HEALTH TIPS

No title

          ಸವ್ಯ ಸಾಚಿ  ಮುಖ್ಯ ಶಿಕ್ಷಕ ಶಂಕರ್ ಸಾರಡ್ಕರಿಗೆ  ಮೇ 31 ರಂದು ನಿವೃತ್ತಿ
ಬದಿಯಡ್ಕ: ಪೆರಡಾಲ ನವಜೀವನ ಹೈಯರ್ ಸೆಕೆಂಡರಿ ಶಾಲೆಯ ಮುಖ್ಯೋಪಾಧ್ಯಾಯ, ಹವ್ಯಾಸಿ ಪತ್ರಕರ್ತ,ಯಕ್ಷಗಾನ ಅರ್ಥಧಾರಿ, ಕಲಾಪೋಷಕ, ನುರಿತ ಕೃಷಿಕ, ಕೇರಳ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಮತ್ತು ಭಾರತ ರಾಷ್ಟ್ರ ಉತ್ತಮ ಶಿಕ್ಷಕ ಪ್ರಶಸ್ತಿ ,ಸಿ ಸಿ ಆರ್ ಟಿ ನವದೆಹಲಿ ಪ್ರಶಸ್ತಿ, ನೈಲ್ ಲೀಡರ್ ಶಿಪ್ ಪ್ರಶಸ್ತಿ, ನಿವೃತ್ತಿಯಂಚಿನಲ್ಲಿರುವಾಗ ಕೇರಳ ರಾಜ್ಯ ಶಾಲಾ ಮುಖ್ಯ ಶಿಕ್ಷಕರ ಸಂಘಟನೆಯಿಂದ ಚೆರಿಯನ್ ಎಕ್ಸ್ಲೆನ್ಸ್ ಪ್ರಶಸ್ತಿ  ಪುರಸ್ಕೃತ ಶಂಕರ್ ಸಾರಡ್ಕರಿಗೆ (ಶಂಕರನಾರಾಯಣ ಭಟ್ ಎಸ್) ಮೇ 31 ವೃತ್ತಿಯಿಂದ ನಿವೃತ್ತಿ. ಶಾಲಾ ಪಠ್ಯ-ಪಠ್ಯೇತರ ವಿಷಯಗಳಲ್ಲಿ ಮಕ್ಕಳಿಗೆ ನೀಡಿದ ವಿಶೇಷ ತರಬೇತಿ, ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಇವರ ತೋರಿಸಿದ ಆಸಕ್ತಿ ,ಸಾಮಾಜಿಕ ಕಳಕಳಿಯ ಸೇವೆಯಲ್ಲಿ ಇವರು ತೋರಿಸಿದ ಪರಿಶ್ರಮ ಮತ್ತು ಇತರ ವಿಷಯಗಳಲ್ಲಿ ಇವರ ಪ್ರೌಢಿಮೆಯನ್ನು  ಪರಿಗಣಿಸಿ, ಕನ್ನಡಿಗರಾದ ಇವರನ್ನು ಮಲಯಾಳದ ನಾಡಿನಲ್ಲಿ ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಿದುದು  ಕನ್ನಡಿಗರಿಗೆ ಹೆಮ್ಮೆಯ ವಿಷಯ.
ತಂದೆ ವಿಷ್ಣು ಭಟ್, ನಿವೃತ್ತ ಮುಖ್ಯ ಶಿಕ್ಷಕರು. ತಾಯಿ ಲಕ್ಷ್ಮಿ, ಗೃಹಣಿ. ಪತ್ನಿ ಗೀತಾ ಸಾರಡ್ಕ ಸಂಗೀತ ಶಿಕ್ಷಕಿ, ಇಬ್ಬರು ಮಕ್ಕಳು ಹಿರಿಯ ಮಗ ಚಿಂತನ್ ಸಾರಡ್ಕ ಎಂಟೆಕ್ ಮಾಡಿ ಬೆಂಗಳೂರಿನಲ್ಲಿ ಉದ್ಯೋಗಿ. ಕಿರಿಯವನು ಚೇತನ್ ಪಿಯುಸಿ ವಿದ್ಯಾಥರ್ಿ.
ಮೇ 8, 1962 ರಲ್ಲಿ ದ.ಕ. ಜಿಲ್ಲೆಯ ವಿಟ್ಲ ಸನಿಹದ ಸಾರಡ್ಕದಲ್ಲಿ ಜನನ. ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾಭ್ಯಾಸವನ್ನು ಜನತಾ ವಿದ್ಯಾಸಂಸ್ಥೆ ಅಡ್ಯನಡ್ಕ, ಪದವಿಪೂರ್ವ ,ಬಿಎಸ್ ಸಿ ಪದವಿಯನ್ನು ಸ್ವಾಮಿ ವಿವೇಕಾನಂದ ಕಾಲೇಜು ಪುತ್ತೂರು, ಬಿಎಡ್ ಪದವಿಯನ್ನು  ಟಿ ಎಂ ಎ ಪೈ ಕಾಲೇಜು ಉಡುಪಿ ಮತ್ತು ಆಂಗ್ಲ ಭಾಷೆಯಲ್ಲಿ ಎಂ ಎ ಯನ್ನು ಅನ್ನಾಮಲೈ ಯೂನಿರ್ವಸಿಟಿ ಚೆನ್ನೈಯಲ್ಲಿ ಪೂರೈಸಿದ್ದಾರೆ.
ಶಾಲೆಯ 14 ಎಕ್ರೆ ಸ್ಥಳಕ್ಕೆ ಭದ್ರ ಆವರಣ ಗೋಡೆ ನಿಮರ್ಿಸುವ ಕೆಲಸ ಮುಂದುವರಿಸಲು  ಕೇರಳ ರಾಜ್ಯ ಪ್ರಶಸ್ತಿಯ ರೂ 10000, ಮೊತ್ತಕ್ಕೆ  ತನ್ನ ದುಡಿಮೆಯ  ಹಣವನ್ನೂ ಸೇರಿಸಿ ರೂ 50000(ಐವತ್ತು ಸಾವಿರ)ವನ್ನು ಶಾಲಾ  ಆಡಳಿತ ಮಂಡಳಿಗೆ  ನೀಡಿ ತಮ್ಮ ವೈಶಾಲ್ಯತೆಯನ್ನು ಮೆರೆದವರು ಶಂಕರ್ ಸಾರಡ್ಕ ಅವರು. 
ಮೇ 31 ರಂದು ತನ್ನ ವೃತಿಯಿಂದ ವಿರಮಿಸುವ ದಿನ ಶಂಕರ್ ಸಾರಡ್ಕ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ತನ್ನ ಆತ್ಮ ವೃತ್ತಾಂತ 'ನನ್ನ ಹೆಜ್ಜೆಗಳು' ಪುಸ್ತಕ ಬಿಡುಗಡೆಯ ಸಮಾರಂಭ ಬೆಳಗ್ಗೆ 10.30 ಶಾಲಾ ಪರಿಸರದಲ್ಲಿ  ನಡೆಯಲಿದೆ.  ಇದರಲ್ಲಿ ತನ್ನ ವ್ಯಕ್ತಿತ್ವ ರೂಪಿದ 8 ಮಂದಿಯನ್ನು  ಕರೆಸಿ ಗೌರವಾರ್ಪಣೆಯನ್ನು ಮಾಡಲಿದ್ದಾರೆ. ವಿ.ಗ.ನಾಯಕ ಮಂಗಳೂರು, ಚಂಗಪ್ಪ ಐ.ಸಿ. ಸೌತ್ ಕೂಗರ್್, ಪ್ರೊ. ವಿ ಬಿ ಅತರ್ಿಕಜೆ ಪುತ್ತೂರು, ಮೇಜರ್ ಎಮ್ ಎನ್ ಚೆಟ್ಟಿಯಾರ್ ಪುತ್ತೂರು, ನ್ಯಾಯವಾದಿ  ಐ ವಿ ಭಟ್ ಕಾಸರಗೋಡು, ಡಾ ಸೂರ್ಯ ಎನ್ ಶಾಸ್ತಿ ಬದಿಯಡ್ಕ, ಶ್ರೀಪಡ್ರೆ ವಾಣಿನಗರ ಮತ್ತು ಸತೀಶ ಕುಮಾರ ಪುದ್ಯೋಡು ಇವರನ್ನು ಗೌರವಿಸಲಿದ್ದಾರೆ.
ಸಮಾರಂಭದ ಅಧ್ಯಕ್ಷತೆಯನ್ನು ಬದಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಕೃಷ್ಣ ಭಟ್ ಕೆ ಎನ್ ವಹಿಸಲಿದ್ದಾರೆ. ಆನೆಮಜಲು ವಿಷ್ಣು ಭಟ್ ಪುಸ್ತಕ ಬಿಡುಗಡೆಗೊಳಿಸಲಿದ್ದಾರೆ. ಸಹ ಮುಖ್ಯೋಪಾಧ್ಯಾಯ ಶ್ಯಾಮ ಭಟ್ ಕೆ ಮತ್ತು ಹಿರಿಯ ಅಧ್ಯಾಪಿಕೆ ತಂಗಮಣಿ ಪಿ ಕೆ ಶುಭಾಶಂಸನೆಗೈಯ್ಯುವರು. 
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries