ಯಕ್ಷ - ನಾಟ್ಯ - ಹಾಸ್ಯ ವೈಭವ
ಮಧೂರು: ಕೂಡ್ಲು ಕುತ್ಯಾಳ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಮುಂಭಾಗದಲ್ಲಿ ನಡೆಯುವ ಶ್ರೀ ವಿಷ್ಣುಮೂತರ್ಿ ಒತ್ತೆಕೋಲ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಮೇ 5 ರಂದು ಶನಿವಾರ ರಾತ್ರಿ 1 ಕ್ಕೆ ತೆಂಕುತಿಟ್ಟಿನ ಸುಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಸ್ಥಳೀಯ ಯಕ್ಷಾಭಿಮಾನಿ ಕೂಡ್ಲು ಇವರು ಪ್ರಾಯೋಜಿಸುವ ವಿನೂತನ ಯಕ್ಷಗಾನ ಕಾರ್ಯಕ್ರಮ ಯಕ್ಷ - ನಾಟ್ಯ - ಹಾಸ್ಯ ವೈಭವ ನಡೆಯಲಿರುವುದು.
ಹಿಮ್ಮೇಳದಲ್ಲಿ ಭಾಗವತರಾಗಿ ರವಿಚಂದ್ರ ಕನ್ನಡಿಕಟ್ಟೆ, ಗಿರೀಶ್ ರೈ ಕಕ್ಕೆಪದವು ಸಹಕರಿಸುವರು. ಚೆಂಡೆ ಮದ್ದಳೆಯಲ್ಲಿ ವಿನಯ ಆಚಾರ್ಯ ಕಡಬ ಹಾಗೂ ಚೈತನ್ಯ ಕೃಷ್ಣ ಪದ್ಯಾಣ, ಚಕ್ರತಾಳದಲ್ಲಿ ರಾಜೇಂದ್ರಕೃಷ್ಣ ಪಂಜಿಗದ್ದೆ ಸಹಕರಿಸಲಿದ್ದಾರೆ. ಮುಮ್ಮೇಳದಲ್ಲಿ ಹಾಸ್ಯಗಾರರಾಗಿ ಚಾಲರ್ಿಚಾಪ್ಲಿನ್ ಖ್ಯಾತಿಯ ಸೀತಾರಾಮ್ ಕಟೀಲು, ಸ್ತ್ರೀ ಪಾತ್ರದಲ್ಲಿ ಸಂತೋಷ್ ಹಿರಿಯಾಣ, ರಕ್ಷಿತ್ ಶೆಟ್ಟಿ ಪಡ್ರೆ ಮತ್ತು ಪುಂಡು ವೇಷದಲ್ಲಿ ದಿವಾಕರ ರೈ ಸಂಪಾಜೆ ರಂಜಿಸಲಿದ್ದಾರೆ.