HEALTH TIPS

No title

              ಜಿಲ್ಲೆಯಲ್ಲಿ  60 ಶಾಲೆಗಳಿಗೆ ಮಾತ್ರ ಸ್ವಂತ ವಾಹನಗಳು
     ಕಾಸರಗೋಡಿನ 515 ಶಾಲೆಗಳಲ್ಲಿ  1.50 ಲಕ್ಷ  ಮಕ್ಕಳಿದ್ದರೂ ಸ್ವಂತ ವಾಹನ ಮರೀಚಿಕೆ
    ಕಾಸರಗೋಡು: ಜಿಲ್ಲೆಯಲ್ಲಿ  ಒಟ್ಟು  515 ಸರಕಾರಿ ಹಾಗೂ ಅನುದಾನಿತ ಶಾಲೆಗಳು ಕಾಯರ್ಾಚರಿಸುತ್ತಿವೆ. ಈ ಶಾಲೆಗಳಲ್ಲಿ  ಸುಮಾರು ಒಂದೂವರೆ ಲಕ್ಷದಷ್ಟು  ಮಂದಿ ವಿದ್ಯಾಥರ್ಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಇಷ್ಟು  ವಿದ್ಯಾಥರ್ಿಗಳಿರುವ ಜಿಲ್ಲೆಯ ಶಾಲೆಗಳ ಪೈಕಿ ಕೇವಲ 60 ಶಾಲೆಗಳು ಮಾತ್ರ ಸ್ವಂತ ವಾಹನಗಳನ್ನು  ಹೊಂದಿವೆ.
   ಜಿಲ್ಲೆಯಲ್ಲಿ  40ರಷ್ಟು  ಖಾಸಗಿ ಸಿಬಿಎಸ್ಇ ಶಾಲೆಗಳಿವೆ. ಒಂದು ಶಾಲೆಗೆ ಸರಾಸರಿ ಆರು ಬಸ್ಗಳಿವೆ. 26 ಬಸ್ಗಳು ಸ್ವಂತವಾಗಿರುವ ಸಿಬಿಎಸ್ಇ ಶಾಲೆ ಕುಂಬಳೆಯಲ್ಲಿದೆ. ಇಲ್ಲಿ  ಒಟ್ಟು  2,200 ಮಂದಿ ಮಕ್ಕಳು ಕಲಿಯುತ್ತಿದ್ದಾರೆ. ಆದರೆ ಸಾವಿರಾರು ಮಂದಿ ವಿದ್ಯಾಥರ್ಿಗಳು ಕಲಿಯುವ ಹೆಚ್ಚಿನ ಸರಕಾರಿ ಶಾಲೆಗಳಿಗೆ ಒಂದು ಬಸ್ ಕೂಡ ಇಲ್ಲ. 40 ಶಾಲೆಗಳಲ್ಲಾಗಿ ಒಟ್ಟು  32,000 ವಿದ್ಯಾಥರ್ಿಗಳು ಕಲಿಯುತ್ತಿರುವ ಸಿಬಿಎಸ್ಇ ಶಾಲೆಗಳಿಗೆ ಒಟ್ಟು  250ರಷ್ಟು  ಬಸ್ಗಳಿವೆ.
    ಸಾರ್ವಜನಿಕ ಶಿಕ್ಷಣದತ್ತ  ವಿದ್ಯಾಥರ್ಿಗಳನ್ನು  ಆಕಷರ್ಿಸಬೇಕಾದರೆ ಸ್ಮಾಟರ್್ ತರಗತಿ ಕೊಠಡಿ ಮಾತ್ರ ಸಾಲದು. ಸ್ವಂತ ವಾಹನಗಳು ಹಾಗೂ ಇತರ ಸೌಕರ್ಯಗಳು ಇರಬೇಕು. ಸರಕಾರಿ ಮತ್ತು  ಅನುದಾನಿತ ವಲಯಗಳಲ್ಲಿ  ಕಾಸರಗೋಡು ಶಿಕ್ಷಣ ಜಿಲ್ಲೆಯಲ್ಲಿ  84 ಪ್ರೌಢಶಾಲೆಗಳು, 44 ಸರಕಾರಿ ಶಾಲೆಗಳು ಇವೆ. ಆದರೆ ವಾಹನವಿರುವ ಸರಕಾರಿ ಪ್ರೌಢಶಾಲೆಗಳು ಕೇವಲ 2 ಮಾತ್ರ. ಕುಂಡಂಕುಯಿ ಸರಕಾರಿ ಹೈಯರ್ ಸೆಕೆಂಡರಿ ಶಾಲೆ, ನೆಲ್ಲಿಕುಂಜೆ ಸರಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಗಳು ಮಾತ್ರ ಸ್ವಂತ ಬಸ್ ಹೊಂದಿವೆ.
   ಈ ಶಿಕ್ಷಣ ಜಿಲ್ಲೆಯ 19 ಅನುದಾನಿತ ಪ್ರೌಢಶಾಲೆಗಳಲ್ಲಿ  9 ಶಾಲೆಗಳಿಗೆ ಸ್ವಂತ ಬಸ್ಗಳಿವೆ ಎಂಬುದು ಆಶಾದಾಯಕ ವಿಚಾರ. ಕಾಂಞಂಗಾಡು ಶಿಕ್ಷಣ ಜಿಲ್ಲೆಯಲ್ಲಿ  52 ಸರಕಾರಿ ಪ್ರೌಢಶಾಲೆಗಳಲ್ಲಿ  16 ಶಾಲೆಗಳಿಗೆ ಸ್ವಂತ ವಾಹನ ಸೌಲಭ್ಯವಿದೆ. 16 ಪ್ರೌಢಶಾಲೆಗಳಿರುವ ಅನುದಾನಿತ ವಲಯದಲ್ಲಿ  ನಾಲ್ಕು ಶಾಲೆಗಳಿಗೆ ಮಾತ್ರ ಸ್ವಂತ ವಾಹನವಿದೆ.
    ಇದೇ ವೇಳೆ ಪ್ರಾಥಮಿಕ ಶಾಲೆಗಳ ಸ್ಥಿತಿ ಶೋಚನೀಯವಾಗಿದೆ. 40 ಶಾಲೆಗಳಿರುವ ಬೇಕಲ ಉಪ ಜಿಲ್ಲೆಯಲ್ಲಿ, 64 ಶಾಲೆಗಳಿರುವ ಮಂಜೇಶ್ವರ ಉಪಜಿಲ್ಲೆಯಲ್ಲಿ, 71 ಶಾಲೆಗಳಿರುವ ಕುಂಬಳೆ ಉಪಜಿಲ್ಲೆಯಲ್ಲಿ  ಒಂದೇ ಒಂದು ಸರಕಾರಿ ಶಾಲೆಗೂ ಸ್ವಂತ ವಾಹನವಿಲ್ಲ. ಮಂಜೇಶ್ವರ ಶಿಕ್ಷಣ ಉಪಜಿಲ್ಲೆಯಲ್ಲಿ  ಎರಡು, ಬೇಕಲದಲ್ಲಿ  ಆರು ಅನುದಾನಿತ ಶಾಲೆಗಳಿಗೆ ಸ್ವಂತ ವಾಹನವಿದೆ. ಕುಂಬಳೆ ಉಪಜಿಲ್ಲೆಯಲ್ಲಿ  ಎರಡು ಶಾಲೆಗಳಿಗೆ ವಾಹನವಿದೆ.
   ಕುಂಬಳೆ ಉಪಜಿಲ್ಲೆಯಲ್ಲಿ  ಎರಡು ಶಾಲೆಗಳು ಶಾಸಕರ ನಿಧಿಯಿಂದ ವಾಹನ ಧನಸಹಾಯಕ್ಕೆ ಅಜರ್ಿ ಸಲ್ಲಿಸಿವೆ. 54 ಶಾಲೆಗಳಿರುವ ಚೆರುವತ್ತೂರು ಉಪಜಿಲ್ಲೆಯಲ್ಲಿ  ಐದು ಅನುದಾನಿತ ಶಾಲೆಗಳಿಗೆ ವಾಹನಗಳಿವೆ. ಪಾಡಿಕ್ಕೀಲಿಲ್ ಸರಕಾರಿ ಶಾಲೆಗೆ ವಾಹನ ಸೌಕರ್ಯ ಕಲ್ಪಿಸಲಾಗಿದೆ. ಬೇರೆ ಯಾವುದೇ ಸರಕಾರಿ ಶಾಲೆಗೆ ವಾಹನವಿಲ್ಲ. ಚಿತ್ತಾರಿಕ್ಕಲ್ ಉಪಜಿಲ್ಲೆಯಲ್ಲಿ  36 ಸರಕಾರಿ ಶಾಲೆಗಳಿದ್ದು, 6 ಶಾಲೆಗಳಿಗೆ ವಾಹನವಿದೆ. ಹೊಸದುರ್ಗ ಉಪಜಿಲ್ಲೆಯಲ್ಲಿ  56 ಸರಕಾರಿ ಶಾಲೆಗಳಿದ್ದು, 9 ಶಾಲೆಗಳಿಗೆ ವಾಹನವಿದೆ. ಕಾಸರಗೋಡು ಉಪಜಿಲ್ಲೆಯಲ್ಲಿ  74 ಶಾಲೆಗಳಿದ್ದು, 10 ಶಾಲೆಗಳಿಗೆ ವಾಹನ ಸೌಲಭ್ಯ ಮಾಡಲಾಗಿದೆ.
   ಅಂಗಡಿಮೊಗರು ಸರಕಾರಿ ಹೈಯರ್ ಸೆಕೆಂಡರಿ ಶಾಲೆ, ಹೇರೂರು ಮೀಪಿರಿ ಸರಕಾರಿ ಹೈಯರ್ ಸೆಕೆಂಡರಿ ಶಾಲೆಗೆ ಅನೇಕ ಮಂದಿ ಮಕ್ಕಳು ಕಿಲೋ ಮೀಟರ್ಗಳಷ್ಟು  ದೂರದಿಂದ ಬರುತ್ತಾರೆ. ಬದಿಯಡ್ಕ ಮುಳ್ಳೇರಿಯ, ಮುಂತಾದೆಡೆಗಳ ಶಾಲೆಗಳಿಗೂ ವಾಹನ ಸೌಕರ್ಯ ಇಲ್ಲದಿರುವುದರಿಂದ ಗ್ರಾಮೀಣ ವಲಯದ ವಿದ್ಯಾಥರ್ಿಗಳು ಸಮಸ್ಯೆ ಅನುಭವಿಸುವಂತಾಗಿದೆ. ರಾಷ್ಟ್ರೀಯ ಹೆದ್ದಾರಿ ಮೊದಲಾದ ಪ್ರಧಾನ ರಸ್ತೆಯ ಪಕ್ಕದಲ್ಲೇ ಶಾಲೆಗಳಿದ್ದರೆ ಅಂತಹ ಶಾಲೆಗಳಿಗೆ ಸ್ವಂತ ವಾಹನ ಅಗತ್ಯವಿಲ್ಲ  ಎಂಬ ನಿಲುವು ತಪ್ಪು  ಎಂದು ಸಿಬಿಎಸ್ಇ ಅಧಿಕಾರಿಗಳು ಹೇಳಿದ್ದಾರೆ. ಜಿಲ್ಲೆಯಲ್ಲಿ  ಐದು-ಹತ್ತು  ವಾಹನಗಳಿರುವ ಖಾಸಗಿ ಶಾಲೆಗಳು ರಾಷ್ಟ್ರೀಯ ಹೆದ್ದಾರಿಯ 100-200 ಮೀಟರ್ ದೂರದಲ್ಲಿದೆ. ವಾಹನಗಳು ಮಕ್ಕಳ ಹೆತ್ತವರನ್ನು  ಶಾಲೆಗೆ ಆಕಷರ್ಿಸುವ ಪ್ರಧಾನ ವ್ಯವಸ್ಥೆಯಾಗಿದೆ.
     ಕಿ.ಮೀ.ಗಳಷ್ಟು  ನಡೆದೇ ಶಾಲೆಗೆ ಪ್ರಯಣ : ಮಂಜೇಶ್ವರ ಉಪಜಿಲ್ಲೆಯ ಪಾವೂರು, ದೈಗೋಳಿ, ಸುಳ್ಯಮೆ, ಮಚ್ಚಂಪಾಡಿ, ಪೈವಳಿಕೆಯಂತಹ ಪ್ರದೇಶಗಳಲ್ಲಿ  ಕಿಲೋ ಮೀಟರ್ಗಳಷ್ಟು  ನಡೆದುಕೊಂಡು ಶಾಲೆಗಳಿಗೆ ತೆರಳಬೇಕಾದ ಸ್ಥಿತಿಯಿದೆ. ಚಿತ್ತಾರಿಕ್ಕಲ್ ಉಪಜಿಲ್ಲೆಯ ಎಡಕ್ಕಾನಂದಲ್ಲಿ  9 ಕಿಲೋ ಮೀಟರ್ ನಡೆದೇ ಮಾಲೋತ್ ಕಸಬಾ ಶಾಲೆಗೆ ಆಗಮಿಸುವ ಮಕ್ಕಳಿದ್ದಾರೆ. ಕನರ್ಾಟಕ ಅರಣ್ಯಕ್ಕೆ ಹೊಂದಿಕೊಂಡಿರುವ ಕಮ್ಮಾಡಿ, ಕೋಟ್ಟಂಜೇರಿ, ಪಡಯಂಕಲ್ಸ್ , ಅತ್ತಿಯಡ್ಕ ಮೊದಲಾದೆಡೆಗಳ ವಿದ್ಯಾಥರ್ಿಗಳು ಮುಂಜಾನೆ 7 ಗಂಟೆಗೆ ನಡೆದುಕೊಂಡು ಬಂದು 10 ಗಂಟೆಗೆ ಶಾಲೆಗೆ ತಲುಪುತ್ತಾರೆ. ಪ್ರಯಾಣ ಸೌಕರ್ಯ ಇಲ್ಲದಿರುವುದರಿಂದ ಅರ್ಧದಲ್ಲೇ ಶಿಕ್ಷಣ ಮೊಟಕುಗೊಳಿಸಿದ ಹಲವಾರು ವಿದ್ಯಾಥರ್ಿಗಳು ಈ ಪ್ರದೇಶದಲ್ಲಿದ್ದಾರೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries