ಕುಂಬಳೆ ಕಣಿಪುರ ಕ್ಷೇತ್ರದಲ್ಲಿ 6ನೇ ವರ್ಷದ ಶ್ರೀಮದ್ ಭಾಗವತ ಯಜ್ಞ
ಕುಂಬಳೆ: ತುಳುನಾಡಿನ ಖ್ಯಾತ ಸೀಮೆಗಳಲ್ಲೊಂದಾದ ಕುಂಬಳೆ ಸೀಮೆಯ ನಾಲ್ಕು ಪ್ರಧಾನ ದೇವಾಲಯಗಳಲ್ಲಿ ಒಂದಾದ ಕುಂಬಳೆ ಕಣಿಪುರ ಶ್ರೀಗೋಪಾಲಕೃಷ್ಣ ಕ್ಷೇತ್ರದಲ್ಲಿ ಸಮಾಜ ಮತ್ತು ಜೀವಕೋಟಿಗಳ ಸೌಖ್ಯ ಸಮಾಧಾನಗಳಿಗೆ ವಿವಿಧ ಕಾರ್ಯಚಟುವಟಿಕೆಗಳನ್ನು ಅನುಷ್ಠಾನಗೊಳಿಸಿ ಭಗವತ್ ಸಂಪ್ರೀತಿಗೆ ಬೇಡಿಕೊಳ್ಳಲಾಗುತ್ತಿದ್ದು, ಕಳೆದ ಐದು ವರ್ಷಗಳಿಂದ ಶ್ರೀಮದ್ ಭಾಗವತ ಸಪ್ತಾಹ ಯಶಸ್ವಿಯಾಗಿ ನೆರವೇರಿದೆ. ಪ್ರಸ್ತುತ ವರ್ಷವೂ ಶ್ರೀಮದ್ ಭಾಗವತ ಸಪ್ತಾಹವನ್ನು ಮೇ. 16 ರಿಂದ 23ರ ವರೆಗೆ ಭಜಕ ಜನರ ಸಹಕಾರದೊಂದಿಗೆ ಹಮ್ಮಿಕೊಳ್ಳಲಾಗಿದೆ.
ಶ್ರೀಕ್ಷೇತ್ರದ ತಂತ್ರಿವರ್ಯ ಬ್ರಹ್ಮಶ್ರೀದೇಲಂಪಾಡಿ ಬಾಲಕೃಷ್ಣ ತಂತ್ರಿಗಳ ನಿದರ್ೇಶನದಂತೆ ಶ್ರೀಮದ್ ಭಾಗವತ ಸಪ್ತಾಹವನ್ನು ರಾಷ್ಟ್ರಮಟ್ಟದಲ್ಲೇ ಗುರುತಿಸಿಕೊಂಡಿರುವ ಹಿರಿಯ ವಿದ್ವಾಂಸ, ಭಾಗವತ ಪ್ರೇಮಿ ಪ್ರೊ. ಬ್ರಹ್ಮಶ್ರೀ ಕೆ.ನಾರಾಯಣ ಪೋತಿ ಯಜ್ಞಾಚಾರ್ಯರಾಗಿ ಸಪ್ತಾಹವನ್ನು ನಡೆಸಿಕೊಡುವರು. ಪಾರಾಯಣದಲ್ಲಿ ಬ್ರಹ್ಮಶ್ರೀ ಹರಿನಾರಾಯಣ ಮಯ್ಯ ಸಹಕರಿಸುವರು.
ಶ್ರೀಮದ್ ಭಾಗವತ ಸಪ್ತಾಹದ ಅಂಗವಾಗಿ ಮೇ.16 ರಂದು ಸಂಜೆ 5ಕ್ಕೆ ಯಜ್ಞಾಚಾರ್ಯ ಪ್ರೊ.ಕೆ. ನಾರಾಯಣ ಪೋತ್ತಿ ಹಾಗೂ ತಂತ್ರಿವರ್ಯ ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿವರ್ಯರು ಶ್ರೀಕಣಿಪುರ ಕ್ಷೇತ್ರಕ್ಕೆ ಆಗಮಿಸಲಿದ್ದು, ಅವರನ್ನು ಪೂರ್ಣಕುಂಭಗಳೊಂದಿಗೆ ಸ್ವಾಗತಿಸಲಾಗುವುದು. 5.30ಕ್ಕೆ ಭಾಗವತ ಯಜ್ಞಾರಂಭ ಸಮಾರಂಭ ನಡೆಯಲಿದ್ದು, ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿಗಳು ದೀಪ ಪ್ರಜ್ವಲನೆಗೈದು ಚಾಲನೆ ನೀಡುವರು. ಕಣಿಪುರ ಕ್ಷೇತ್ರದ ಪ್ರಧಾನ ಅರ್ಚಕ ವೇದಮೂತರ್ಿ ಮಾಧವ ಅಡಿಗ ಉಪಸ್ಥಿತರಿದ್ದು ಮಾತನಾಡುವರು. ಯಜ್ಞಾಚಾರ್ಯ ಬ್ರಹ್ಮಶ್ರೀ ಪ್ರಿ.ಕೆ ನಾರಾಯಣನ್ ಪೋತ್ತಿ ಉಪಸ್ಥಿತರಿರುವರು.
ಮೇ.17 ರಮದು ಬೆಳಿಗ್ಗೆ 6 ಕ್ಕೆ ಗಣಪತಿಹವನ, ಹರಿನಾಮ ಸಂಕೀರ್ತನೆ, ವಿಷ್ಣು ಸಹಸ್ರನಾಮ, 7.45 ಕ್ಕೆ ಗ್ರಂಥ ನಮಸ್ಕಾರ, ಬಳಿಕ 8 ರಿಂದ 12ರ ತನಕ ಹಾಗೂ ಅಪರಾಹ್ನ 3 ರಿಂದ 6ರ ತನಕ ಶ್ರೀಮದ್ ಭಾಗವತ ಪಾರಾಯಣ ಹಾಗೂ ಪ್ರವಚನ ವರಾಹಾವತಾರದ ವಿವರಣೆಗಳೊಂದಿಗೆ ನಡೆಯಲಿದೆ. 6 ರಿಂದ 7ರ ತನಕ ಯಜ್ಞಾಚಾರ್ಯರಿಂದ ಉಪನ್ಯಾಸ, ನಾಮಸಂಕೀರ್ತನೆ, ದೀಪಾರಾಧನೆ ನಡೆಯಲಿದೆ. ಮೇ. 18 ರಂದು ಕಪಿಲಾವತಾರ, 19 ರಂದು ನರಸಿಂಹಾವತಾರ, 20 ರಂದು ಶ್ರೀಕೃಷ್ಣಾವತಾರ, 21 ರಂದು ರುಕ್ಮಿಣೀಸ್ವಯಂವರ ವಿಶೇಷ ಉಪನ್ಯಾಸ, ಮೆರವಣಿಗೆ ನಡೆಯಲಿದೆ. 22 ರಂದು ಕುಚೇಲಾಗಮನ, ಹಂಸಾವತಾರ, 23 ರಂದು ಸ್ವಧಾಮಗಮನ ಹಾಗೂ ಸಪ್ತಾಹ ಯಜ್ಞದ ಸಮರ್ಪಣೆ ಮತ್ತು ಪ್ರಸಾದ ವಿತರಣೆ ನಡೆಯಲಿದೆ.
ಈ ಬಗ್ಗೆ ಭಾನುವಾರ ಕುಂಬಳೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕಣಿಪುರ ಕ್ಷೇತ್ರದ ಕಾರ್ಯನಿರ್ವಹಣಾಧಿಕಾರಿ ಹಾಗೂ ಭಕ್ತ ಜನ ಸಮಿತಿ ಪದಾಧಿಕಾರಿಗಳು ಕಾರ್ಯಕ್ರಮ ಯಶಸ್ವಿಗೊಳಿಸಿ ಸರ್ವರ ಒಳಿತಿಗೆ ಸಹಕರಿಸುವಂತೆ ವಿನಂತಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಕ್ಷೇತ್ರದ ಕಾರ್ಯನಿರ್ವಹಣಾಧಿಕಾರಿ ರಾಮನಾಥ ಶೆಟ್ಟಿ, ಪ್ರಬಂಧಕ ರಾಜಶೇಖರ್, ಭಕ್ತಜನ ಸಮಿತಿಯ ಪದಾಧಿಕಾರಿಗಳಾದ ಸುಕುಮಾರ ಎಂ.ಸಿ, ದಯಾನಂದ ರಾವ್ ಕುಂಬಳೆ, ವಿಕ್ರಂ ಪೈ ಕುಂಬಳೆ, ಜಯಕುಮಾರ್, ವಿವೇಕಾನಂದ ಭಕ್ತ ಕುಂಬಳೆ ಉಪಸ್ಥಿತರಿದ್ದು ಮಾಹಿತಿ ನೀಡಿದರು.