HEALTH TIPS

No title

                           ಇಂದಿನಿಂದ ಮುಳ್ಳೇರಿಯದಲ್ಲಿ ಸಂಗೀತ ಶಿಬಿರ
    ಮುಳ್ಳೇರಿಯ: ರಾಗಸುಧಾರಸ ಕಾಸರಗೋಡು ಇದರ ಪ್ರಾಯೋಜಕತ್ವದಲ್ಲಿ, ಮುಳ್ಳೇರಿಯ ವಿದ್ಯಾಶ್ರೀ ಶಿಕ್ಷಣ ಕೇಂದ್ರ ಇದರ ಸಹಯೋಗದೊಂದಿಗೆ ಮೇ29ರಿಂದ ಜೂನ್ 1ರ ತನಕ ಸಂಗೀತ ಶಿಬಿರ ಮುಳ್ಳೇರಿಯದ ಗಣೇಶ ಕಲಾ ಮಂದಿರದಲ್ಲಿ ನಡೆಯಲಿದೆ.
  ಖ್ಯಾತ ಸಂಗೀತ ವಿದ್ವಾಂಸರಾದ ಕಲೈಮಾಮಣಿ ವಿಠಲ ರಾಮಮೂತರ್ಿ ಚೆನ್ನೆ ಶಿಬಿರವನ್ನು ನಡೆಸಿಕೊಡಲಿದ್ದಾರೆ. ಮೇ 29ರಂದು ಬೆಳಿಗ್ಗೆ 9ಕ್ಕೆ ಹಿರಿಯ ಸಂಗೀತ ಶಿಕ್ಷಕಿ ವಸಂತಿ ಕುಂಜತ್ತಾಯ ಶಿಬಿರವನ್ನು ಉದ್ಘಾಟಿಸುವರು. ಜೂನ್ 1ರಂದು ಸಂಜೆ 5ರಿಂದ ಶಿಬಿರಾಥರ್ಿಗಳಿಂದ ಗಾಯನ ನಡೆಯಲಿದೆ. ಸಂಜೆ 5ಕ್ಕೆ ಕನರ್ಾಟಕ ಶಾಸ್ತ್ರೀಯ ಸಂಗೀತ ಕಚೇರಿ ನಡೆಯಲಿದೆ. ವಿದ್ವಾನ್ ಟಿ.ಎಂ.ಕೃಷ್ಣ ಚೆನ್ನೈ(ಹಾಡುಗಾರಿಕೆ), ವಿಠಲ ರಾಮಮೂತರ್ಿ ಚೆನ್ನೈ(ವಯಲಿನ್), ವಿದ್ವಾನ್ ಅರುಣಪ್ರಕಾಶ್(ಮೃದಂಗ) ಸಹಕರಿಸುವರು.
   ಸಮಾರೋಪ ಸಮಾರಂಭದಲ್ಲಿ ರಾಗಸುಧಾರಸ ಇದರ ಅಧ್ಯಕ್ಷ ಡಾ.ಶಂಕರ್ರಾಜ್ ಕಾಸರಗೋಡು ಅಧ್ಯಕ್ಷತೆ ವಹಿಸುವರು. ಮಧೂರು ಬಾಲಸುಬ್ರಹ್ಮಣ್ಯ ಸರಳಾಯ ಮುಖ್ಯ ಅತಿಥಿಗಳಾಗಿ ುಪಸ್ಥಿತರಿರುವರು. ಸಮಾರಂಭದಲ್ಲಿ ವಿಠಲ ರಾಮಮೂತರ್ಿ ಚೆನ್ನೈ ಮತ್ತು ಟಿ.ಎಂ.ಕೃಷ್ಣ ಚೆನ್ನೈ ಭಾಗವಹಿಸುವರು.
 ಇಲ್ಲಿ ನಾಲ್ಕು ವರ್ಷಗಳಿಂದ ಸಂಗೀತ ಶಿಬಿರ ಯಶಸ್ವಿಯಾಗಿ ನಡೆಯುತ್ತಿದೆ. ಶಿಬಿರದಲ್ಲಿ ಸಂಗೀತ ಹಾಡುಗಾರಿಕೆ(ವೋಕಲ್) ತರಬೇತಿ ನೀಡಲಾಗುವುದು. ಮಕ್ಕಳ ಸಂಗೀತಾಸಕ್ತಿ, ಸಂಗೀತದ ಹಿರಿಮೆಯನ್ನು ತೋರಿಸಿಕೊಡಲು ಇದೊಂದು ಸುವಣರ್ಾವಕಾಶವಾಗಿದೆ. ಲಾಲ್ಗುಡಿ.ಜಿ. ಜಯರಾಮನ್ ಅವರ ಸಂಗೀತದ ಅತೀ ಮಾಧುರ್ಯ ಕ್ರಮವನ್ನು ಇಲ್ಲಿ ಕಲಿಸಿಕೊಡಲಾಗುವುದು. ಶಿಬಿರದಲ್ಲಿ ಭಾಗವಹಿಸಲಿಚ್ಛಿಸುವವರು ಮೇ.29ರಂದು ಬೆಳಿಗ್ಗೆ ತಮ್ಮ ಹೆಸರನ್ನು ನೋಂದಾಯಿಸಬಹುದಾಗಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries