, ರಕ್ಷಿತ್, ಕೀರ್ತನ್ ಕುಮಾರ್, ವಿನೋದ್ ಕುಮಾರ್ ಸಿ.ಎಚ್., ಧನೇಶ್ ಕೋಟೆಕಣಿ, ಅಜಿತ್ ಶೆಟ್ಟಿ ಸಹಿತ ಸ್ನೇಹ ರಂಗ, ಗಿಳಿವಿಂಡು, ಸಿರಿಚಂದನ ಕನ್ನಡ ಯುವ ಬಳಗದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಆರಂಭದಲ್ಲಿ ಕೆ. ಭಾಸ್ಕರ ಸ್ವಾಗತಿಸಿ, ಟಿ. ಶಂಕರನಾರಾಯಣ ಭಟ್ ವಂದಿಸಿದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries