HEALTH TIPS

No title

                ಶ್ರೀಕ್ಷೇತ್ರ ಮಧೂರಿನ ಪುನಃನವೀಕರಣಕ್ಕೆ ವೇಗ-ತುತರ್ು ಸಭೆ
   ಮಧೂರು: ಕುಂಬಳೆ ಸೀಮೆಯ ನಾಲ್ಕು ಪ್ರಧಾನ ದೇವಾಲಯಗಳಲ್ಲಿ ಒಂದಾಗಿರುವ, ಮೊದಲ ಪೂಜಿತ ಗಣಪ ನೆಲೆಗೊಂಡ ಮಧೂರು ಶ್ರಿಮದನಂತೇಶ್ವರ ಸಿದ್ದಿವಿನಾಯಕ ದೇವಾಲಯದ ಪುನರ್ ನವೀಕರಣ ಪ್ರಕ್ರಿಯೆಗಳು ಭರದಿಂದ ಸಾಗುತ್ತಿದ್ದು, 30 ಕೋಟಿಗೂ ಮಿಕ್ಕಿದ ಅಂದಾಜು ವೆಚ್ಚದ ಕೆಲಸ ಕಾರ್ಯಗಳು ಅಂತಿಮ ಹಂತದಲ್ಲಿದೆ. ನವೀಕರಣಕ್ಕೆ ಸಂಬಂಧಿಸಿ ಆಥರ್ಿಕ ಮತ್ತು ಪ್ರಚಾರ ಸಮಿತಿಗಳ ತುತರ್ು ಸಭೆ ಗುರುವಾರ ಸಂಜೆ ಶ್ರೀಕ್ಷೇತ್ರ ಮಧೂರಿನ ಸಭಾಂಗಣದಲ್ಲಿ ಪುನಃನವೀಕರಣ ಸಮಿತಿ ಅಧ್ಯಕ್ಷ ಯು.ಟಿ.ಆಳ್ವ ರ ಅಧ್ಯಕ್ಷತೆಯಲ್ಲಿ ನಡೆಯಿತು.
   ಸಮಿತಿ ಉಪಾಧ್ಯಕ್ಷ ಡಾ.ಬಿ.ಎಸ್.ರಾವ್, ಬಿ.ವಿ.ಕಕ್ಕಿಲ್ಲಾಯ, ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ, ಪ್ರಚಾರ ಸಮಿತಿಯ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಉಪಸ್ಥಿತರಿದ್ದು ಮಾರ್ಗದರ್ಶನ ನೀಡಿದರು. ವಿವಿಧ ವಲಯಗಳ ಪ್ರಮುಖರಾದ ಸುರೇಶ್ ಕೆ.ಸೂಲರ್ು, ಮುರಳೀ ಗಟ್ಟಿ, ಗಿರೀಶ್, ಶೇಂತಾರು ನಾರಾಯಣ ಭಟ್, ಬಾಲಕೃಷ್ಣನ್ ನಾಯರ್, ತಾರಾನಾಥ ಮಧೂರು, ವಿಷ್ಣು ಭಟ್ ಕಕ್ಕೆಪ್ಪಾಡಿ, ಟಿ.ಶಂಕರನಾರಾಯಣ ಭಟ್, ನ್ಯಾಯವಾದಿ ಅನಂತರಾಮ, ಮಾಧವ ಮಾಸ್ತರ್, ಪ್ರಭಾಶಂಕರ ಮಾಸ್ತರ್, ಬಾಲಕೃಷ್ಣ ಉಳಿಯ ಮೊದಲಾದವರು ಉಪಸ್ಥಿತರಿದ್ದು ಸಲಹೆ ಸೂಚನೆಗಳನ್ನು ನೀಡಿ ನವೀಕರಣ ಪ್ರಕ್ರಿಯೆಯ ಮುಂದಿನ ಕಾರ್ಯಯೋಜನೆಗಳ ಬಗ್ಗೆ ಚಚರ್ಿಸಿ ತೀಮರ್ಾನ ಕೈಗೊಳ್ಳಲಾಯಿತು. ಪ್ರಧಾನ ಕಾರ್ಯದಶರ್ಿ ಜಯದೇವ ಖಂಡಿಗೆ ಸ್ವಾಗತಿಸಿ, ಯೋಗೀಶ್  ಮಧೂರು ವಂದಿಸಿದರು. ನಾರಾಯಣಯ್ಯ ಕೆ ಸಭೆ ನಿರ್ವಹಿಸಿದರು.
   ಭರದ ಕರಸೇವೆ
   ಕ್ಷೇತ್ರ ನವೀಕರಣ ಪ್ರಕ್ರಿಯೆಗಳು ವೇಗ ಪಡೆಯುತ್ತಿರುವಂತೆ ಇದೀಗ ಪ್ರತಿನಿತ್ಯ ನಾಡಿನ ಉದ್ದಗಲದಿಂದ ವಿವಿಧ ಸಂಘಸಂಸ್ಥೆಗಳು, ಭಜನಾ ಸಂಘಗಳ ಕಾರ್ಯಕರ್ತರು ಶ್ರೀಕ್ಷೇತ್ರ ಮಧೂರಿಗೆ ಆಗಮಿಸಿ ವಿವಿಧ ಚಟುವಟಿಕೆಗಳಲ್ಲಿ ಕರಸೇವಕರಾಗಿ ಭಾಗವಹಿಸಿ ತಮ್ಮ ಸೇವಾ ತತ್ಪರತೆಯಿಂದ ಕೃತಾರ್ಥರಾಗುತ್ತಿದ್ದಾರೆ. ವಿವಿಧ ಪ್ರದೇಶಗಳಿಂದ ಆಗಮಿಸುವ ಕರಸೇವಕ ಭಕ್ತರ ತಂಡ ತಡರಾತ್ರಿಯ ವರೆಗೂ ಶ್ರೀಕ್ಷೇತ್ರದ ವಿವಿಧ ನವೀಕರಣ ಕೆಲಸ ಕಾರ್ಯಗಳಲ್ಲಿ ಪಾಲ್ಗೊಳ್ಳುತ್ತಿದ್ದು, ಇನ್ನಷ್ಟು ತಂಡಗಳಿಗೆ ಸೇವಾ ತತ್ಪರತೆಯ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯಯೋಜನೆ ಸಿದ್ದಪಡಿಸಲಾಗಿದೆ ಎಂದು ಕ್ಷೇತ್ರ ನವೀಕರಣ ಯೋಜನೆಯ ಪದಾಧಿಕಾರಿಗಳು ತಿಳಿಸಿದ್ದಾರೆ.
   


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries