HEALTH TIPS

ಯಾವುದೇ ಶೀರ್ಷಿಕೆಯಿಲ್ಲ

           ಕೆಂಪು ಗ್ರಹದ ಒಳಾಂಗಣ ಅನ್ವೇಷಣೆಗೆ ಅಮೆರಿಕಾ ಸಜ್ಜು ಪ್ರಥಮ ಲ್ಯಾಂಡರ್ನ್ನು ನಭಕ್ಕೆ ಚಿಮ್ಮಿಸಿದ ನಾಸಾ
    ವಾಂಡನ್ ಬಗರ್್(ಅಮೆರಿಕಾ): ಮಂಗಳನ ಒಳಾಂಗಣವನ್ನು ಅನ್ವೇಷಿಸಲು ನಾಸಾ ರೋಬೋಟಿಕ್ ಲ್ಯಾಂಡರ್ ನ್ನು ಹೊತ್ತಂತಹಾ ಅಟ್ಲಾಸ್ 5 ರಾಕೆಟ್ ನ್ನು ಯಶಸ್ವಿಯಾಗಿ ಉಡಾವಣೆಗೊಳಿಸಿದೆ.
    ಮಂಗಳ ಗ್ರಹದ ಒಳ ಭಾಗಗಳ ಕುರಿತ ಸಂಶೋಧನೆಗೆ ನಾಶಾ ನಡೆಸಿದ ಪ್ರಥಮ ಪ್ರಯತ್ನ ಇದಾಗಿದ್ದು ಶನಿವಾರ ಬೆಳಿಗ್ಗೆ 4:05ಕ್ಕೆ ಈ ವಿಶೇಷ ರಾಕೆಟ್ ಉಡಾವಣೆಯಾಗಿದೆ.
ಮಾಸ್ ಇನ್ಸೈಟ್ ಪ್ರೋಬ್ ಎಂದು ಕರೆಯಲಾಗುವ ಈ ಯೋಜನೆ ಅಮೆರಿಕಾದ ಪ್ರಪ್ರಥಮ  ಅಂತರ್-ಗ್ರಹ ಅನ್ವೇಷಕ ಬಾಹ್ಯಾಕಾಶ ನೌಕೆಯಾಗಿದೆ.
    ಅಟ್ಲಾಸ್ ರಾಕೆಟ್ 19 ಅಡಿ ಎತ್ತರವನ್ನು ಹೊಂದಿದ್ದು ಎರಡು ಹಂತಗಳಲ್ಲಿ ವಿಭಜನೆಗೊಂಡಿದೆ. ಇವುಗಳಲ್ಲಿ ಒಂದರಲ್ಲಿ ಲ್ಯಾಂಡರ್ ಇದ್ದರೆ ಇನ್ನೊಂದರಲ್ಲಿ ಜೆಟ್ ಪ್ರೊಪಲ್ಶನ್ ಲ್ಯಾಬೋರೇಟರಿ ಇದೆ.993 ಮಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ಈ ಯೋಜನೆಯಿಂದ ಮಂಗಳ ಗ್ರಹ ಆಂತರಿಕ ಸ್ಥಿತಿಯ ಬಗ್ಗೆ ತಿಳಿವನ್ನು ಹೆಚ್ಚಿಸಿಕೊಳ್ಳಲು ಸಹಕಾರಿಯಾಗಲಿದೆ.
     ಭವಿಷ್ಯದಲ್ಲಿ ಮಂಗಳನಲ್ಲಿಗೆ ಮಾನವ ಪರಿಶೋಧಕರನ್ನು ಕಳಿಸುವ ಕುರಿತಂತೆ ಪರಿಶೀಲನೆಗೆ ಇದು ನೆರವಾಗಲಿದ್ದು ಶತಕೋಟಿ ವರ್ಷಗಳ ಹಿಂದೆ ಭೂಮಿ ರೂಪುಗೊಂಡ ಬಗೆ, ಹಾಗೂ ಸೌರಮಂಡಲದ ಗ್ರಹಗಳು ಜನ್ಮ ತಾಳಿದ ಬಗೆಯ ಸಂಬಂಧ ಈ ಯೋಜನೆಯಿಂದ ಮಾಹಿತಿ ಪಡೆಯಬಹುದು.  ಎಲ್ಲವೂ ಸಸೂತ್ರವಾದಲ್ಲಿ ಲ್ಯಾಂಡರ್ ಇದೇ ನವೆಂಬರ್ 26ರಂದು ಕೆಂಪು ಗ್ರಹದಲ್ಲಿ ನೆಲೆಯಾಗಲಿದೆ. ಲಾಕ್ಹೀಡ್ ಮಾಟರ್ಿನ್ ಕಾಪರ್್ ಮತ್ತು ಬೋಯಿಂಗ್ ಸಂಸ್ಥೆಗಳ ಸಹಯೋಗದೊಡನೆ  ಯುನೈಟೆಡ್ ಲಾಂಚ್ ಅಲಾಯನ್ಸ್ ಸಮೂಹವು ಈ ರಾಕೆಟ್ ಉಡ್ಡಯನ ಮಾಡಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries