HEALTH TIPS

No title

                 ಕಣಿಪುರದಲ್ಲಿ ರುಕ್ಮಿಣೀ ಸ್ವಯಂವರ -ನೂರಾರು ಸಂಖ್ಯೆಯ ಜನರ  ಮುಗಿಲುಮುಟ್ಟಿದ ಸಂಭ್ರಮ
    ಕುಂಬಳೆ: ಕ್ಷೇತ್ರ ಪರಿಸರದಲ್ಲಿ ವಾಡಿಕೆಗಿಂತ ಹೆಚ್ಚು ಮಂದಿ ಮಹಿಳೆಯರು, ಪುರುಷರು, ಮಕ್ಕಳು ಸಂಜೆ 4ರ ವೇಳೆಗೇ ಸೇರತೊಡಗಿದ್ದರು. ಮಹಿಳೆಯರ ಸಂಭ್ರಮವಂತೂ ಎಲ್ಲೆಮೀರಿತ್ತು. ಕೆಲವರು ವರನ ಕಡೆಯವರಾಗಿಯೂ, ಮತ್ತೆ ಹಲವರು ವಧುವಿನ ಸಂಬಂಧಿಕರಾಗಿಯೂ ದಿಬ್ಬಣ ಹೊರಡಲು ಮತ್ತು ಆಗಮಿಸುವವರನ್ನು ಸ್ವಾಗತಿಸಲು ಕಾಯುತ್ತಿದ್ದರು.
   ಇದು ಯಾವುದೇ ಮದುವೆ ಸಭಾಂಗಣದ ಸಂಭ್ರಮದ ವಿಚಾರವಲ್ಲ. ಕುಂಬಳೆ ಕಣಿಪುರ ಶ್ರೀಗೋಪಾಲಕೃಷ್ಣ ಕ್ಷೇತ್ರದಲ್ಲಿ ನಡೆಯುತ್ತಿರುವ ಶ್ರೀ ಮದ್ಭಾಗವತ ಸಪ್ತಾಹ ಯಜ್ಞದ ಅಂಗವಾಗಿ ಸೋಮವಾರ ನಡೆದ ರುಕ್ಮಿಣೀ ಸ್ವಯಂವರದಲ್ಲಿ ಕಂಡುಬಂದ ಭಜಕರ ಸಂಭ್ರಮಾಚರಣೆ.
  ಕಣಿಪುರ ಶ್ರೀಗೋಪಾಲಕೃಷ್ಣ ಕ್ಷೇತ್ರದಲ್ಲಿ ಮೇ.16 ರೀಮದ 6ನೇ ವರ್ಷದ ಶ್ರೀಮದ್ಭಾಗತ ಸಪ್ತಾಹ ಯಜ್ಞ ನಡೆಯುತ್ತಿದ್ದು, ಸೋಮವಾರ ಬೆಳಿಗ್ಗೆ 6 ರಿಂದ ಗಣಪತಿಹವನ, ಹರಿನಾಮ ಸಂಕೀರ್ತನೆ, ವಿಷ್ಣು ಸಹಸ್ರನಾಮ, ಗ್ರಂಥ ನಮಸ್ಕಾರ ಕಾರ್ಯಕ್ರಮಗಳು ನಡೆದು ಅಪರಾಹ್ನ 3 ರಿಂದ ಶ್ರೀಮದ್ಭಾಗವತ ಪಾರಾಯಣ ಮತ್ತು ಪ್ರವಚನ ನಡೆಯಿತು. ಪ್ರಧಾನ ಭಾಗಗಳಾದ ಬಾಲಲೀಲೆ, ಬ್ರಹ್ಮಸ್ತುತಿ, ಮಕಾಳೀಯ ಮರ್ದನ, ಗೋವರ್ಧನೋದ್ದಾರಣ, ರಾಸನೃತ್ಯ, ಕಂಸವಧೆ, ಉದ್ದವ ದೌತ್ಯ ಭಾಗಗಳ ಪಾರಾಯಣ, ಪ್ರವಚನ ನಡೆಯಿತು. ವಿಶೇಷವಾಗಿ ರುಕ್ಮಿಣೀ ಸ್ವಯಂವರ ಏರ್ಪಡಿಸಲಾಗಿತ್ತು. ಯಜ್ಞಾಚಾರ್ಯರಾದ ಬ್ರಹ್ಮಶ್ರೀ ಪ್ರೊ.ಕೆ.ನಾರಾಯಣನ್ ಪೋತ್ತಿ ಉಪನ್ಯಾಸ ನೀಡಿದರು.
   ಕಾರ್ಯಕ್ರಮದ ಅಂಗವಾಗಿ ಸಂಜೆ ರುಕ್ಮಿಣೀಯ ಮೂತರ್ಿಯೊಂದಿಗೆ ಶ್ರೀಕ್ಷೇತ್ರಕ್ಕೆ ದಿಬ್ಬಣಿಗರು ಮೆರವಣಿಗೆಯಲ್ಲಿ ಆಗಮಿಸಿದರು. ವಾದ್ಯಘೋಷಗಳೊಂದಿಗೆ ಆಗಮಿಸಿದ ದಿಬ್ಬಣಿಗರನ್ನು ಸ್ವಾಗತಿಸಲಾಯಿತು. ಪಾರಾಯಣ-ಪ್ರವಚನದ ಬಳಿಕ ಶ್ರೀಕೃಷ್ಣ-ರುಕ್ಮಿಣಿಯರು ಮುಗಿಲು ಮುಟ್ಟುವ ವೇದಘೋಷ, ನಾಮ ಸಂಕೀರ್ತನೆಗಳ ಮಧ್ಯೆ ಹಸೆಮಣೆಗೇರಿದರು. ಬಳಿಕ ನೂರಾರು ಮಂದಿ ಉಡುಗೊರೆಗಳನ್ನು ನೀಡಿ ಸಂಭ್ರಮಿಸಿದರು. ಬ್ರಹ್ಮಶ್ರೀ ಪ್ರೊ.ಕೆ.ನಾರಾಯಣನ್ ಪೋತ್ತಿ ಯವರು ಶ್ರೀಕೃಷ್ಣ ರುಕ್ಮಿಣಿಯವರ ಆದರ್ಶ ದಾಂಪತ್ಯದ ಬಗ್ಗೆ ಸವಿಸ್ತಾರ ವಿವರಣೆ ನೀಡಿದರು. ವೇದಮೂತರ್ಿ ಕೇಶವ ಭಟ್ ಕೇಕಣಾಜೆ, ಶಂಕರಪ್ರಸಾದ್ ಕುಂಬಳೆ, ವಿಕ್ರಂ ಪೈ ಕುಂಬಳೆ, ಕಣಿಪುರ ಕ್ಷೇತ್ರದ ಅರ್ಚಕ ಮಾಧವ ಅಡಿಗ, ಸುಕುಮಾರ ಆರಿಕ್ಕಾಡಿ,ವಿವೇಕಾನಂದ ಭಕ್ತ ಮೊದಲಾದವರು ಉಪಸ್ಥಿತರಿದ್ದು ಸಹಕರಿಸಿದರು. ಬಳಿಕ ಪ್ರಸಾದ ವಿತರಣೆ, ಲಘು ಉಪಾಹಾರಗಳೊಂದಿಗೆ ಸಪ್ತಾಹದ ದಿನದ ಸಮಾರೋಪ ನಡೆಯಿತು.
 





Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries