HEALTH TIPS

No title

                     ಕನ್ನಡ ಕಾರ್ಯಕ್ರಮ ಗಡಿನಾಡಿನ ಜಾಗೃತಿಗೆ ಪ್ರೇರಣೆ-ಶ್ರೀಶಕುಮಾರ
                 ರಂಗಚಿನ್ನಾರಿಯ ನೆನೆ ನೆನೆ ಕನ್ನಡ ಗಾನ 2 ನೇ ಕಾರ್ಯಕ್ರಮ ವಿದ್ಯಾಪೀಠದಲ್ಲಿ
    ಬದಿಯಡ್ಕ : ಕನ್ನಡದ ಭಕ್ತಿ, ಭಾವ ಜನಪದ ಗೀತೆಗಳ ಸುಸ್ವರದ ಅನಾವರಣವನ್ನು ಪ್ರಸಿದ್ಧ ಗಾಯಕರ ಕಂಠದೊಂದಿಗೆ ಉತ್ತಮ ಹಿನ್ನಲೆಯ ಸಂಗೀತದೊಂದಿಗೆ ಅಸ್ವಾದಿಸಿದ ಜನ ಕರತಾಡನದ ಮೂಲಕ ಪ್ರಶಂಸಿಸುವ ಮೂಲಕ ಗಡಿನಾಡಲ್ಲೂ ಕನ್ನಡತನದ ಗಾನ ಅನುರುಣಿಸುತ್ತಿದೆ ಎಂಬುದಕ್ಕೆ ಸಾಕ್ಷಿಯಾದರು.
ಬದಿಯಡ್ಕದ ಶ್ರೀ ಭಾರತೀ ವಿದ್ಯಾಪೀಠದಲ್ಲಿ ರಂಗ ಚಿನ್ನಾರಿ ಕಾಸರಗೋಡು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಯೋಗದೊಂದಿಗೆ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ ಸಹಕಾರದಲ್ಲಿ ಸೋಮವಾರ ಸಂಜೆ ನಡೆದ ನೆನೆ ನೆನೆ ಕನ್ನಡ ಗಾನ ಎಂಬ ಕಾರ್ಯಕ್ರಮದಲ್ಲಿ ನೆರೆದ ಜನ ಈ ಅಭೂತಪೂರ್ವ ಕ್ಷಣದಲ್ಲಿ ಭಾಗಿಗಳಾದರು.
    ಈ ಸಂದರ್ಭದಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಕನರ್ಾಟಕ ಬ್ಯಾಂಕ್ ನೀಚರ್ಾಲು ಶಾಖೆಯ ಪ್ರಬಂಧಕ ಶ್ರೀಶಕುಮಾರ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಆಧುನಿಕವಾದ ಜೀವನ ಶೈಲಿಯಲ್ಲಿ ಕನ್ನಡದ ಕಂಪನ್ನು ಪಸರಿಸುವ ಸಂಗೀತ ಕಾರ್ಯಕ್ರಮಗಳು ಗಡಿನಾಡಿನಲ್ಲಿ ಜನ ಜಾಗೃತಿ ಮೂಡಿಸುವಲ್ಲಿಯೂ ಮಹತ್ತರವಾದ ಪಾತ್ರವಹಿಸುತ್ತಿರುವುದು ಶ್ಲಾಘನೀಯವಾಗಿದ್ದು ರಂಗ ಚಿನ್ನಾರಿ ಎಂಬ ಸಂಸ್ಥೆ ಇದರ ನೇತೃತ್ವವಹಿಸಿ ಪ್ರಾಮಾಣಿಕವಾಗಿ ಕನ್ನಡದ ಉಳಿವಿಗೆ ದುಡಿಯುತ್ತಿರುವುದು ಆದರ್ಶಯುತವಾಗಿದೆ ಎಂದರು.
ರಂಗ ಚಿನ್ನಾರಿಯ ನಿದರ್ೇಶಕ, ಚಲನಚಿತ್ರ ನಟ ಕಾಸರಗೋಡು ಚಿನ್ನಾ ಮಾತನಾಡಿ ಅಖಿಲ ಕನರ್ಾಟಕ ಗುರುತಿಸುವಂತಹ ಕನ್ನಡ ಚಟುವಟಿಕೆಗಳು ಕಾಸರಗೋಡಿನಲ್ಲಿ ನಡೆಯುತ್ತಿದ್ದು ಇಲ್ಲಿನವರ ಅಚ್ಚಗನ್ನಡತನದಿಂದ ಇದು ಸಾಧ್ಯವಾಗಿದೆ. ಕನರ್ಾಟಕದಿಂದ ಈ ಗಡಿನಾಡನ್ನು ಸಂದಶರ್ಿಸಿದ ಕನ್ನಡಿಗರು ಇದನ್ನು ಕಂಡು ಹುಬ್ಬೇರಿಸುವಂತಹ ಕನ್ನಡದ ಸೊಗಡು ಹಾಗೂ ಧೀಮಂತತನ ಇಲ್ಲಿ ಶಾಶ್ವತವಾಗಿದೆ. ನಾವು ಕಳೆದುಕೊಳ್ಳುವಂತದೇನು ಇಲ್ಲ ಬದಲಾಗಿ ಮುಂದಿನ ಜನಾಂಗದಲ್ಲಿ ಇದನ್ನು ಉಳಿಸುವ ಕೈಂಕರ್ಯವನ್ನಷ್ಟೆ ನಾವು ಮಾಡಬೇಕಾಗಿರುವುದರಿಂದ ಇದನ್ನು ರಂಗ ಚಿನ್ನಾರಿ ಹಳ್ಳಿಯೆಡೆಗೆ ಎಂಬ ಅಭಿಯಾನ ಮೂಲಕ ಮಾಡುತ್ತಿದ್ದು ಗ್ರಾಮೀಣರು ಇದನ್ನು ಪ್ರೋತ್ಸಾಹಿಸುತ್ತಿದ್ದು ಇಲ್ಲಿನ ಕನ್ನಡಕ್ಕೆ ಅಳಿವು ಇಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ ಎಂದರು.
ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ ಸಂಚಾಲಕ ಜಯಪ್ರಕಾಶ್ ಪಜಿಲ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಂಗ ಚಿನ್ನಾರಿಯ ನಿದರ್ೇಶಕ ಕೋಳಾರು ಸತೀಶ್ಚಂದ್ರ ಭಂಡಾರಿ ಮಾತನಾಡಿದರು. ಶಾಲಾ ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ ಸ್ವಾಗತಿಸಿ, ವಂದಿಸಿದರು. 
ಬಳಿಕ ಖ್ಯಾತ ಗಾಯಕರಾದ ರವೀಂದ್ರ ಪ್ರಭು, ಸೀಮ ರಾಯ್ಕರ್, ಕಿಶೋರ್ ಪೆರ್ಲ ಅವರು `ನೆನೆ ನೆನೆ ಕನ್ನಡ ಗಾನ' ಎಂಬ ಭಕ್ತಿ ಭಾವ ಜನಪದಗೀತೆಗಳ ಝೇಂಕಾರ ಹಾಡುಗಳನ್ನು ಪ್ರಸ್ತುತಪಡಿಸಿ ನೆರೆದ ಸಭಿಕರಿಂದ ಕರತಾಡನ ಗಿಟ್ಟಿಸಿಕೊಂಡರು.  ಖ್ಯಾತ ಹಿನ್ನಲೆ ಸಂಗೀತಗಾರರಾದ ಪುರುಷೋತ್ತಮ ಕೊಪ್ಪಳ್ ಕೀಬೋಡರ್ಿನಲ್ಲಿ, ರಾಜೇಶ್ ಭಾಗವತ್ ರಿದಂಪಾಡ್ನಲ್ಲಿ ಹಾಗೂ ತಬಲಾದಲ್ಲಿ ಅಭಿಜಿತ್ ಶೆಣೈ ಸಹಕರಿಸಿದರು.
    ಮೇ.15ರಂದು ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ನೆನೆ ನೆನೆ ಕನ್ನಡ ಗಾನ ಕಾರ್ಯಕ್ರಮ ನಡೆಯಿತು.  ಮೇ 17ರಂದು ಏತಡ್ಕ ದುಗರ್ಾಪರಮೇಶ್ವರೀ ಭಜನಾ ಮಂದಿರದಲ್ಲಿ, ಮೇ 18ರಂದು ಕಾಟುಕುಕ್ಕೆ ಸುಬ್ರಾಯ ದೇವಸ್ಥಾನದಲ್ಲಿ ಜರಗಿ, ಮೇ.19ರಂದು ಮೀಯಪದವು ಶಾಲೆಯಲ್ಲಿ ಅಭಿಯಾನ ಸಮಾಪ್ತಿಗೊಳ್ಳಲಿದ್ದು ಪ್ರತೀದಿನ ಸಂಜೆ 6 ಗಂಟೆಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಬಂಧಪಟ್ಟವರು ತಿಳಿಸಿರುತ್ತಾರೆ.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries