ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ರಾಷ್ಟ್ರಪತಿ ಗೈರು, 68 ವಿಜೇತರ ಬಹಿಷ್ಕಾರದ ನಡುವೆ ನಡೆದ ಪ್ರಶಸ್ತಿ ಪ್ರದಾನ ಸಮಾರಂಭ
ನವದೆಹಲಿ: 65ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭವನ್ನು 68ಕ್ಕೂ ಅಧಿಕ ಪ್ರಶಸ್ತಿ ಪುರಸ್ಕೃತರು ಬಹಿಷ್ಕಾರ ಹಾಕಿದ್ದು ಬಹಿಷ್ಕಾರದ ನಡುವೆಯೇ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.
ದೆಹಲಿಯ ವಿಜ್ಞಾನ ಭವನದಲ್ಲಿ ಗುರುವಾರ ನಡೆದ ಸಮಾರಂಭದಲ್ಲಿ ಶಿಷ್ಟಾಚಾರ ಬದಲಾವಣೆ ಮಾಡಿರುವುದು ವಿಜೇತರ ಸಿಟ್ಟಿಗೆ ಕಾರಣವಾಗಿತ್ತು. ಶ್ರೇಷ್ಠ ನಟ, ನಟಿ, ನಿದರ್ೇಶಕ, ಶ್ರೇಷ್ಠ ಚಿತ್ರ ಹೀಗೆ ಪ್ರಮುಖ 11 ಪ್ರಶಸ್ತಿಗಳನ್ನು ಮಾತ್ರ ಈ ಬಾರಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪ್ರದಾನ ಮಾಡಿದ್ದರು. ನಂತರ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವೆ ಸ್ಮೃತಿ ಇರಾನಿ ನೀಡಿದ್ದು ಇದನ್ನು ಹಲವು ವಿಜೇತರು ಬಹಿಷ್ಕರಿಸಿದರು.
ಖ್ಯಾತ ಗಾಯಕ ಯೇಸುದಾಸ್, ನಿದರ್ೇಶಕ ಜಯರಾಜ್, ನಾಗರಾಜ್ ಮಂಜುಲೆ ಸೇರಿದಂತೆ 68 ಪ್ರಶಸ್ತಿ ಪುರಸ್ಕೃತರು ಪ್ರಶಸ್ತಿ ಪ್ರದಾನ ಸಮಾರಂಭವನ್ನು ಬಹಿಷ್ಕಾರಿಸಿದ್ದಾರೆ. ಇಷ್ಟೆಲ್ಲಾ ವಿವಾದದ ನಡುವೆಯೂ ಪ್ರಶಸ್ತಿಗಳನ್ನು ಸ್ಮೃತಿ ಇರಾನಿ ಪ್ರದಾನ ಮಾಡಿದರು.